For Quick Alerts
ALLOW NOTIFICATIONS  
For Daily Alerts
 

IPL ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿ

ಮಾರ್ಚ್‌ 28 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಆರಂಭವಾಗುತ್ತದೆ. ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಎಚ್‌) ತಂಡಗಳು ಕಾದಾಟ ನಡೆಸಲಿವೆ. ಎರಡೂ ತಂಡಗಳೂ ಗೆಲುವಿನ ಆರಂಭವನ್ನು ಮಾಡುವ ಕನಸನ್ನು ಕಾಣುತ್ತಿವೆ. ಈ ಬಾರಿ ಆರ್‌ಸಿಬಿ ಪ್ರಶಸ್ತಿ ಡಿಫೆಂಡ್‌ ಮಾಡಿಕೊಳ್ಳುವ ನಿಟ್ಟಿನಲ್ಲಿ ಕನಸು ನೆಟ್ಟಿದೆ.

ಹೊಡಿ ಬಡಿ ಆಟದಲ್ಲಿ ಬ್ಯಾಟರ್‌ಗಳ ಆರ್ಭಟ ಜೋರಾಗಿರುತ್ತದೆ. ಈ ವೇಳೆ ಸ್ಟಾರ್ ಆಟಗಾರರು ಬಿರುಸಿನ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್‌ಗಳನ್ನು ಕಾಡುತ್ತಾರೆ. ಈ ವರದಿಯಲ್ಲಿ ಐಪಿಎಲ್‌ ಇತಿಹಾಸದಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪರಿಚಯ ಇಲ್ಲಿದೆ.

IPL

2009ರಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ರಾಬ್ ಕ್ವಿನಿ ಮೊದಲ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಇವರು ರಾಜಸ್ಥಾನ ಪರ ಆಡುವಾಗ ಈ ಸಾಧನೆ ಮಾಡಿದ್ದರು.

ರಾಜಸ್ಥಾನ ಪರ ಆಡುವಾಗ ಕೆವೊನ್ ಕೂಪರ್ ಸಹ ಇಂತಹದ್ದೇ ಸಾಧನೆ ಮಾಡಿದ್ದಾರೆ. ಇವರು ಜೇಮ್ಸ್ ಫಾಕ್ನರ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಖಾತೆ ಓಪನ್ ಮಾಡಿದ್ದರು.

ವಿಶ್ವ ಚಾಂಪಿಯನ್ನರನ್ನು ಗೌರವಿಸಿದ ಸಿಎಸ್‌ಕೆ: ಚೆಪಾಕ್ ಮೈದಾನದಲ್ಲಿ ಧೋನಿ ಕ್ರೇಜ್ವಿಶ್ವ ಚಾಂಪಿಯನ್ನರನ್ನು ಗೌರವಿಸಿದ ಸಿಎಸ್‌ಕೆ: ಚೆಪಾಕ್ ಮೈದಾನದಲ್ಲಿ ಧೋನಿ ಕ್ರೇಜ್

ವಿಂಡೀಸ್ ಬ್ಯಾಟರ್‌ಗಳ ಆರ್ಭಟ

ಇದೇ ಸಾಲಿನಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಇನ್ನೋಬ್ಬ ಆಟಗಾರ ಆಂಡ್ರೆ ರಸೆಲ್ ಸಹ ಸೇರುತ್ತಾರೆ. ಇವರು 2012ರಲ್ಲಿ ಡೆಲ್ಲಿ ಪರ ಆಡುವಾಗ ಐಪಿಎಲ್ ವೃತ್ತಿ ಜೀವನದಲ್ಲಿ ಎದುರಿಸಿದ ಮೊದಲ ಎಸೆತವನ್ನು ಸಿಕ್ಸರ್ ಬಾರಿಸಿದ್ದರು.

