2 ಕೋಟಿಗೆ ಹರಾಜಾದ U-19 ವಿಶ್ವಕಪ್ ಹೀರೋ ರಾಜ್ ಬಾವಾ: ಅಜ್ಜ ಹಾಕಿ ಚಾಂಪಿಯನ್, ತಂದೆ ಯುವಿಗೆ ಕೋಚ್!

ಐಪಿಎಲ್ 2022ರ ಹರಾಜಿನಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಅತ್ಯುತ್ತಮ ಮೊತ್ತಕ್ಕೆ ಹರಾಜಾಗಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಮುಕ್ತಾಯ ಕಂಡಿರುವ ಅಂಡರ್ 19 ವಿಶ್ವಕಪ್ ತಂಡದ ಕೆಲ ಆಟಗಾರರು ಅದ್ಭುತ ಬೇಡಿಕೆಯನ್ನು ಪಡೆದುಕೊಂಡಿದ್ದು ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಅದರಲ್ಲೂ ರಾಜವರ್ಧನ್ ಹಂಗರ್ಗೇಕರ್ ಹಾಗೂ ರಾಜ್ ಬಾವಾ ಕೋಟಿ ಮೊತ್ತವನ್ನು ದಾಟಿ ಹರಾಜಿನಲ್ಲಿ ಮಿಂಚಿದ್ದಾರೆ.
ಅದರಲ್ಲೂ ಕಳೆದ ಅಂಡರ್ 19 ವಿಶ್ವಕಪ್ ಹೀರೋ ರಾಜ್ ಬಾವಾ ತನ್ನ ಆಲ್‌ರೌಂಡರ್ ಪ್ರದರ್ಶನದಿಂದಾಗಿ ಸಹಜವಾಗಿಯೇ ಕುತೂಹಲ ಕೆಳರಳಿಸಿದ್ದರು. ಹಾಗಾಗಿ ನಿರೀಕ್ಷೆಯಂತೆಯೇ ರಾಜ್ ಬಾವಾಗೆ ಹರಾಜಿನಲ್ಲಿ ಸಾಕಷ್ಟು ಬೇಡಿಕೆ ಉಂಟಾಗಿತ್ತು. ಇದರ ಪರಿಣಾಮವಾಗಿ ಹರಾಜಿನಲ್ಲಿ ರಾಜ್ ಬಾವಾ ಬರೊಬ್ಬರಿ 2 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ.
ಹಾಗಾದರೆ ಈ ರಾಜ್ ಬಾವಾ ಯಾರು? ತಾತನ ಕಾಲದಲ್ಲಿಯೇ ಭಾರತದ ಕ್ರೀಡಾಲೋಕದಲ್ಲಿ ಛಾಪು ಮೂಡಿಸಿದ ಕುಟುಂಬದಿಂದ ಬಂದ ಈ ಆಟಗಾರನ ಪರಿಚಯ ಇಲ್ಲಿದೆ.

ಯಾರು ಈ ರಾಜ್ ಬಾವಾ?
ಭಾರತೀಯ ಕ್ರಿಕೆಟ್ ಲೋಕದಲ್ಲಿ ರಾಜ್ ಬಾವಾ ಈಗ ಭವಿಷ್ಯದ ಆಟಗಾರನೆಂಬ ಭರವಸೆ ಮೂಡಿಸುತ್ತಿದ್ದಾರೆ. ಕಳೆದ ಅಂಡರ್ 19 ವಿಶ್ವಕಪ್‌ನಲ್ಲಿ ನೀಡಿದ ಆಲ್‌ರೌಂಡರ್ ಪ್ರದರ್ಶನದ ಮೂಲಕ ಭಾರತೀಯ ಕ್ರೀಡಾಪ್ರೇಮಿಗಳ ಗಮನಸೆಳೆಯುತ್ತಿದ್ದಾರೆ ಈ ರಾಜ್ ಬಾವಾ. ಅದೇ ಪ್ರದರ್ಶನದ ಕಾರಣಕ್ಕೆ ಐಪಿಎಲ್‌ನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗಿದ್ದಾರೆ. ಆದರೆ ಈ ರಾಜ್ ಬಾವಾ ಕುಟುಂಬ ಭಾರತೀಯ ಕ್ರೀಡಾಲೋಕಕ್ಕೆ ಅಪರಿಚಿತವೇನಲ್ಲ ಎಂಬುದು ಕುತೂಹಲಕಾರಿ ಮಾಹಿತಿ. ಹೌದು, ರಾಜಾ ಬಾವಾ ಅಜ್ಜ ಹಾಕಿ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ. ಅದರಲ್ಲೂ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡ ಭಾರತೀಯ ತಂಡದ ಭಾಗವಾಗಿದ್ದರು ರಾಜ್ ಭಾವಾ ಅಜ್ಜ ತರ್ಲೋಚನ್ ಸಿಂಗ್ ಬಾವಾ.
ಭಾರತ ಸ್ವಾತಂತ್ರ್ಯಗಳಿಸಿದ ಮರುವರ್ಷವೇ ಅಂದರೆ 1948ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಒಲಿಂಪಿಕ್ಸ್ ಟೂರ್ನಿ ಆಯೋಜನೆಯಾಗಿತ್ತು. ಈ ಟೂರ್ನಿಯಲ್ಲಿ ತರ್ಲೋಚನ್ ಸಿಂಗ್ ಎರಡು ಗೋಲು ಬಾರಿಸಿದ್ದರು. ಇದರಲ್ಲಿ ಒಂದು ಗೋಲು ಗ್ರೇಟ್ ಬ್ರಿಟನ್ ವಿರುದ್ಧ ಫೈನಲ್‌ನಲ್ಲಿ ಭಾರತ 4-0 ಅಂತರದಿಂದ ಗೆದ್ದ ಪಂದ್ಯದಲ್ಲಿ ದಾಖಲಾಗಿತ್ತು. ಈ ಮೂಲಕ ಸ್ವತಂತ್ರ್ಯ ಭಾರತದ ಪ್ರಥಮ ಚಿನ್ನದ ಗೋಲು ಗಳಿಸಿತ್ತು.

