IPL Auction 2023: ಹರಾಜಿನಲ್ಲಿ ಈ ಮೂವರೇ ಮುಂಬೈ ಇಂಡಿಯನ್ಸ್ ಟಾರ್ಗೆಟ್
ಮುಂಬೈ ಇಂಡಿಯನ್ಸ್ ತಂಡ ಮತ್ತೊಮ್ಮೆ ಐಪಿಎಲ್ ಟ್ರೋಫಿ ಎತ್ತುವ ಕನಸು ಹೊಂದಿದೆ. ಈ ನಿಟ್ಟಿನಲ್ಲಿ ತಂಡ ಹಲವು ಮಾರ್ಪಾಡುಗಳನ್ನು ಮಾಡಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ. ಶುಕ್ರವಾರ ಮುಂಬೈ ಇಂಡಿಯನ್ಸ್ ತಂಡ ತನ್ನ ಹೊಸ ನಾಯಕನನ್ನು ಘೋಷಣೆ ಮಾಡಿತ್ತು.
ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿದೆ. ಸ್ಟಾರ್ ಆಲ್‌ರೌಂಡರ್ ತಂಡದ ಚುಕ್ಕಾಣಿ ಹಿಡಿದ ಮೇಲೆ ತಂಡ ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ. ಹೊಸ ನಾಯಕನ ಬೇಡಿಕೆಗೆ ತಕ್ಕಂತೆ ಮುಂಬೈ ತನ್ನ ತಂಡವನ್ನು ರಚಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಐಪಿಎಲ್ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ನ ತಂತ್ರ ಹೇಗಿರಬಹುದು? 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ತಂಡವು ತನ್ನ ತಂಡಕ್ಕೆ ಯಾವ ಆಟಗಾರರನ್ನು ಸೇರಿಸಲು ಬಯಸುತ್ತದೆ? ಎಂಬುದು ಬಹು ಕುತೂಹಲ ಮೂಡಿಸಿದೆ. ಮುಂಬೈ ಇಂಡಿಯನ್ಸ್ ಹರಾಜಿನಲ್ಲಿ ಖರೀದಿಸಲು ಬಯಸುವ 3 ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.
ಜೆರಾಲ್ಡ್ ಕೊಯೆಟ್ಜಿ
ಮುಂಬೈ ಇಂಡಿಯನ್ಸ್ ತಂಡ ತನ್ನ ಬೌಲಿಂಗ್ ವಿಭಾಗಕ್ಕೆ ಬಲ ತುಂಬುವ ಪ್ಲ್ಯಾನ್ ಮಾಡಿಕೊಂಡಿದೆ. ಅದರಂತೆ ಸ್ಟಾರ್ ವೇಗದ ಬೌಲರ್ ಪ್ಲಸ್ ಬ್ಯಾಟರ್‌ಗೆ ಮುಂಬೈ ಗಾಳ ಹಾಕಲು ಸಿದ್ಧತೆ ನಡೆಸಿದೆ. ದುಬೈನಲ್ಲಿ ನಡೆಯಲಿರುವ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರರಿಗೆ ಮಣೆ ಹಾಕಲಿದೆ.

ಜೆರಾಲ್ಡ್ ಕೋಟ್ಜಿ ಅವರಿಗೆ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ನ ಬಾಜಿ ಕಟ್ಟುವ ಸಾಧ್ಯತೆ ಇದೆ.. ಜೆರಾಲ್ಡ್ ಕೋಟ್ಜಿ ವಿಶ್ವಕಪ್‌ನಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿಶೇಷವಾಗಿ, ಜೆರಾಲ್ಡ್ ಕೋಟ್ಜಿ ಅವರು ತಮ್ಮ ವೇಗದಿಂದಲೇ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ವಾಂಖೆಡೆ ಪಿಚ್‌ನಲ್ಲಿ ಜೆರಾಲ್ಡ್ ಕೋಟ್ಜಿ ಅವರ ವೇಗದಿಂದಾಗಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಮಾರಕವಾಗಬಹುದು. ಮುಂಬೈ ಇಂಡಿಯನ್ಸ್ ಹರಾಜಿನಲ್ಲಿ ಜೆರಾಲ್ಡ್ ಕೊಯೆಟ್ಜಿಗೆ ಹಣದ ಸುರಿಮಳೆ ಮಾಡುತ್ತದೆ ಎಂದು ನಂಬಲಾಗಿದೆ.
ಬ್ಯೂರಾನ್ ಹೆನ್ರಿಚ್ಸ್
ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಬ್ಯೂರಾನ್ ಹೆನ್ರಿಕ್ಸ್ ಅವರ ಪ್ರದರ್ಶನ ಅತ್ಯುತ್ತಮ. ಇದಲ್ಲದೇ ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಅವರು ನಿರಂತರವಾಗಿ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಬ್ಯೂರಾನ್ ಹೆನ್ರಿಕ್ಸ್ ಮುಂಬೈ ಇಂಡಿಯನ್ಸ್ ಮ್ಯಾನೇಜ್ ಮೆಂಟ್ ಆಯ್ಕೆಯಾಗಬಹುದು. ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಜೋಫ್ರಾ ಆರ್ಚರ್ ಅನ್ನು ಬಿಡುಗಡೆ ಮಾಡಿತ್ತು. ಆದರೆ, ಈ ತಂಡಕ್ಕೆ ಉತ್ತಮ ವೇಗದ ಬೌಲರ್‌ನ ಅಗತ್ಯವಿದೆ.

ವನಿಂದು ಹಸರಂಗ
ಕಳೆದ ಋತುವಿನಲ್ಲಿ, ವನಿಂದು ಹಸರಂಗಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಬೌಲ್ ಮಾಡಿದ್ದರು. ಆದರೆ ಹರಾಜಿಗೂ ಮುನ್ನ ವನೆಂದು ಹಸರಂಗ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಡುಗಡೆ ಮಾಡಿದೆ. ಈ ಮೂಲಕ ವನಿಂದು ಹಸರಂಗ ಹರಾಜಿನಲ್ಲಿ ಲಭ್ಯರಿರಲಿದ್ದಾರೆ. ಬೌಲಿಂಗ್ ಹೊರತುಪಡಿಸಿ, ವನಿಂದು ಹಸರಂಗ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಬಲ್ಲರು. ಮುಂಬೈ ಇಂಡಿಯನ್ಸ್ ಹರಾಜಿನಲ್ಲಿ ವನಿಂದು ಹಸರಂಗವನ್ನು ಸೇರಿಸಲು ಬಯಸುತ್ತದೆ ಎಂದು ನಂಬಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications