Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಈ 5 ಸ್ಟಾರ್ ಆಲ್‌ರೌಂಡರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆಗೆ ಕೇವಲ 13 ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಐಪಿಎಲ್‌ನ ಎಲ್ಲಾ ಹತ್ತು ತಂಡಗಳು ಉಳಿಸಿಕೊಂಡಿರುವ ಮತ್ತು ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐ ಸಲ್ಲಿಸಿವೆ. ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರು ಇರುವುದರಿಂದ ಭಾರೀ ಕುತೂಹಲ ಮೂಡಿಸಿದೆ. ಈ ವರ್ಷ ಎಲ್ಲರ ಕಣ್ಣು ಮತ್ತೆ ಆಲ್‌ರೌಂಡರ್‌ಗಳ ಮೇಲೆ ನೆಟ್ಟಿದೆ. ಐಪಿಎಲ್‌ನಲ್ಲಿ ಆಲ್‌ರೌಂಡರ್‌ಗಳಿಗೆ ಯಾವಾಗಲೂ ಬೇಡಿಕೆ ಹೆಚ್ಚಿರುತ್ತದೆ. ಸ್ಯಾಮ್ ಕರ್ರಾನ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಆಟಗಾರರು ದಾಖಲೆಯ ಬೆಲೆಗೆ ಬಿಡ್ ಆಗಿದ್ದಾರೆ. ಈ ಬಾರಿಯೂ ಆಲ್‌ರೌಂಡರ್‌ಗಳು ಹರಾಜಿನಲ್ಲಿ ಗಮನ ಸೆಳೆಯುವ ಸಾಧ್ಯತೆಯಿದೆ. ಜೊತೆಗೆ ಅತಿ ಹೆಚ್ಚು ಮೊತ್ತ ಬಿಡ್ ಆಗುವ ಟಾಪ್ 5 ಸ್ಟಾರ್ ಆಲ್‌ರೌಂಡರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಗ್ಲೆನ್ ಮ್ಯಾಕ್ಸ್‌ವೆಲ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಐಪಿಎಲ್ 2024ರಲ್ಲಿ ಮ್ಯಾಕ್ಸ್‌ವೆಲ್ ಕಳಪೆ ಪ್ರದರ್ಶನ ನೀಡಿದರು. ಆದರೆ ಮ್ಯಾಕ್ಸ್‌ವೆಲ್ ಸ್ಪೋಟಕ ಬ್ಯಾಟಿಂಗ್, ಸ್ಪಿನ್ ಬೌಲಿಂಗ್ ಮತ್ತು ಸೂಪರ್ ಫೀಲ್ಡಿಂಗ್‌ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಅವರು ಐಪಿಎಲ್ 2025ರ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಡ್‌ ಆಗುವ ಸಾಧ್ಯತೆಯಿದೆ.

IPL franchises eye 5 star all-rounders in 2025 mega auction

ಸ್ಯಾಮ್ ಕರನ್: ಪಂಜಾಬ್ ಕಿಂಗ್ಸ್ ಕಳೆದ ಋತುವಿನಲ್ಲಿ 18.50 ಕೋಟಿ ರೂ.ಗೆ ಖರೀದಿಸಿದ ಹೊರತಾಗಿಯೂ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಬಿಡುಗಡೆ ಮಾಡಿದೆ. ಈಗ ಅವರು ಹರಾಜಿನಲ್ಲಿ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಶಿಖರ್ ಧವನ್ ಅನುಪಸ್ಥಿಯಲ್ಲಿ ಕರನ್ ಪಂಜಾಬ್ ನಾಯಕನಾಗಿದ್ದರು. ಇವರ ಮೇಲೂ ಐಪಿಎಲ್ ಫ್ರಾಂಚೈಸಿಗಳು ಹಣದ ಸುರಿಮಳೆ ಸುರಿಸುವ ಸಾಧ್ಯತೆಯಿದೆ.

ಮಾರ್ಕಸ್ ಸ್ಟೊಯಿನಿಸ್: ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಐಪಿಎಲ್ 2025 ರ ಹರಾಜಿಗೆ ಮುಂಚಿತವಾಗಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಉಳಿಸಿಕೊಂಡಿಲ್ಲ. ಅತ್ಯುತ್ತಮ ಪ್ರದರ್ಶನ ನೀಡಿದರೂ ಸ್ಟೊಯಿನಿಸ್ ಅವರನ್ನು ಉಳಿಸಿಕೊಳ್ಳಲು ಲಕ್ನೋ ಫ್ರಾಂಚೈಸಿ ಮನಸ್ಸು ಮಾಡಿಲ್ಲ. ಈಗ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಸ್ಪೋಟಕ ಬ್ಯಾಟಿಂಗ್‌ನ ಹೊರತಾಗಿ, ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಈ ಕಾರಣದಿಂದಾಗಿ ಸ್ಟೊಯಿನಿಸ್ ಅತಿ ಹೆಚ್ಚು ಬೆಲೆಗೆ ಬಿಡ್ ಆಗಬಹುದು.

ಟಿಮ್ ಡೇವಿಡ್ : ಮುಂಬೈ ಇಂಡಿಯನ್ಸ್ ಆಸ್ಟ್ರೇಲಿಯಾದ ಆಲ್‌ರೌಂಡರ್ ಟಿಮ್ ಡೇವಿಡ್ ಅವರನ್ನು ಬಿಡುಗಡೆ ಮಾಡಿದೆ. ಸ್ಫೋಟಕ ಪವರ್ ಹಿಟ್ಟಿಂಗ್ ಮತ್ತು ಮಿಂಚಿನ ಫೀಲ್ಡಿಂಗ್‌ಗೆ ಹೆಸರುವಾಸಿಯಾಗಿರುವ ಡೇವಿಡ್ ಅವರನ್ನು ಕಳೆದ ಋತುವಿನಲ್ಲಿ 8.25 ಕೋಟಿ ರೂ.ಗೆ ಮುಂಬೈ ಖರೀದಿಸಿತ್ತು. ಈ ಬಾರಿಯೂ ಹಲವು ತಂಡಗಳ ಪಟ್ಟಿಯಲ್ಲಿ ಡೇವಿಡ್ ಇರಲಿದ್ದಾರೆ.

ಕ್ಯಾಮರಾನ್ ಗ್ರೀನ್: ಆರ್‌ಸಿಬಿ ಐಪಿಎಲ್ 2025 ಟೂರ್ನಿಗಾಗಿ ಕ್ಯಾಮರಾನ್ ಗ್ರೀನ್ ಅವರನ್ನು ಉಳಿಸಿಕೊಂಡಿಲ್ಲ. ಗ್ರೀನ್ ಅವರನ್ನು ಮೊದಲು ಮುಂಬೈ ಇಂಡಿಯನ್ಸ್ 15 ಕೋಟಿ ರೂ. ಗೆ ಖರೀದಿಸಿತು. ನಂತರ ಆರ್‌ಸಿಬಿಗೆ ಕಳೆದ ಋತುವಿನಲ್ಲಿ 17.50 ಕೋಟಿ ರೂ. ಗೆ ಟ್ರೇಡ್ ಮಾಡಿತ್ತು. ಸದ್ಯ ಗಾಯಗೊಂಡಿರುವ ಅವರು ಸುಮಾರು 5-6 ತಿಂಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿದ್ದಾರೆ. ಈ ಕಾರಣದಿಂದಾಗಿ ಫ್ರಾಂಚೈಸಿಗಳು ಇವರ ಮೇಲೆ ಬೆಟ್ಟಿಂಗ್ ಕಟ್ಟುತ್ತಾರೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ.

Story first published: Monday, November 11, 2024, 14:07 [IST]
Other articles published on Nov 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+