For Quick Alerts
ALLOW NOTIFICATIONS  
For Daily Alerts
 

Yash Dayal: ಬ್ಯಾನ್‌ ಆಗ್ತಾರಾ ಆರ್‌ಸಿಬಿ ತಂಡದ ವೇಗದ ಬೌಲರ್‌?

ಆರ್‌ಸಿಬಿ 18ನೇ ಆವೃತ್ತಿಯ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈ ಆವೃತ್ತಿಯಲ್ಲಿ ತಂಡ ಸಂಘಟಿತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಆರ್‌ಸಿಬಿ ಪ್ರಶಸ್ತಿ ಬರವನ್ನು ಕೊನೆಯಾಗಿಸಿದೆ. ಆರ್‌ಸಿಬಿ ತಂಡದ ಸ್ಥಿರ ಪ್ರದರ್ಶನದ ಹಿಂದೆ ಮೈದಾನಕ್ಕಿಳಿದ ಆಟಗಾರರ ಶ್ರಮ ಎದ್ದು ಕಾಣುತ್ತಿದೆ. ಆರ್‌ಸಿಬಿ ತಂಡಕ್ಕೆ ಮುಕುಟ ತೊಡಿಸಿದ ಆಟಗಾರರ ಪಟ್ಟಿಯಲ್ಲಿ ಎದ್ದು ಕಾಣುವ ಒಂದು ಹೆಸರು ಯಶ್‌ ದಯಾಳ್. ತಮ್ಮ ಬಿಗುವಿನ ದಾಳಿಯಿಂದಲೇ ಯಶ್‌ ದಯಾಳ್‌ ಹೆಸರುವಾಸಿಯಾಗಿರುವ ಬೌಲರ್. ಆದರೆ ಈಗ ಇವರಿಗೆ ಸಂಕಷ್ಟ ಎದುರಾಗಿದೆ.

ಇಂಡಿಯನ್ ಪ್ರೀಮಿಯರ್ ಮುಗಿಯುತ್ತಿದ್ದಂತೆ ಯಶ್‌ ದಯಾಳ್ ಅವರ ಮೇಲೆ ಹಲವು ಆರೋಪಗಳನ್ನು ಮಾಡಿ ಮಹಿಳೆಯೊಬ್ಬರು ಪೊಲೀಸ್ ಠಾಣೇಯ ಮೆಟ್ಟಿಲು ಏರಿದ್ದಾರೆ. ಈ ಮಹಿಳೆ ಬಹಳ ಸಮಯದಿಂದಲೂ ತಮ್ಮ ಮೇಲೆ ಲೈಗಿಂಕ ದೌರ್ಜನ್ಯದ ಆರೋಪ ಮಾಡುತ್ತಲೇ ಬಂದಿದ್ದರು. ಆರೋಪ ಹೊರೆಸುತ್ತಿರುವ ಮಹಿಳೆ ಈಗ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಹೀಗಾಗಿ ಯಶ್‌ ದಯಾಳರನ್ನು ಐಪಿಎಲ್‌ನಿಂದ ಬ್ಯಾನ್ ಮಾಡಲಾಗುತ್ತದಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.

IPL Champion Yash Dayal Faces Sexual Harassment Allegations FIR Filed

ಯಶ್‌ ಅವರನ್ನು ಐಪಿಎಲ್‌ನಿಂದ ನಿಷೇಧಿಸಬಹುದಾಗಿದೆ. ಅಲ್ಲದೆ ಅವರ ಮೇಲೆ ಮಹಿಳೆ ಹೊರೆಸುತ್ತಿರುವ ಆರೋಪಗಳು ಸಾಬೀತಾದಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಲೂ ಬಹುದು. ಈ ಪ್ರಕರಣ ಯಶ್‌ ಅವರ ತಲೆನೋವನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇದೆ. ಇನ್ನು ಎಫ್‌ಐಆರ್‌ನಲ್ಲಿ ವಾಟ್ಸ್‌ ಅಪ್‌ ಚಾಟ್‌, ವಿಡಿಯೋ ಕರೆಗಳ ದಾಖಲೆ, ಚಿತ್ರಗಳ ಸ್ಕ್ರೀನ್ ಶಾಟ್‌ ಸೇರಿದಂತೆ ಹಲವು ಪುರಾವೆಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಇನ್ನು ಸದ್ಯ ನೀಡಲಾಗಿರುವ ಎಫ್‌ಐಆರ್‌ನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69 ರ ಅಡಿಯಲ್ಲಿ ದಾಖಲಿಸಲಾಗಿದೆ.

ಯಶ್‌ ಮಾಡಿದ ಮೋಸ್ ಏನು?

ಕಳೆದ 5 ವರ್ಷಗಳಿಂದ ಯಶ್ ಅವರೊಂದಿಗೆ ಸಂಬಂಧದಲ್ಲಿದ್ದೆ. ಮದುವೆ ಆಗುವುದಾಗಿ ಸುಳ್ಳು ಭರವಸೆಗಳನ್ನು ನೀಡಿ, ದೈಹಿಕ ಸಂಬಂಧ ಬೆಳೆಸಿಕೊಂಡರು. ಬಳಿಕ ಅವರು ನನ್ನನ್ನು ಅವರ ಕುಟುಂಬಕ್ಕೆ ಪರಿಚಯ ಮಾಡಿಸಿಕೊಟ್ಟರು. ಮನೆಯಲ್ಲೂ ನನಗೆ ಸೊಸೆಯ ಸ್ಥಾನ ನೀಡಲಾಗಿತ್ತು. ಆದರೆ ಅವರು ನನ್ನ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರುದಾರ ಮಹಿಳೆ ತಿಳಿಸಿದ್ದಾರೆ.

ಏನು ಹೇಳುತ್ತೇ ಬಿಸಿಸಿಐ ನಿಯಮ?

ಬಿಸಿಸಿಐ ನಿಯಮಗಳ ಪ್ರಕಾರ ಐಪಿಎಲ್‌ ವೇಳೆ ಇಂತಹ ಘಟನೆಗಳು ನಡೆದಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ. ಇದೇ ವೇಳೆ ಆಟಗಾರ ಮಂಡಳಿಯ ನೀತಿ ಸಂಹಿತಿಗೆ ಬದ್ಧನಾಗಿರುತ್ತಾನೆ. ಟೂರ್ನಿ ಮುಗಿದ ಬಳಿಕ ಆಟಗಾರರ ವಿರುದ್ಧ ಯಾವುದೇ ದೊಡ್ಡ ಕ್ರಮ ಕೈಗೊಳ್ಳಲು ಆಗದು. ಇನ್ನು ಆಟಗಾರನ ಮೇಲೆ ಪ್ರಕರಣ ನಡೆಯುತ್ತಿದ್ದರೆ ಆತನನ್ನು ಫ್ರಾಂಚೈಸಿ ಅಮಾನತ್ತು ಮಾಡಬಹುದಾಗಿದೆ. ಇದರಿಂದ ಆಟಗಾರ ತಂಡದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಕೋರ್ಟ್‌ನಲ್ಲಿ ಆರೋಪ ಸಾಬೀತಾದಲ್ಲಿ ಬಿಸಿಸಿಐ ಯಶ್ ಅವರನ್ನು ಬ್ಯಾನ್ ಮಾಡಬಹುದಾಗಿದೆ.

Story first published: Tuesday, July 8, 2025, 18:53 [IST]
Other articles published on Jul 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+