IPL 2023: ಆತನನ್ನು ತಂಡಕ್ಕೆ ಸೇರಿಸಿಕೊಳ್ಳದ ಬಗ್ಗೆ ಎಲ್ಲಾ ಫ್ರಾಂಚೈಸಿಗಳಿಗೂ ವಿಷಾದವಿದೆ

ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಭಾರತದ ವಿರುದ್ದದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸರಣಿಯ ಎರಡನೇ ಟಿ20 ಪಂದ್ಯದಲ್ಲಿ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದರು. ಯುವ ಭಾರತೀಯ ಬೌಲಿಂಗ್ ತಂಡದ ವಿರುದ್ಧ ಶನಕ ಕೇವಲ 22 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಆರು ಸಿಕ್ಸರ್ ಸಹಿತ 56 ರನ್ ಗಳಿಸಿದರು.
ಭಾರತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಐಪಿಎಲ್ ಫ್ರಾಂಚೈಸಿಗಳು ಅವರನ್ನು ತಂಡಕ್ಕೆ ಸೇರಿಸಿಕೊಳ್ಳದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿವೆ. 2023ರ ಮಿನಿ ಹರಾಜಿನಲ್ಲಿ ಅವರನ್ನು ಯಾವುದೇ ತಂಡಗಳು ಅವರನ್ನು ಖರೀದಿ ಮಾಡಲು ಆಸಕ್ತಿ ತೋರಲಿಲ್ಲ.
ಏಷ್ಯಾಕಪ್‌ನಲ್ಲಿ ಶ್ರೀಲಂಕಾ ತಂಡವನ್ನು ಯಶಸ್ವಿಯಾಗಿ ಚಾಂಪಿಯನ್‌ಗಳನ್ನಾಗಿ ಮಾಡಿದ್ದ ದಸುನ್ ಶನಕರನ್ನು ಯಾವುದೇ ತಂಡಗಳು ಖರೀದಿ ಮಾಡದ್ದಕ್ಕೆ ಹಲವು ಮಾಜಿ ಕ್ರಿಕೆಟಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. 50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದರೂ ಅವರನ್ನು ಯಾರೂ ಖರೀದಿ ಮಾಡಲಿಲ್ಲ.
ಅದರಲ್ಲೂ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾಯಕನ ಅಗತ್ಯವಿತ್ತು, ಆದರೆ ಅವರು ಕೂಡ ದಸುನ್ ಶನಕ ಖರೀದಿ ಮಾಡಲು ಮುಂದಾಗಲಿಲ್ಲ. ಎಲ್ಲಾ ತಂಡಗಳು ದೊಡ್ಡ ದೊಡ್ಡ ಹೆಸರುಗಳ ಹಿಂದೆ ಬಿದ್ದವು. ಕೋಟಿಗಟ್ಟಲೆ ಹಣ ಸುರಿದರು. ಆದರೆ ಪ್ರತಿಭಾವಂತ ಆಟಗಾರನನ್ನು ಕಡೆಗಣಿಸಿದವು.

ಅತ್ಯುತ್ತಮ ಫಿನಿಶರ್
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಸುನ್ ಶನಕ ಉತ್ತಮ ಫಿನಿಶರ್ ಆಗಿದ್ದಾರೆ. ಅಂತಹ ಹಲವು ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಭಾರತದ ವಿರುದ್ಧದ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಅವರು 47*(19), 74*(38), 33*(18), 45(27), ಮತ್ತು 56*(22) ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ ಭಾರತದ ವಿರುದ್ಧ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಶ್ರೀಲಂಕಾ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಶ್ರೀಲಂಕಾ ತಂಡವನ್ನು 84 ಪಂದ್ಯಗಳಲ್ಲಿ ಮುನ್ನಡೆಸಿರುವ ಶನಕ ಲಸಿತ್ ಮಾಲಿಂಗ ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದ ನಂತರ ಅವರು ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

ಐಪಿಎಲ್ ತಂಡಕ್ಕೆ ಸೇರಲು ಅವಕಾಶ
ಭಾರತದ ವಿರುದ್ಧದ ಪ್ರದರ್ಶನದ ನಂತರ ಅವರು ಐಪಿಎಲ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಲಸಿತ್ ಮಾಲಿಂಗ ಭವಿಷ್ಯ ನುಡಿದಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದಾದರು ತಂಡ ಅವರನ್ನು ಗಾಯಗೊಂಡ ಆಟಗಾರನಿಗೆ ಬದಲಾಗಿ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಶನಕ ಅವರ ಇನ್ನಿಂಗ್ಸ್ ನಂತರ ಲಸಿತ್ ಮಾಲಿಂಗ ತಮ್ಮ ಟ್ವಿಟರ್ ನಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆತ ಯಾಕೆ ಹರಾಜಿನಲ್ಲಿ ಯಾಕೆ ಮಾರಾಟವಾಗಲಿಲ್ಲ ಎನ್ನುವುದು ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ. ಶನಕ ಶೀಘ್ರದಲ್ಲೇ ಆಡುವುದು ಖಚಿತ ಎಂದು ಹೇಳಿದರು.

ಸ್ಟಾರ್ ಆಟಗಾರರ ಹಿಂದೆ ಬಿದ್ದ ಫ್ರಾಂಚೈಸಿಗಳು
2023ರ ಐಪಿಎಲ್ ಮಿನಿ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿಗಳು ಸ್ಟಾರ್ ಆಟಗಾರರ ಹಿಂದೆ ಬಿದ್ದರು. ಸ್ಯಾಮ್ ಕರನ್, ಕೆಮರೂನ್ ಗ್ರೀನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್ಸ್, ನಿಕೋಲಸ್ ಪೂರನ್ ಕೋಟಿ ಕೋಟಿ ರುಪಾಯಿ ಮೊತ್ತಕ್ಕೆ ಮಾರಾಟವಾದರು.
ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ದಸುನ್ ಶನಕತನ್ನು ಯಾವುದೇ ತಂಡಗಳು ಅವರನ್ನು ಖರೀದಿ ಮಾಡಲು ಆಸಕ್ತಿ ತೋರಿಸಲಿಲ್ಲ. 2023ರ ಆವೃತ್ತಿಗಾಗಿ ನಾಯಕನ ಹುಡುಕಾಟದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಶನಕ ಉತ್ತಮ ಆಯ್ಕೆಯಾಗಿದ್ದರು ಆದರೆ ಅವರು ಶನಕರ ಬಗ್ಗೆ ಯಾವುದೇ ಆಸಕ್ತಿ ತೋರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications