ಐಪಿಎಲ್ ಬೆಟ್ಟಿಂಗ್: ಸಲ್ಮಾನ್ ಸೋದರ ಅರ್ಬಾಜ್ ಗೆ ಪೊಲೀಸರಿಂದ ಸಮನ್ಸ್

ಬೆಂಗಳೂರು, ಜೂನ್ 01 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಅರ್ಬಾಜ್ ಖಾನ್ ಗೆ ಥಾಣೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಬುಕ್ಕಿ ಸೋನು ಜಹಾನ್ ನನ್ನು ಥಾಣೆ ಪೊಲೀಸರು ವಿಚಾರಣೆಗೊಳಪಡಿಸಿದಾಗ ನಟ ಅರ್ಬಾಜ್ ಖಾನ್ ಅವರ ಹೆಸರನ್ನು ಹೇಳಿದ್ದಾನೆ . ಹೀಗಾಗಿ, ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ಅರ್ಬಾಜ್ ಖಾನ್ ಅವರ ಹೇಳಿಕೆಯನ್ನು ದಾಖಲಿಸಬೇಕಾಗುತ್ತದೆ.
ಮೇ 16ರಂದು ಥಾಣೆ ಕ್ರೈಂ ಬ್ರ್ಯಾಂಚ್ ಪೊಲೀಸರು ಡೊಬಿವಿಲಿಯ ಕಟ್ಟಡವೊಂದರ ಮೇಲೆ ದಾಳಿ ನಡೆಸಿ, ಐಪಿಎಲ್ ಬೆಟ್ಟಿಂಗ್ ಜಾಲವನ್ನು ತುಂಡರಿಸಿ, ಮೂವರನ್ನು ಬಂಧಿಸಿದ್ದರು. ನಂತರ ಜಲಾನ್(41) ಎಂಬಾತನನ್ನು ಕಲ್ಯಾಣ್ ಸೆಷನ್ಸ್ ಕೋರ್ಟ್ ಆವರಣದಲ್ಲಿ ಹಿಡಿಯಲಾಗಿತ್ತು. ನಂತರ ಸುಮಾರು 100 ಕೋಟಿ ರು ಬೆಟ್ಟಿಂಗ್ ಜಾಲದ ಬಗ್ಗೆ ಮಾಹಿತಿ ಹೊರ ಬಂದಿತ್ತು.
ದಾವೂದ್ ಗ್ಯಾಂಗಿನ ದುಬೈ ಘಟಕ ಹಾಗೂ ಅನಿಲ್ ತುಂಡಾ ಮತ್ತು ರಯೀಸ್ ಫರುಕಿ ಜತೆ ಜಲಾನ್ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹಿರಿಯ ಇನ್ಸ್ ಪೆಕ್ಟರ್ ಪ್ರದೀಪ್ ಶರ್ಮ ಹೇಳಿದ್ದಾರೆ. ಇತ್ತೀಚೆಗೆ ಅಲ್ ಜಜೀರಾ ಚಾನೆಲ್, ಪಿಚ್ ಫಿಕ್ಸಿಂಗ್ ಬಗ್ಗೆ ವರದಿ ಪ್ರಸಾರ ಮಾಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications