Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿದೇಶಿ ಆಟಗಾರರಿಲ್ಲದೆ ಐಪಿಎಲ್ ನಡೆಯಲಾರದು: ಕೆXIಪಿ ಸಹ ಮಾಲೀಕ

IPL can’t happen without foreign players: Ness Wadia

ನವದೆಹಲಿ, ಮೇ 30: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಜಾಗತಿಕ ಆಕರ್ಷಣೆಯ ಪಂದ್ಯಾವಳಿ. ವಿದೇಶಿ ಸ್ಟಾರ್ ಆಟಗಾರರಿಲ್ಲದೆ ಐಪಿಎಲ್ ನಡೆಯಲಾರದು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ. ಕೊರೊನಾವೈರಸ್‌ನಿಂದಾಗಿ ತೊಂದರೆಗೀಡಾಗಿರುವ ಐಪಿಎಲ್ ಭವಿಷ್ಯವನ್ನು ಈಗಲೇ ಬಿಸಿಸಿಐ ನಿರ್ಧರಿಸಲಾಗದು ಎಂದವರು ಅಭಿಪ್ರಾಯಿಸಿದ್ದಾರೆ.

ಮಾರ್ಚ್‌ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಕೊರೊನಾವೈರಸ್‌ನಿಂದಾಗಿ ಸದ್ಯ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಈ ಬಾರಿ ನಡೆಯದಿದ್ದರೆ ಆ ಎರಡು ತಿಂಗಳಲ್ಲಿ ಐಪಿಎಲ್ ನಡೆಯುವ ಯೋಜನೆಯಲ್ಲಿ ಬಿಸಿಸಿಐ ಇದೆ.

ಈ ವರ್ಷದ ಐಪಿಎಲ್ ಟೂರ್ನಿ ಹೇಗೆ ನಡೆಯಬೇಕು ಎಂಬ ಪ್ರಶ್ನೆ ಮುಂದಿಟ್ಟಾಗ ಬೇರೆ ಬೇರೆ ಫ್ರಾಂಚೈಸಿಗಳಿಂದ ಬೇರೆ ಬೇರೆ ಅಭಿಪ್ರಾಯಗಳು ಕೇಳಿ ಬಂದಿದ್ದವು. ಪ್ರಯಾಣ ನಿರ್ಬಂಧವಿರುವುದರಿಂದ ಬರೀ ಭಾರತದ ಆಟಗಾರರನ್ನಷ್ಟೇ ಆಡಿಸಿ ಎಂದು ರಾಜಸ್ಥಾನ್ ರಾಯಲ್ಸ್ ಸಲಹೆ ನೀಡಿತ್ತು.

ಆದರೆ ರಾಜಸ್ಥಾನ್ ನೀಡಿರುವ ಈ ಐಡಿಯಾ ಹೆಚ್ಚಿನ ಫ್ರಾಂಚೈಸಿಗಳಿಗೆ ಸರಿ ಕಾಣಿಸಿಲ್ಲ. ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ಕೂಡ ಈಗಾಗಲೇ ಆರ್‌ಆರ್ ಸಲಹೆಯನ್ನು ತಿರಸ್ಕರಿಸಿದೆ. ಈಗ ಕಿಂಗ್ಸ್ ಇಲೆವೆನ್ ಪಂಜಾಬ್‌ ಕೂಡ ವಿದೇಶಿ ಆಟಗಾರರು ಬೇಕೇ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

'ಐಪಿಎಲ್ ಅನ್ನೋದು ಭಾರತೀಯರು ಶುರು ಮಾಡಿದ ಅಂತಾರಾಷ್ಟ್ರೀಯ ಟೂರ್ನಿ. ಇದು ವಿಶ್ವದಲ್ಲೇ ಪ್ರಧಾನ ಕ್ರಿಕೆಟ್ ಟೂರ್ನಿ. ಇಲ್ಲಿ ಅಂತಾರಾಷ್ಟ್ರೀಯ ವೇದಿಕೆ ಬೇಕು, ಅಂತಾರಾಷ್ಟ್ರೀಯ ಸ್ಟಾರ್‌ಗಳು ಪಾಲ್ಗೊಳ್ಳಬೇಕು. ಟೂರ್ನಿ ವೇಳೆಗೆ ಯಾವೆಲ್ಲ ವಿದೇಶಿ ಆಟಗಾರರಿಗೆ ಭಾರತಕ್ಕೆ ಬರಲು ಅನುಮತಿ ಲಭಿಸುತ್ತದೆ ಎಂದು ನೋಡಬೇಕಾಗುತ್ತದೆ,' ಎಂದು ವಾಡಿಯಾ ಹೇಳಿದ್ದಾರೆ.

Story first published: Saturday, May 30, 2020, 22:05 [IST]
Other articles published on May 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+