For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ತಂಡಗಳ ವಿಸ್ತರಣೆಗೆ ಕೆಲ ವರ್ಷಗಳು ಹಿಡಿಯುತ್ತವೆ: ಬಿಸಿಸಿಐ

IPL expansion may be a couple of years late, says BCCI source

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ 8ಕ್ಕೆ ಬದಲಾಗಿ 10 ತಂಡಗಳು ಬರಲಿವೆ. ಇದಕ್ಕೆ ಕೆಲವು ವರ್ಷಗಳು ಬೇಕಾಗಬಹುದು ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲ ತಿಳಿಸಿದೆ. 2022ರ ವೇಳೆ ಹತ್ತು ಐಪಿಎಲ್ ತಂಡಗಳು ಕಣಕ್ಕಿಳಿಯುವ ನಿರೀಕ್ಷೆಯಿದೆ.

2011ರಲ್ಲೂ ಹತ್ತು ಐಪಿಎಲ್ ತಂಡಗಳು ಆಡಿದ್ದವು. ಆದರೆ ಆಬಳಿಕ ತಂಡಗಳ ಸಂಖ್ಯೆಯನ್ನು ಮತ್ತೆ 8ಕ್ಕೆ ತಗ್ಗಿಸಲಾಗಿತ್ತು. ಈಗ ಮತ್ತೆ ಐಪಿಎಲ್ ತಂಡಗಳ ಸಂಖ್ಯೆಯನ್ನು 10ಕ್ಕೆ ಏರಿಸಲು ಬಿಸಿಸಿಐ ಯೋಚಿಸಿದೆ. ತಂಡಗಳ ಸಂಖ್ಯೆ ಏರಿಸುವುದೆಂದರೆ ಪಂದ್ಯಗಳ ಸಂಖ್ಯೆಯೂ ಹೆಚ್ಚುವುದು ನಿರೀಕ್ಷಿತ.

ಇದು ಐಪಿಎಲ್ ತಂಡಗಳನ್ನು ಹೆಚ್ಚಿಸಲು ಸಕಾಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಮೂಲ, "ಖಂಡಿತಾ ಹೌದು. ಹತ್ತು ತಂಡಗಳ ಟೂರ್ನಿ ನಿಜಕ್ಕೂ ಅದ್ಭುತ ಅನ್ನಿಸುತ್ತವೆ. ಆದರೆ ಇದು ಕೆಲ ವರ್ಷಗಳ ನಂತರ ನಡೆಯಬಹುದು," ಎಂದು ಬಿಸಿಸಿಐ ಮೂಲ ತಿಳಿಸಿದೆ.

ಐಪಿಎಲ್ ಹೆಚ್ಚುವರಿ ತಂಡಗಳ ಸೇರ್ಪಡೆ ಯೋಜನೆಯಂತೆ ಈಗಾಗಲೇ 8 ತಂಗಳನ್ನು ಹೊಂದಿರುವ ಐಪಿಎಲ್‌ನಲ್ಲಿ ಮುಂದಿನ ಆವೃತ್ತಿಗಾಗಿ ಮತ್ತೆರಡು ತಂಡಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಈ ಹೊಸ ತಂಡಗಳಿಗೆ ಬಿಸಿಸಿಐ 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದೆ. ಈ ಬಿಡ್ಡಿಂಗ್‌ನ ಅಂತ್ಯದಲ್ಲಿ ಎರಡು ತಂಡಗಳ ಮಾರಾಟದಿಂದ ಕನಿಷ್ಠ 5000 ಕೋಟಿ ರೂಪಾಯಿ ಲಾಭಗಳಿಸುವ ನಿರೀಕ್ಷೆಯನ್ನು ಬಿಸಿಸಿಐ ಹೊಂದಿದೆ.

ಆರಂಭದಲ್ಲಿ ಈ ಮೂಲಬೆಲೆಯನ್ನು 1700 ಕೋಟಿ ರೂಪಾಯಿಗೆ ನಿಗದಿಗೊಳಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಇದನ್ನು ಏರಿಕೆ ಮಾಡಲಾಗುದ್ದು 2000 ಕೋಟಿ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಇನ್ನು ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಬಯಸುವ ತಂಡಗಳು ಆರಂಭದಲ್ಲಿ 75 ಕೋಟಿ ರೂಪಾಯಿ ನೀಡಿ ಬಿಡ್ಡಿಂಗ್ ದಾಖಲಾತಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇನ್ನು ಈ ಬಿಡ್ಡಿಂಗ್ ಡಾಕ್ಯುಮೆಂಟ್ ಪಡೆಯಲು ಹಾಗೂ ಲೀಗ್‌ನ ಫ್ರಾಂಚೈಸಿಯನ್ನು ಪಡೆದುಕೊಳ್ಳಲು ಕನಿಷ್ಠ 3000 ಕೋಟಿ ರೂಪಾಯಿಯ ವಾರ್ಷಿಕ ವಹಿವಾಟು ಹೊಂದಿರಬೇಕು. ಹಾಗಿದ್ದಾಗ ಮಾತ್ರವೇ ಈ ಬಿಡ್ಡಿಂಗ್‌ನಲ್ಲಿ ಭಾಗಿಯಾಗಲು ಸಮರ್ಥರಾಗಿರುತ್ತಾರೆ.

Story first published: Thursday, September 2, 2021, 0:28 [IST]
Other articles published on Sep 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+