For Quick Alerts
ALLOW NOTIFICATIONS  
For Daily Alerts
 

RCB ಬ್ರ್ಯಾಂಡ್‌ ಮೌಲ್ಯ ಎಷ್ಟು ಗೊತ್ತಾ? ನಂಬರ್‌ 1 ಸ್ಥಾನದಲ್ಲಿರುವ ತಂಡ ಯಾವುದು?

ಇಂಡಿಯನ್ ಪ್ರೀಮಿಯರ್ ಲೀಗ್‌ ವರ್ಷಗಳು ಕಳೆದಂತೆ ನೋಡುಗರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಆದರೆ 2024ಕ್ಕೆ ಹೋಲಿಸಿದರೆ, 2025ರಲ್ಲಿ ಐಪಿಎಲ್‌ ಬ್ರ್ಯಾಂಡ್ ವ್ಯಾಲ್ಯೂ ಕುಸಿತ ಕಂಡಿದೆ. ಬ್ರ್ಯಾಂಡ್ ಫೈನಾನ್ಸ್ ಅಂಕಿ ಅಂಶಗಳ ಪ್ರಕಾರ 2025ರಲ್ಲಿ ಐಪಿಎಲ್‌ ಬ್ರ್ಯಾಂಡ್ ವ್ಯಾಲ್ಯೂ 86 ಸಾವಿರ ಕೋಟಿ ಎಂದು ತಿಳಿದು ಬಂದಿದೆ. ಆರ್‌ಸಿಬಿ ಈ ಲೆಕ್ಕಾಚಾರದಲ್ಲಿ ಕೊಂಚ ಹಿನ್ನಡೆ ಅನುಭವಿಸಿದೆ.

ಕಳೆದ ಆವೃತ್ತಿಯಲ್ಲಿ ಐಪಿಎಲ್‌ನ ಸ್ಟಾರ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ಬ್ರ್ಯಾಂಡ್ ವ್ಯಾಲ್ಯೂ 100 ಕೋಟಿ ರೂ. ದಾಟಿತ್ತು. ಆದರೂ ಸಹ ಐಪಿಎಲ್‌ ಬ್ರ್ಯಾಂಡ್‌ ವ್ಯಾಲ್ಯೂ 2024ಕ್ಕೆ ಹೋಲಿಸಿದರೆ ಶೇಕಡಾ 20 ರಷ್ಟು ಕಡಿಮೆ ಆಗಿದೆ. 2024ರಲ್ಲಿ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ 12 ಬಿಲಿಯನ್‌ ಯುಎಸ್ ಡಾಲರ್ ಗಳಾಗಿದ್ದರೆ, ಕಳೆದ ವರ್ಷ ಈ ಸಂಖ್ಯೆ 9.6 ಬಿಲಿಯನ್‌ ಯುಎಸ್ ಡಾಲರ್‌ಗೆ ಕುಸಿತ ಕಂಡಿದೆ.

IPL Brand Value Drops 20 in 2025 RCB Slides Despite Title Win Mumbai Indians Retains Top Spot

ಕುಸಿತಕ್ಕೆ ಕಾರಣ ಏನು?

ಐಪಿಎಲ್‌ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಪಂದ್ಯಗಳನ್ನು ಬಿಸಿಸಿಐ ರದ್ದುಗೊಳಿಸಿತು. ಇದರಿಂದ ಕಾರ್ಪೊರೇಟ್‌ ಕಂಪನಿಗಳಿಗೆ ಕೊಂಚ ಹೊಡೆತ ಬಿದ್ದಿತ್ತು. ಅಲ್ಲದೆ ಶೇಕಡಾ 15 ರಿಂದ 20 ರಷ್ಟು ಪ್ರಾಯೋಜಕತ್ವ ಚಟುವಟಿಕೆಯ ಮೇಲೆ ಪರಿಣಾಮ ಬೀರಿತು.

ಪ್ರಾಯೋಜಕರೆ ಐಪಿಎಲ್‌ ಬೆನ್ನೆಲುಬು. ಆದರೆ ಈ ಬಾರಿ ಕೇಂದ್ರ ಸರ್ಕಾರ ಆನ್‌ಲೈನ್‌ ಗೇಮಿಂಗ್ ಆ್ಯಪ್‌ಗಳನ್ನು ನಿಷೇಧಿಸಿತು. ಇದರಿಂದ ಬೊಕ್ಕಸಕ್ಕೆ ಹೊಡೆತ ಬಿದ್ದಿತು. ಇದು ನೇರವಾಗಿ ಬರಿ ಫ್ರಾಂಚಿಸಿಗಳ ಮೇಲೆ ಪರಿಣಾಮ ಬೀರದೆ, ಭಾರತದ ಕ್ರಿಕೆಟ್‌ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಇನ್ನು ಹಲವು ಕಂಪನಿಗಳು ದೀರ್ಘಾವಧಿ ಒಪ್ಪಂದದಿಂದ ಹಿಂದೆ ಸರಿದವು.