ಯುವರಾಜ್ ಸಿಂಗ್‌ಗೆ ಕೋಚ್ ಆಗಿದ್ದರು ರಾಜ್ ಬಾವಾ ತಂದೆ
ಇನ್ನು ಬರವಸೆಯ ಆಟಗಾರ ರಾಜ್ ಬಾವಾ ಕ್ರೀಡಾ ಹಿನ್ನೆಲೆ ಅಜ್ಜನ ಕಾಲಕ್ಕೆ ಅಂತ್ಯವಾಗುವುದಿಲ್ಲ. ರಾಜ್ ಬಾವಾ ತಂದೆ ಕೂಡ ಕ್ರೀಡಾಲೋಕದಲ್ಲಿ ಖ್ಯಾತಿಗಳಿಸಿದ್ದಾರೆ. ಕ್ರಿಕೆಟ್ ಕೋಚ್ ಆಗಿ ರಾಜ್ ಬಾವಾ ತಂದೆ ಸುಖ್ವಿಂದರ್ ಬಾವಾ ಖ್ಯಾತರಾಗಿದ್ದಾರೆ. ಭಾರತ ತಂಡದ ಪ್ರಖ್ಯಾತ ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ವೇಗಿ ವಿಆರ್‌ವಿ ಸಿಂಗ್‌ಗೆ ಕೂಡ ಸುಖ್ವಿಂದರ್ ಸಿಂಗ್ ಕೋಚ್ ಆಗಿದ್ದರು.

ಯುವರಾಜ್ ಸಿಂಗ್‌ಗೆ ದೊಡ್ಡ ಅಭಿಮಾನಿ ರಾಜ್ ಬಾವಾ
ಇನ್ನು ಈಗಷ್ಟೇ ಕ್ರಿಕೆಟ್ ಲೋಕದಲ್ಲಿ ಛಾಪು ಮೂಡಿಸುತ್ತಿರುವ ರಾಜ್ ಬಾವಾ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ಅವರ ಅಪ್ಪಟ ಅಭಿಮಾನಿಯೂ ಹೌದು. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ರಾಜ್ ಬಾವಾ 2002ರ ನವೆಂಬರ್ 12ರಂದು ಹಿಮಾಚಲ ಪ್ರದೇಶದ ನಾಹನ್ ನಗರದಲ್ಲಿ ಜನಿಸಿದರು. ಅಂಡರ್ 19 ವಿಶ್ವಕೊ್ ನಂತರ ಈಗ ಐಪಿಎಲ್ ಎಂಬ ದೊಡ್ಡ ವೇದಿಕೆಯನ್ನು ಪಡೆದುಕೊಂಡಿರುವ ರಾಜ್ ಬಾವಾ ಭವಿಷ್ಯದಲ್ಲಿ ಭಾರತೀಯ ತಂಡಕ್ಕೆ ಸಮರ್ಥ ಆಟಗಾರನಾಗುವುದರಲ್ಲಿ ಅನುಮಾನವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications