Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಯಾಂಕ್ ಭರ್ಜರಿ ಆಟ, ದ. ಆಫ್ರಿಕಾ ವಿರುದ್ಧ ಭಾರತ 'ಎ'ಗೆ ಜಯ

ನವದೆಹಲಿ, ಸೆ. 29: ಕರ್ನಾಟಕದ ಆಟಗಾರ ಮಾಯಾಂಕ್ ಅಗರವಾಲ್ ಅವರು ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಪಾಲಂ ಮೈದಾನದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮಂಗಳವಾರ ನಡೆದ ಟಿ20 ಅಭ್ಯಾಸ ಪಂದ್ಯದಲ್ಲಿ ಮಾಯಾಂಕ್ ಬ್ಯಾಟಿಂಗ್ ನೆರವಿನಿಂದ ಭಾರತ 'ಎ' ತಂಡಕ್ಕೆ 8 ವಿಕೆಟ್ ಗಳ ಜಯ ದಾಖಲಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲು 190ರನ್ ಗಳಿಸಬೇಕಿದ್ದ ಭಾರತ 'ಎ' ತಂಡಕ್ಕೆ ಮಾಯಾಂಕ್ ಅಗರವಾಲ್ ಹಾಗೂ ಮನನ್ ವೋರಾ ಆಸರೆಯಾದರು. ತಲಾ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಜೋಡಿ 12.4 ಓವರ್ ಗಳಲ್ಲಿ 119 ರನ್ ಗಳ ಜೊತೆಯಾಟ ಸಾಧಿಸಿತು. ಈ ಜೊತೆಯಾಟದ ನೆರವಿನಿಂದ ಭಾರತ 'ಎ' ತಂಡ 19.4 ಓವರ್ ಗಳಲ್ಲಿ 193/2 ಸ್ಕೋರ್ ಮಾಡಿ ಅರ್ಹ ಜಯ ಗಳಿಸಿತು.[ಗಾಂಧಿ-ಮಂಡೇಲಾ ಸರಣಿ: ರಾಜ್ಯದ ಅರವಿಂದ್‌ಗೆ ಸ್ಥಾನ]

Mayank Agarwal blasts India A to T20 win over South Africa

ಮಾಯಾಂಕ್ ಅಗರ್ ವಾಲ್ ಅವರು 49 ಎಸೆತಗಳಲ್ಲಿ 87ರನ್ (12X4, 2X6) ಹಾಗೂ ಮನನ್ ವೋರಾ 56ರನ್ (42ಎಸೆತ, 8x4, 1x6) ಗಳಿಸಿ ದಕ್ಷಿಣ ಆಫ್ರಿಕಾದ ಗೆಲುವಿನ ಆಸೆಗೆ ತಣ್ಣೀರೆರೆಚಿದರು.

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊದಲಿಗೆ ಬ್ಯಾಟ್ ಬೀಸುತ್ತಿದ್ದ ಮಾಯಾಂಕ್ ಅವರು ಕಳೆದ ಋತುವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದಾರೆ. ಕರ್ನಾಟಕದ ಪರ ಆಡುವ ಮಾಯಾಂಕ್ 13 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.

24 ವರ್ಷ ವಯಸ್ಸಿನ ಮಾಯಾಂಕ್ ಅವರು ಶತಕ ಸಿಡಿಸುವ ಉತ್ಸಾಹದಲ್ಲಿದ್ದರು ಅದರೆ, 18ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಸಂಜು ಸಾಮ್ಸನ್ 31 ರನ್ ನಾಟೌಟ್, ನಾಯಕ ಮನ್ದೀಪ್ ಸಿಂಗ್ 12 ರನ್ ಗಳಿಸಿ ಜಯದ ಓಟ ಓಡಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಪರ ಜೆಪಿ ಡುಮಿನಿ ಭರ್ಜರಿ ಆಟ ಪ್ರದರ್ಶಿಸಿ 32ಎಸೆತಗಳಲ್ಲಿ 68ರನ್ ಗಳಿಸಿದರು. ನಾಯಕ ಫ್ಲಾಫ್ ಡು ಪ್ಲೆಸಿಸ್ 27ಎಸೆತಗಳಲ್ಲಿ 42ರನ್, ಎಬಿ ಡಿವಿಲೆಯರ್ಸ್ 27 ಎಸೆತಗಳಲ್ಲಿ 36ರನ್ ಗಳಿಸಿ ತಂಡದ ಮೊತ್ತವನ್ನು 189/3ಗೆ ಕೊಂಡೊಯ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+