ಐಪಿಎಲ್‌ ಬ್ರ್ಯಾಂಡ್ ವ್ಯಾಲ್ಯೂ ಬೆಳೆಸುವಲ್ಲಿ ಮಾಧ್ಯಮ ಹಕ್ಕುಗಳ ಮಾರಟದ್ದೂ ದೊಡ್ಡ ಕೊಡುಗೆ ಇದೆ. ಹಾಟ್‌ ಸ್ಟಾರ್ ಹಾಗೂ ವಯಾಕಾಮ್‌ 18 ವಿಲಿನವಾಗಿದ್ದರಿಂದ ಪ್ರಸಾರದಲ್ಲಿ ಏಕಾಸ್ವಾಮ್ಯ ಸೃಷ್ಟಿಯಾಗಲು ಕಾರಣವಾಯಿತು. ಈ ಹಿಂದೆ ನಡೆಯುತ್ತಿದ್ದ ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ಪೆಟ್ಟು ಬಿದ್ದಿತು. ಇದರಿಂದ ಪಂದ್ಯದ ಗಳಿಕೆಯ ಮೇಲೂ ಪರಿಣಾಮ ಬೀರಿತು.

RCB ಬ್ರ್ಯಾಂಡ್‌ ಮೌಲ್ಯ ಎಷ್ಟು?

18ನೇ ಆವೃತ್ತಿಯ ಚಾಂಪಿಯನ್‌ ಆರ್‌ಸಿಬಿ ತಂಡದ ಬ್ರ್ಯಾಂಡ್ ಮೌಲ್ಯವೂ ಸಹ ಕಡಿಮೆ ಆಗಿದೆ. 2024ಕ್ಕೆ ಹೋಲಿಸಿದರೆ ಆರ್‌ಸಿಬಿ ಬ್ರ್ಯಾಂಡ್‌ ವ್ಯಾಲ್ಯೂ 10 ರಷ್ಟು ಕುಸಿತ ಕಂಡಿದ್ದು, ಸದ್ಯ 876.75 ರಷ್ಟಿದೆ. ಆದರೂ ಆರ್‌ಸಿಬಿ ಅತಿ ಹೆಚ್ಚು ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ಎರಡನೇ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ. ಮುಂಬೈ ಇಂಡಿಯನ್ಸ್‌ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ತಂಡದ ಮೌಲ್ಯ 902 ಕೋಟಿ ರೂ. ಆಗಿದೆ. ಈ ಬಾರಿ ಗುಜರಾತ್ ಟೈಟಾನ್ಸ್ ಮಾತ್ರ ತನ್ನ ಬ್ರ್ಯಾಂಡ್ ವ್ಯಾಲ್ಯೂ ಸುಧಾರಿಸಿಕೊಂಡಿದೆ.

ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ 2025 (ಬ್ರ್ಯಾಂಡ್ ಫೈನಾನ್ಸ್ ವರದಿ)

ಶ್ರೇಣಿ ತಂಡದ ಹೆಸರು ಬ್ರ್ಯಾಂಡ್ ಮೌಲ್ಯ (ಮಿಲಿಯನ್ USD)
1 ಮುಂಬೈ ಇಂಡಿಯನ್ಸ್ 108
2 ರಾಯಲ್ ಚಾಲೆಂಜರ್ಸ್ ಬೆಂಗಳೂರು 105
3 ಚೆನ್ನೈ ಸೂಪರ್ ಕಿಂಗ್ಸ್ 93
4 ಕೋಲ್ಕತ್ತಾ ನೈಟ್ ರೈಡರ್ಸ್ 74
5 ಗುಜರಾತ್ ಟೈಟನ್ಸ್ 70
6 ಪಂಜಾಬ್ ಕಿಂಗ್ಸ್ 66
7 ಲಕ್ನೋ ಸೂಪರ್ ಜೈಂಟ್ಸ್ 59
8 ಡೆಲ್ಲಿ ಕ್ಯಾಪಿಟಲ್ಸ್ 59
9 ಸನ್‌ರೈಸರ್ಸ್ ಹೈದರಾಬಾದ್ 56
10 ರಾಜಸ್ಥಾನ್ ರಾಯಲ್ಸ್ 53

Story first published: Wednesday, December 10, 2025, 18:14 [IST]
Other articles published on Dec 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+