Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL: ಅತಿ ಹೆಚ್ಚು ಶತಕಗಳನ್ನು ಬಾರಿಸಿದ ತಂಡಗಳ ಪಟ್ಟಿಯಲ್ಲಿ RCBಗೆ ಅಗ್ರಸ್ಥಾನ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ರೋಚಕ ಘಟ್ಟದತ್ತ ಮುಖ ಮಾಡಿದೆ. ಈ ಬಾರಿಯ ಲೀಗ್‌ನಲ್ಲೂ ಸ್ಟಾರ್‌ ಆಟಗಾರರು ಅಬ್ಬರಿಸಿದ್ದಾರೆ. ಅಲ್ಲದೆ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸಂಜು ಸ್ಯಾಮ್ಸನ್‌ ಈ ಬಾರಿ ಎರಡು ಶತಕ ಬಾರಿಸಿದ್ದಾರೆ. ವಿರಾಟ್‌ ಕೊಹ್ಲಿ ಸಹ ಕೆಕೆಆರ್‌ ವಿರುದ್ಧ ಶತಕ ಬಾರಿಸಿ ಮಿಂಚಿದರು.

ಐಪಿಎಲ್‌ ಇತಿಹಾಸದಲ್ಲಿ ಈ ವರೆಗೆ ಒಟ್ಟು 123 ಶತಕಗಳು ದಾಖಲಾಗಿವೆ. ಇವುಗಳಲ್ಲಿ 62 ಶತಕಗಳನ್ನು ತಲಾ ಒಬ್ಬ ಆಟಗಾರ ಬಾರಿಸಿದ್ದಾರೆ. ಇನ್ನು 29 ಆಟಗಾರರು ಐಪಿಎಲ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟರ್ ಎಂಬ ಶ್ರೇಯ ವಿರಾಟ್ ಅವರದ್ದಾಗಿದೆ. ಇವರು ಒಟ್ಟಾರೆ ಐಪಿಎಲ್‌ನಲ್ಲಿ 9 ಶತಕ ಸಿಡಿಸಿದ್ದಾರೆ.

IPL

ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ 2016ರಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು. ಇವರು 2016ರಲ್ಲಿ ಗುಜರಾತ್ ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದರು. ಐಪಿಎಲ್‌ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಅತಿ ಹೆಚ್ಚು ಶತಕಗಳನ್ನು ಒಂದೇ ತಂಡದ ಪರ ಬಾರಿಸಿದ ಹೆಗ್ಗಳಿಕೆ ಆರ್‌ಸಿಬಿ ತಂಡದ್ದಾಗಿದೆ.

19 ಅವೃತ್ತಿ ಐಪಿಎಲ್‌ ನಡೆಯುತ್ತಿದೆ. ಈ ಎಲ್ಲ ಆವೃತ್ತಿಗಳಲ್ಲಿ 2024ರ ಐಪಿಎಲ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಹೆಚ್ಚು ಶತಕಗಳು ದಾಖಲಾಗಿವೆ. ಈ ಆವೃತ್ತಿಯಲ್ಲಿ 14 ಶತಕಗಳು ದಾಖಲಾಗಿವೆ.

ಐಪಿಎಲ್‌ನ ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್‌ ಹಾಗೂ ಆರ್‌ಸಿಬಿ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಬ್ರೆಂಡನ್ ಮೆಕಲಂ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು.

IPL

ಒಂದೇ ತಂಡದ ಪರ ದಾಖಲಾದ ಗರಿಷ್ಠ ಶತಕಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, 20 ಶತಕ
ರಾಜಸ್ಥಾನ್ ರಾಯಲ್ಸ್‌, 19 ಶತಕ
ಪಂಜಾಬ್‌ ಕಿಂಗ್ಸ್‌, 17 ಶತಕ
ಚೆನ್ನೈ ಸೂಪರ್ ಕಿಂಗ್ಸ್‌, 12 ಶತಕ
ಡೆಲ್ಲಿ ಕ್ಯಾಪಿಟಲ್ಸ್‌, 12 ಶತಕ
ಮುಂಬೈ ಇಂಡಿಯನ್ಸ್‌, 11 ಶತಕ
ಸನ್‌ರೈಸರ್ಸ್‌ ಹೈದರಾಬಾದ್, 10 ಶತಕ
ಗುಜರಾತ್‌ ಟೈಟಾನ್ಸ್‌, 7 ಶತಕ
ಎಲ್‌ಎಸ್‌ಜಿ, 7 ಶತಕ
ಕೋಲ್ಕತ್ತಾ ನೈಟ್ ರೈಡರ್ಸ್, 4 ಶತಕ
ಡೆಕ್ಕನ್ ಚಾರ್ಜಸ್‌, 2 ಶತಕ
ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌, 2 ಶತಕ

Story first published: Saturday, May 16, 2026, 11:20 [IST]
Other articles published on May 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+