'ಐಪಿಎಲ್ 2020' ನಡೆಯಬೇಕಾದರೆ ಉಳಿದಿರೋ ದಾರಿ ಇದೊಂದೇ!

ಬೆಂಗಳೂರು, ಮಾರ್ಚ್ 31: ಕೊರೊನಾವೈರಸ್ ಭೀತಿ ವಿಶ್ವದಾದ್ಯಂತ ಕ್ರೀಡಾಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ. ಜಗತ್ತಿನೆಲ್ಲೆಡೆ ಎಲ್ಲಾ ಕ್ರೀಡಾ ಸ್ಪರ್ಧೆಗಳು ಮುಂದೂಡಲ್ಪಟ್ಟಿವೆ ಇಲ್ಲವೆ ರದ್ದಾಗಿವೆ. ಕೋವಿಡ್-19ನಿಂದಾಗಿ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯನ್ನು ರದ್ದುಗೊಳಿಸಬೇಕಾದ ಒತ್ತಡಕ್ಕೆ ಬಿಸಿಸಿಐ ಸಿಲುಕಿದೆ. ಬಿಸಿಸಿಐಯು ಸದ್ಯಕ್ಕೆ ಈ ಬಾರಿಯ ಐಪಿಎಲ್ ಅನ್ನು ಏಪ್ರಿಲ್ 15ರ ಬಳಿಕ ಮುಂದೂಡಿದೆಯಾದರೂ ಏಪ್ರಿಲ್‌ನಲ್ಲಿ ಐಪಿಎಲ್ ನಡೆಯೋ ಸಾಧ್ಯತೆ ತುಂಬಾ ಕಡಿಮೆ.
ಮೊದಲ ದಿನಾಂಕದಂತೆ ಐಪಿಎಲ್ ಆರಂಭವಾಗಿದ್ದರೆ, ಮಾರ್ಚ್ 29ರಿಂದಲೇ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ನಡೆಯಬೇಕಿತ್ತು. ಆದರೆ ಕೊರೊನಾವೈರಸ್ ಜನಪ್ರಿಯ ಟೂರ್ನಿಗೆ ಕಂಟಕವಾಗಿ ಕಾಣಿಸಿದೆ.
ಈ ಬಾರಿಯ ಐಪಿಎಲ್ ನಡೆಯಬೇಕಾದರೆ ಒಂದೇ ಒಂದು ದಾರಿ ಉಳಿದಿದೆ. ಇದಾಗಿಬಿಟ್ಟರೆ 13ನೇ ಆವೃತ್ತಿಯ ಐಪಿಎಲ್ ರದ್ದಾಗಲ್ಲ, 2020ರಲ್ಲೇ ಟೂರ್ನಿ ನಡೆಯಲಿದೆ.

ಐಪಿಎಲ್ ಐಸಿಸಿ ಕೈಯ್ಯಲ್ಲಿದೆ
ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಧಾರಿಸೋದು ಬಿಸಿಸಿಐ ಅಲ್ಲವೆ, ಐಸಿಸಿಗೆ ಇದರಲ್ಲೇನು ಕೆಲಸ ಅಂತ ಕೇಳಬೇಡಿ, 2020ರ ಐಪಿಎಲ್ ನಿಜಕ್ಕೂ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕೈಯಲ್ಲಿದೆ. ಐಸಿಸಿ ನಿರ್ಧಾರವನ್ನವಲಂಭಿಸಿ ಐಪಿಎಲ್‌ನ ರದ್ದು ಅಥವಾ ನಡೆಯುವ ಸಾಧ್ಯವಿದೆ.

ಇರೋದೊಂದೇ ದಾರಿ
ಐಪಿಎಲ್ ನಡೆಯಬೇಕಾದರೆ ಇರೋದೊಂದೇ ದಾರಿ. ಅದೇನೆಂದರೆ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲ್ಪಡಬೇಕು. ಐಸಿಸಿ, ಈ ಬಾರಿಯ ಟಿ20 ವಿಶ್ವಕಪ್ ಮುಂದೂಡಿದರೆ 2020ರ ಐಪಿಎಲ್ ನಡೆಸಲು ಅವಕಾಶ ದೊರೆಯಲಿದೆ. ಯಾಕೆಂದರೆ ಕೊರೊನಾ ವೈರಸ್ ಕಾರಣ ಆಸ್ಟ್ರೇಲಿಯಾದಲ್ಲಿ ಸುಮಾರು 6 ತಿಂಗಳ ಲಾಕ್‌ಡೌನ್ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಅಕ್ಟೋಬರ್-ನವೆಂಬರ್‌ನಲ್ಲಿ ಐಪಿಎಲ್
ಐಪಿಎಲ್ ನಡೆಯುವ ಸಾಧ್ಯತೆ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಗಳು, ಈ ವರ್ಷ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಮುಂದೂಡಿದರೆ, ಆ ದಿನಾಂಕದಲ್ಲಿ ಐಪಿಎಲ್ ನಡೆಸಲು ಅವಕಾಶವಿದೆ ಎಂದಿದ್ದಾರೆ.

2022ರಲ್ಲಿ ಟಿ20 ವಿಶ್ವಕಪ್?
'ಬಹುತೇಕ ಎಲ್ಲಾ ದೇಶಗಳಲ್ಲೂ ಸುಮಾರು 6 ತಿಂಗಳವರೆಗೆ ಲಾಕ್ ಡೌನ್ ಇರಲಿದೆ. ಅಕ್ಟೋಬರ್ ಆರಂಭದ ವೇಳೆಗೆ ಸಂದರ್ಭಕ್ಕೆ ತಕ್ಕಂತೆ ಲಾಕ್ ಡೌನ್ ಕೊನೆಗೊಳ್ಳಲಿದೆ. ಆದರೆ ಕೊರೊನಾವೈರಸ್‌ನಿಂದ ಐಸಿಸಿ, ಟಿ20ಯನ್ನು 2022ಕ್ಕೆ ಮುಂದೂಡುವ ಸಾಧ್ಯತೆಯಿದೆ. ಯಾಕೆಂದರೆ 2021ರಲ್ಲಿ ಟೂರ್ನಿ ನಡೆಸಲು ಅವಕಾಶ ಕಡಿಮೆಯಿದೆ. ಹಾಗೊಂದುವೇಳೆ ಟಿ20 ವಿಶ್ವಕಪ್ ಮುಂದೂಡಿದರೆ ಆ ದಿನಾಂಕದ ಮಧ್ಯೆ ಐಪಿಎಲ್ ನಡೆಸುವ ಸಾಧ್ಯತೆಯೂ ಇದೆ,' ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications