ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಹರಾಜು ದಿನಾಂಕ, ಸ್ಥಳ ನಿಗದಿ: ಬೆಂಗಳೂರಿಗೆ ತಪ್ಪಿದ ಅವಕಾಶ

IPL Auction Will Held On December 19

ನವದೆಹಲಿ, ಅಕ್ಟೋಬರ್ 01: ಐಪಿಎಲ್ 2020 ರ ಆವೃತ್ತಿಗೆ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಈ ಬಾರಿ ಐಪಿಎಲ್ ಹರಾಜು ಮೊದಲ ಬಾರಿಗೆ ಕೊಲ್ಕತ್ತದಲ್ಲಿ ನಡೆಯಲಿದೆ.

ಐಪಿಎಲ್ ಹರಾಜು ಪ್ರಕ್ರಿಯಿಯೆಯು ಡಿಸೆಂಬರ್ 19 ರಂದು ನಡೆಸಲು ತೀರ್ಮಾನಿಸಲಾಗಿದ್ದು, ಬಹುತೇಕ ಪ್ರತಿಬಾರಿ ಐಪಿಎಲ್ ಹರಾಜು ಬೆಂಗಳೂರಿನಲ್ಲಿ ನಡೆಯುತ್ತಿತ್ತು, ಆದರೆ ಮೊದಲ ಬಾರಿಗೆ ಈ ಐಪಿಎಲ್ ಹರಾಜು ಕೊಲ್ಕತ್ತದಲ್ಲಿ ನಡೆಯುತ್ತಿದೆ.

ಎಲ್ಲಾ ಐಪಿಎಲ್ ತಂಡಗಳಿಗೆ ಟ್ರೇಡಿಂಗ್ ವಿಂಡೋ ನವೆಂಬರ್ 14 ಕ್ಕೆ ಕೊನೆ ಆಗಲಿದ್ದು, ಹೊಸ ತಂಡದ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ.

85 ಕೋಟಿ ರೂಪಾಯಿ ಹಣ ವೆಚ್ಚ ಮಾಡಿ ತಂಡವನ್ನು ಖರೀದಿಸುವ ಅವಕಾಶ ಪ್ರತಿ ತಂಡಕ್ಕೆ ಇದೆ. ಆರ್‌ಸಿಬಿ ಬಳಿ ಪ್ರಸ್ತುತ ಅತ್ಯಂತ ಕಡಿಮೆ ಹಣ ಇದೆ. ಆರ್‌ಸಿಬಿ ಬಳಿ 1.80 ಕೋಟಿ ರೂಪಾಯಿ ಹಣ ಇದೆ.

ಚೆನ್ನೈ ಸೂಪರ್ ಕಿಂಗ್ಸ್ 3.2 ಕೋಟಿ, ಡೆಲ್ಲಿ ಕ್ಯಾಪಿಟಲ್ 7.7 ಕೋಟಿ, ಕಿಂಗ್ಸ್ ಇಲೆವೆನ್ ಪಂಜಾಬ್ ಬಳಿ 3.7 ಕೋಟಿ, ಕೊಲ್ಕತ್ತ ನೈಟ್ ರೈಡರ್ಸ್ ಬಳಿ 6.05 ಕೋಟಿ, ಮುಂಬೈ ಇಂಡಿಯನ್ಸ್ ಬಳಿ 3.55 ಕೋಟಿ, ರಾಜಸ್ಥಾನ ರಾಯಲ್ಸ್‌ ಬಳಿ 7.15 ಕೋಟಿ, ಸನ್‌ರೈಸಸ್ ಹೈದರಾಬಾದ್ ಬಳಿ 5.30 ಕೋಟಿ ಹಣ ಬಾಕಿ ಇದೆ.

Story first published: Tuesday, October 1, 2019, 20:12 [IST]
Other articles published on Oct 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X