ವಿಂಡೀಸ್‌ ಆಟಗಾರರು ಮೊದಲಿನಿಂದಲೂ ಬಿಗ್ ಹಿಟ್‌ಗೆ ಹೆಸರುವಾಸಿ. ಈ ಸಾಲಿನಲ್ಲೇ ಸೇರುವ ಕಾರ್ಲೋಸ್ ಬ್ರಾಥ್‌ವೈಟ್ ಸಹ ಐಪಿಎಲ್‌ನಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ ಸಾಧನೆ ಮಾಡಿದ್ದಾರೆ. ಇವರು ಡೆಲ್ಲಿ ಡೇರ್ ಡೆವಿಲ್ಸ್‌ ಪರ ಆಡುವ 2016ರಲ್ಲಿ ಮೊದಲ ಎಸೆತವನ್ನೇ ಅಭಿಮಾನಿಗಳ ಗ್ಯಾಲರಿಗೆ ಅಟ್ಟಿದ್ದರು.

ಐಪಿಎಲ್‌ನಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಅನಿಕೇತ್ ಚೌಧರಿ ಅವರಿಗೆ ಸಲ್ಲುತ್ತದೆ. ಇವರು 2017 ರ ಋತುವಿನಲ್ಲಿ ಆರ್‌ಸಿಬಿ ಪರ ಆಡುವಾಗ ಅವರು ತಮ್ಮ ವೃತ್ತಿಜೀವನದ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು.

ಆರ್‌ಸಿಬಿ ಖರೀದಿ ರೇಸ್‌ಗೆ ಎಂಟ್ರಿ ನೀಡಿದ ಆದಿತ್ಯ ಬಿರ್ಲಾಆರ್‌ಸಿಬಿ ಖರೀದಿ ರೇಸ್‌ಗೆ ಎಂಟ್ರಿ ನೀಡಿದ ಆದಿತ್ಯ ಬಿರ್ಲಾ

ಭಾರತೀಯ ಬ್ಯಾಟರ್‌ಗಳಿಂದಲೂ ಸಾಧನೆ

2018ರ ಐಪಿಎಲ್‌ನಲ್ಲಿ ಜಾವೊನ್ ಸೀರ್ಲೆಸ್ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದ್ದಾರೆ. ಇವರು 2018 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಈ ಸಾಧನೆ ಮಾಡಿದ್ದರು.

2019ರ ಐಪಿಎಲ್‌ನಲ್ಲಿ ಮುಂಬೈ ಪರ ಆಡಿದ್ದ ಸಿದ್ದೇಶ್ ಲಾಡ್ ಸಹ ಇಂತಹದ್ದೇ ಸಾಧನೆ ಮಾಡಿದ್ದರೆ. ಇವರು ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಬೀಗಿದ್ದರು.

ಶ್ರೀಲಂಕಾದ ಸ್ಪಿನ್ನರ್ ಮಹೀಷ್ ತೀಕ್ಷಣ 2022 ರಲ್ಲಿ ಆರ್‌ಸಿಬಿ ವಿರುದ್ಧ ಪದಾರ್ಪಣೆ ಮಾಡಿದ್ದರು. ಇವರು ಹರ್ಷಲ್‌ ಪಟೇಲ್ ಎಸೆತದಲ್ಲಿ ಬಿಗ್ ಹಿಟ್ ಬಾರಿಸಿದ್ದರು.

ಸಮೀರ್ ರಿಜ್ವಿ ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಇವರು ಗುಜರಾತ್ ಟೈಟಾನ್ಸ್ ವಿರುದ್ಧ ಆಡುವಾಗ ರಶೀದ್ ಖಾನ್‌ ಅವರ ಎಸೆತದಲ್ಲಿ ಸಿಕ್ಸರ್ ಬಾರಿಸಿ ಖಾತೆ ತೆರೆದಿದ್ದರು.

ವೈಭವ್ ಸೂರ್ಯವಂಶಿ ಐಪಿಎಲ್ 2025 ರಲ್ಲಿ ಅನುಭವಿ ಬೌಲರ್ ಶಾರ್ದುಲ್ ಠಾಕೂರ್ ಬೌಲಿಂಗ್ ನಲ್ಲಿ ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿ ದಾಖಲೆ ಬರೆದರು. ಇವರು ಐಪಿಎಲ್ ಇತಿಹಾಸದಲ್ಲಿ ಹಾಗೆ ಮಾಡಿದ ಅತ್ಯಂತ ಕಿರಿಯ ಆಟಗಾರ.

Story first published: Monday, March 23, 2026, 9:31 [IST]
Other articles published on Mar 23, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+