Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೇಶದ ಜಿಡಿಪಿಗೆ 11.5 ಬಿಲಿಯನ್ ರು ನೀಡಿದ ಐಪಿಎಲ್

ಮುಂಬೈ, ಅ.30: ಭಾರತದ ಆರ್ಥಿಕ ವೃದ್ಧಿ ದರ (ಜಿಡಿಪಿ)ಕ್ಕೆ 015ರ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಿಂದ ಸುಮಾರು 11.5 ಬಿಲಿಯನ್ ರು(182 ಮಿಲಿಯನ್ ಯುಎಸ್ ಡಾಲರ್) ಕೊಡುಗೆ ನೀಡಿದೆಎಂದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶುಕ್ರವಾರ ಪ್ರಕಟಿಸಿದೆ.

ಕೆಪಿಎಂಜಿ ಸ್ಫೋರ್ಟ್ ಸಲಹಾ ಸಂಸ್ಥೆ 'ಭಾರತದ ಆರ್ಥಿಕತೆಯ ಮೇಲೆ ಐಪಿಎಲ್ ನ ಪರಿಣಾಮ' ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ನೀಡಿರುವ ವರದಿ ಆಧಾರಿಸಿ ಬಿಸಿಸಿಐ ಈ ಸುದ್ದಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.[ಐಪಿಎಲ್ ಗೆ ಹೊಸ ತಂಡಗಳ ಸೇರ್ಪಡೆ]

2015ರ ಐಪಿಎಲ್ ನಲ್ಲಿ 8 ಫ್ರಾಂಚೈಸಿಗಳಿದ್ದು, 44 ದಿನಗಳ ಕಾಲ 60 ಮ್ಯಾಚ್ ಗಳನ್ನಾಡಲಾಯಿತು.ಭಾರತದೆಲ್ಲೆಡೆ 12 ನಗರಗಳಲ್ಲಿ 13 ಸ್ಥಳಗಳಲ್ಲಿ ಐಪಿಎಲ್ ಪಂದ್ಯ ನಡೆದಿತ್ತು. 193 ಕ್ರಿಕೆಟಿಗರು ಇದರಲ್ಲಿ ಭಾಗವಹಿಸಿದ್ದರು. ಸುಮಾರು 1.71 ಮಿಲಿಯನ್ ಪ್ರೇಕ್ಷಕರು ಆಟವನ್ನು ವೀಕ್ಷಿಸಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.

IPL contributes INR 11.5 billion to India’s GDP

2015ರ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ 26.5 ಬಿಲಿಯನ್ ರು ( 418 ಮಿಲಿಯನ್ ಯುಎಸ್ ಡಿ) ಆರ್ಥಿಕ ವಹಿವಾಟುಗಳು ನಡೆದಿವೆ. ಐಪಿಎಲ್ ಪಂದ್ಯಗಳಿಗೆ ಆತಿಥೇಯ ವಹಿಸುವ ಮೂಲಕ ಹೆಚ್ಚಿನ ಆರ್ಥಿಕ ಆದಾಯವನ್ನೂ ದೇಶ ಗಳಿಸುತ್ತದೆ.

2015ರ ಋತುವಿನಲ್ಲಿ, ಶೇ. 20 ರಷ್ಟು ಕ್ರೀಡಾಭಿಮಾನಿಗಳು ಆತಿಥೇಯ ನಗರಗಳ ಜತೆಗೆ ಇನ್ನಿತರ ನಗರಗಳಿಗೂ ಭೇಟಿ ನೀಡಿದ್ದಾರೆ. ಹೀಗೆ ಭೇಟಿ ನೀಡಿದವರಲ್ಲಿ ಬ್ರಿಟನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಕ್ರೀಡಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದರಿಂದಾಗಿ ಪ್ರವಾಸೋದ್ಯಮಕ್ಕೂ ಇಂಬು ನೀಡಿದ್ದಂತಾಗಿದೆ. ಐಪಿಎಲ್ ಆಟಗಳನ್ನು ಪ್ರೋತ್ಸಾಹಿಸುವುದರಿಂದ ಭಾರತದ ಆರ್ಥಿಕತೆ ಇನ್ನೂ ಹೆಚ್ಚಳವಾಗಲಿದೆ ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಹೇಳಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+