Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Final: ಎದುರಾಳಿಗೆ ಸಿಂಹ ಸ್ವಪ್ನರಾಗಿ ಕಾಡುವ ಆರ್‌ಸಿಬಿ ತಂಡದ ಆಟಗಾರರು ಇವರೇ..

ಭಾನುವಾರ 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಕಾದಾಟ ನಡೆಸಲಿವೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ಎರಡನೇ ಪ್ರಶಸ್ತಿಯ ಕನಸಿನೊಂದಿಗೆ ಅಂಗಳಕ್ಕೆ ಇಳಿಯಲಿದೆ. ಒಟ್ಟಾರೆ ಲೀಗ್‌ನಲ್ಲಿ ಆರ್‌ಸಿಬಿ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು ಯಾರು? ಇಲ್ಲಿದೆ ಮಾಹಿತಿ

ಆರ್‌ಸಿಬಿ ಈ ಬಾರಿ ಲೀಗ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಬೆಂಗಳೂರು ತಂಡ ಎರಡನೇ ಬಾರಿ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಈ ಬಾರಿಯ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರ ಬಗ್ಗೆ ವರದಿ ಇಲ್ಲಿದೆ.

IPL Final

ಆರ್‌ಸಿಬಿ ಪರ ಈ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಟಾರ್ ಪ್ಲೇಯರ್‌ ವಿರಾಟ್‌ ಕೊಹ್ಲಿ ಅವರಿಗೆ ಮೊದಲ ಸ್ಥಾನ. ಇವರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ. ಇವರು ಆಡಿದ 15 ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 600 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ, 4 ಅರ್ಧಶತಕಗಳು ಸೇರಿವೆ.

ರಜತ್‌ ಅಮೋಘ ಆಟ

ಈ ಬಾರಿಯ ಲೀಗ್‌ನಲ್ಲಿ ನಾಯಕ ರಜತ್ ಪಾಟಿದಾರ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 14 ಪಂದ್ಯಗಳಲ್ಲಿ 486 ರನ್‌ ಗಳಿಸಿದ್ದಾರೆ. ಇನ್ನು ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಅವರು ಸಹ ಈ ಲೀಗ್‌ನಲ್ಲಿ ಅಬ್ಬರಿಸಿದ್ದಾರೆ. ಇವರು ಈ ಲೀಗ್‌ನಲ್ಲಿ ಆಡಿದ 15 ಪಂದ್ಯದಲ್ಲಿ 35ರ ಸರಾಸರಿಯಲ್ಲಿ 463 ರನ್‌ ಕಲೆ ಹಾಕಿದ್ದಾರೆ. ಉಳಿದಂತೆ ಟೀಮ್ ಡೇವಿಡ್‌ (281 ರನ್), ಕೃನಾಲ್ ಪಾಂಡ್ಯ (225 ರನ್‌), ಫಿಲ್ ಸಾಲ್ಟ್‌ (202 ರನ್), ವೆಂಕಟೇಶ್‌ ಅಯ್ಯರ್‌ (177 ರನ್‌) ಭರವಸೆ ಮೂಡಿಸಿದ್ದಾರೆ.

ಭುವಿ ಸ್ವಿಂಗ್ ಕಮಾಲ್‌

ವಿಕೆಟ್‌ ಬೇಟೆಯಲ್ಲಿ ಸ್ವಿಂಗ್ ಕಿಂಗ್ ಖ್ಯಾತಿಯ ಭುವನೇಶ್ವರ್ ಕುಮಾರ್ ಅಬ್ಬರಿಸಿದ್ದಾರೆ. ಇವರು ಲೀಗ್‌ನಲ್ಲಿ ಆಡಿದ 15 ಪಂದ್ಯಗಳಲ್ಲಿ 8ರ ಎಕಾನಮಿಯಲ್ಲಿ 26 ವಿಕೆಟ್‌ ಕಬಳಿಸಿದ್ದಾರೆ. ಭುವಿ ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿದ್ದಾರೆ. ಯುವ ವೇಗದ ಬೌಲರ್ ರಸಿಕ್‌ ಸಲಾಂ ದಾರ್‌ (16 ವಿಕೆಟ್‌), ಕೃನಾಲ್ ಪಾಂಡ್ಯ (13 ವಿಕೆಟ್‌), ಜೋಶ್ ಹ್ಯಾಜಲ್‌ವುಡ್ (13 ವಿಕೆಟ್‌), ಇನ್ನು ಜಾಕೋಬ್ ಡಫಿ ಹಾಗೂ ಸುಯಶ್‌ ಶರ್ಮಾ ಸಹ ವಿಕೆಟ್‌ ಬೇಟೆ ನಡೆಸಿದ್ದು ಭರವಸೆ ಮೂಡಿಸಿದ್ದಾರೆ.

Story first published: Sunday, May 31, 2026, 9:40 [IST]
Other articles published on May 31, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+