Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನವೆಂಬರ್ 9ರಂದು ಐಪಿಎಲ್ ಗೆ ಹೊಸ ತಂಡಗಳ ಸೇರ್ಪಡೆ

ನವದೆಹಲಿ, ಅ.29: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಿಂದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಬದಲಿಗೆ ಎರಡು ಹೊಸ ತಂಡಗಳು ನವೆಂಬರ್ 9ರಂದು ಸೇರಲಿದೆ. ಹೊಸ ತಂಡಗಳ ಆಯ್ಕೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹರಾಜು ಪ್ರಕ್ರಿಯೆಯನ್ನು ನಡೆಸಲಿದೆ.

ಚೆನ್ನೈ ಹಾಗೂ ರಾಜಸ್ಥಾನ್ ತಂಡಗಳು 2016 ಹಾಗೂ 2017ರ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲದ ಕಾರಣ ಹೊಸ ತಂಡಗಳನ್ನು ಆಯ್ಕೆ ಮಾಡಬೇಕಿದೆ. ನವೆಂಬರ್ 9ರಂದು ನಡೆಯುವ ಬಿಸಿಸಿಐ ಕಾರ್ಯಕಾರಿ ಸದಸ್ಯರ ಸಭೆ ನಂತರ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.[ವಿವೋ ಐಪಿಎಲ್: ಬಿಸಿಸಿಐ ನಿರ್ಣಯಗಳ ಡೀಟೈಲ್ಸ್]

Bidding process for 2 new teams to start after November 9

ಈಗ ಇರುವ ಫ್ರಾಂಚೈಸಿಗಳು: ಡೆಲ್ಲಿ ಡೇರ್ ಡೇವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ XI ಪಂಜಾಬ್.
ಚೆನ್ನೈ ಹಾಗೂ ರಾಜಸ್ಥಾನ್ ತಂಡಗಳು ಎರಡು ವರ್ಷ ಕಳೆದು ಮತ್ತೊಮ್ಮೆ ಐಪಿಎಲ್ ಸೇರಬಹುದಾಗಿದೆ. ಈ ಎರಡು ವರ್ಷ ಅವಧಿಗೆ ಹೂಡಿಕೆ ಮಾಡಲು ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಕಡಿಮೆ ಅವಧಿಗೆ ಅತಿ ಹೆಚ್ಚು ಹೂಡಿಕೆ ಮಾಡಲು ಯಾರು ಮುಂದಾಗುತ್ತಿಲ್ಲ.

ಹೀಗಾಗಿ ರಿವರ್ಸ್ ಬಿಡ್ಡಿಂಗ್ ನಡೆಸಲು ಬಿಸಿಸಿಐ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ನವೆಂಬರ್ 9ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ರಿವರ್ಸ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಯಾವ ಸಂಸ್ಥೆ ಅತ್ಯಂತ ಕಡಿಮೆ ಬಿಡ್ ಮಾಡಿರುತ್ತದೋ ಆವರಿಗೆ ಬಿಡ್ ಮಾಡಿದ ಆಟಗಾರ ಹಾಗೂ ತಂಡ ಸಿಗುತ್ತದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+