ಸಿಎಎ ವಿರುದ್ಧದ ಪ್ರತಿಭಟನೆ ಮಧ್ಯೆಯೂ ಐಪಿಎಲ್ ಹರಾಜಿಗೆ ಅಂತಿಮ ಸಿದ್ಧತೆ

ದೇಶಾದ್ಯಂತ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತಿಭಟನೆ ತಾರಕಕ್ಕೇರಿದೆ. ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುವ ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಪ್ರತಿಭಟನೆ ಜೋರಾಗಿದೆ. ಆದರೆ ಈ ಪ್ರತಿಭಟನೆಯ ಮಧ್ಯೆಯೂ ನಾಳೆ ಕೊಲ್ಕತ್ತಾದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳೂ ಕೂಡ ನಡೆದಿದೆ.
ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಪ್ರತಿಭಟನೆ ಹಿಂಸಾತ್ಮಕವಾಗಿ ಹೆಚ್ಚಿನ ಪರಿಣಾಮವನ್ನು ಬೀರದ ಕಾರಣ ನಿರಾತಂಕವಾಗಿ ನಡೆಯಲಿದೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಸಿಸಿಐ ಅಧಿಕಾರಿಗಳು ಪಿಟಿಐ ಸುದ್ಧಿ ಸಂಸ್ಥೆಗೆ ಹೇಳಿಕೆಯನ್ನು ನೀಡಿದ್ದು ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ. ಬುಧವಾರ ಮುಂಜಾನೆಯ ವೇಳೆಗೆ ಎಲ್ಲಾ ಫ್ರಾಂಚೈಸಿಗಳ ಪ್ರತಿನಿಧಿಗಳು ಕೊಲ್ಕತ್ತಾ ತಲುಪಲಿದ್ದಾರೆ ಎಂದು ಮಾಹಿತಯಿಯನ್ನು ನೀಡಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ 332 ಆಟಗಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಮತ್ತು ದಕ್ಷಿಣ ಆಫ್ರಿಕಾದ ಡೇಸ್ ಸ್ಟೇನ್‌ರಂತಾ ಆಟಗಾರರೂ ಭಾಗಿಯಾದ್ದು ಇವರು ಬೇಸ್ ಪ್ರೈಸ್ 2 ಕೋಟಿ ವಿಭಾಗದಲ್ಲಿದ್ದಾರೆ.
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳಲ್ಲಿ ಕೇವಲ 73 ಸ್ಥಾನಗಳಷ್ಟೇ ಭರ್ತಿಯಾಗಬೇಕಿದೆ. ಇದರಲ್ಲಿ ಕೇವಲ 29 ವಿದೇಶಿ ಆಟಗಾರರಿಗಷ್ಟೇ ಅವಕಾಶ ದೊರೆಯಲಿದೆ. ಹೀಗಾಗಿ ಯಾವೆಲ್ಲಾ ಪ್ರಮುಖ ಆಟಗಾರರು ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications