Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: 14 ವರ್ಷದ ನಂತರ ತವರು ತಂಡಕ್ಕೆ ಸೇರಿಕೊಳ್ಳಲಿದ್ದಾರಾ ಹರ್ಭಜನ್?

IPL Auction: Will Harbhajan Singh find home at Punjab Kings in 14th year?

ಭಾರತೀಯ ಕ್ರಿಕೆಟ್‌ನ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಈ ಬಾರಿಯ ಮಿನಿ ಹರಾಜಿನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಬೇಕಿದ್ದ ಹರ್ಭಜನ್ ಸಿಂಗ್ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಬಳಿಕ ಸಿಎಸ್‌ಕೆ ಫ್ರಾಂಚೈಸಿ ಹರ್ಣಜನ್ ಸಿಂಗ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಿತು.

2018ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಚೆನ್ನೈ ಪರವಾಗಿ ಕಣಕ್ಕಿಳಿದಿದ್ದ ಹರ್ಭಜನ್ 2019ರಲ್ಲೂ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಕಳೆದ ಬಾರಿ ವೈಯ್ಯಕ್ತಿಕ ಕಾರಣವನ್ನು ನೀಡಿ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದರು. ಸುರೇಶ್ ರೈನಾ ಕೂಡ ಈ ಟೂರ್ನಿಯಲ್ಲಿ ಅಂತಿಮ ಹಂತದಲ್ಲಿ ತಂಡದಿಂದ ಹೊರಗುಳಿದಿದ್ದರು.

ಹರ್ಭಜನ್ ಸಿಂಗ್ ಕಳೆದ 13 ಆವೃತ್ತಿಗಳಲ್ಲಿ 4 ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಆರಂಭದ 10 ಆವೃತ್ತಿಗಳಲ್ಲಿ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಆದರೆ ತವರು ತಂಡ ಪಂಜಾಬ್ ಪರವಾಗಿ ಒಂದು ಬಾರಿಯೂ ಹರ್ಭಜನ್ ಕಣಕ್ಕಿಳಿದಿಲ್ಲ. ಹೀಗಾಗಿ ಹರ್ಭಜನ್ ಸಿಂಗ್

ಈ ಕನಸು ಈ ಬಾರಿ ನಿಜವಾಗುತ್ತಾ ಎಂಬುದು ಕುತೂಹಲ ಮೂಡಿಸಿದೆ. ಹರ್ಭಜನ್ ಸಿಂಗ್ ಅವರನ್ನು ಈ ಬಾರಿಯಾದರೂ ಪಂಜಾಬ್ ಮೂಲದ ಫ್ರಾಂಚೈಸಿ ಈ ಬಾರಿಯ ಆವೃತ್ತಿಯಲ್ಲಿ ಹೆಸರು ಬದಲಾವಣೆ ಮಾಡಿಕೊಂಡಿರುವ ಪಂಜಾಬ್ ಕಿಂಗ್ಸ್ ಕೊಂಡುಕೊಳ್ಳಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.

ಹರ್ಭಜನ್ ಸಿಂಗ್ 2 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದಾರೆ. ಅನುಭವ ಮತ್ತು ವಿಕೆಟ್ ತೆಗೆಯಬಲ್ಲ ಸಾಮರ್ಥ್ಯಹೊಂದಿರುವ ಹರ್ಭಜನ್ ಮೇಲೆ ಪಂಜಾಬ್ ದೃಷ್ಟಿ ನೆಡಲಿದೆಯಾ ಎಂಬುದು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ. ಅನುಭವಿ ಸ್ಪಿನ್ನರ್‌ನ ಕೊರತೆಯನ್ನು ಎದುರಿಸುತ್ತಿರುವ ಪಂಜಾಬ್ ಹರ್ಭಜನ್ ಸಿಂಗ್ ಅನುಭವವನ್ನು ಪಡೆದುಕೊಳ್ಳಲಿದೆಯಾ ಎಂಬುದು ಕುತೂಹಲಮೂಡಿಸಿದೆ

Story first published: Thursday, February 18, 2021, 9:40 [IST]
Other articles published on Feb 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+