ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗುರುವಾರ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ 16 ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಬಿಡುಗಡೆ ಮಾಡಿತ್ತು. ಚುನಾವಣೆಗಳ ವೇಳಾಪಟ್ಟಿ ಪ್ರಕಟವಾದ ಮೇಲೆ ಉಳಿದ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಬೇಕಿತ್ತು. ಈಗ ಬಿಸಿಸಿಐ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎರಡನೇ ಹಂತದಲ್ಲಿ ಬಿಡುಗಡೆ ಮಾಡಲಾದ ವೇಳಾಪಟ್ಟಿಯಲ್ಲಿ ಫೈನಲ್ ಹಾಗೂ ಪ್ಲೇ ಆಫ್ ಸೇರಿಸಲಾಗಿಲ್ಲ. ಈ ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಲೀಗ್ ಹಂತದ ಪಂದ್ಯಗಳು ಮೇ 24ರಂದು ಮುಗಿಯಲಿವೆ. ಈ ವೇಳೆ ಒಟ್ಟು 12 ಸ್ಥಳಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ.

ಎರಡನೇ ಹಂತದ ವೇಳಾಪಟ್ಟಿ ಏಪ್ರಿಲ್ 13 ರಂದು ಆರಂಭವಾಗಲಿದೆ. ಎರಡನೇ ವೇಳಾಪಟ್ಟಿಯ ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್ ಹಾಗೂ ಆರ್‌ಆರ್ ತಂಡಗಳು ಕಾದಾಟ ನಡೆಸಲಿವೆ. ಎಂಟು ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಒಂದೇ ದಿನ ಎರಡು ಪಂದ್ಯಗಳು ನಡೆಯುವ ಪಂದ್ಯಗಳ ಮೊದಲ ಪಂದ್ಯ 3.30ಕ್ಕೆ ನಡೆಯಲಿದ್ದು, ಎರಡನೇ ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ. ಬೆಂಗಳೂರಿನಲ್ಲಿ ಆರ್‌ಸಿಬಿ ತಂಡ ತವರಿನ 5 ಪಂದ್ಯಗಳು ಮತ್ತು ರಾಯ್‌ಪುರದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.
| ಕ್ರಮ ಸಂಖ್ಯೆ | ದಿನಾಂಕ | ಪಂದ್ಯ (ತಂಡಗಳು) | ಸ್ಥಳ | ಸಮಯ (IST) |
|---|---|---|---|---|
| 1 | 28-ಮಾರ್ಚ್-2026 | ಆರ್‌ಸಿಬಿ vs ಎಸ್‌ಆರ್‌ಎಚ್ | ಬೆಂಗಳೂರು | ರಾತ್ರಿ 7:30 |
| 2 | 29-ಮಾರ್ಚ್-2026 | ಎಂಐ vs ಕೆಕೆಆರ್ | ಮುಂಬೈ | ರಾತ್ರಿ 7:30 |
| 3 | 30-ಮಾರ್ಚ್-2026 | ಆರ್‌ಆರ್ vs ಸಿಎಸ್‌ಕೆ | ಗುವಾಹಟಿ | ರಾತ್ರಿ 7:30 |
| 4 | 31-ಮಾರ್ಚ್-2026 | ಪಿಬಿಕೆಎಸ್ vs ಜಿಟಿ | ನ್ಯೂ ಚಂಡೀಗಢ | ರಾತ್ರಿ 7:30 |
| 5 | 01-ಏಪ್ರಿಲ್-2026 | ಎಲ್‌ಎಸ್‌ಜಿ vs ಡಿಸಿ | ಲಕ್ನೋ | ರಾತ್ರಿ 7:30 |
| 6 | 02-ಏಪ್ರಿಲ್-2026 | ಕೆಕೆಆರ್ vs ಎಸ್‌ಆರ್‌ಎಚ್ | ಕೋಲ್ಕತ್ತಾ | ರಾತ್ರಿ 7:30 |
| 7 | 03-ಏಪ್ರಿಲ್-2026 | ಸಿಎಸ್‌ಕೆ vs ಪಿಬಿಕೆಎಸ್ | ಚೆನ್ನೈ | ರಾತ್ರಿ 7:30 |
| 8 | 04-ಏಪ್ರಿಲ್-2026 | ಡಿಸಿ vs ಎಂಐ | ದೆಹಲಿ | ಮಧ್ಯಾಹ್ನ 3:30 |
| 9 | 04-ಏಪ್ರಿಲ್-2026 | ಜಿಟಿ vs ಆರ್‌ಆರ್ | ಅಹಮದಾಬಾದ್ | ರಾತ್ರಿ 7:30 |
| 10 | 05-ಏಪ್ರಿಲ್-2026 | ಎಸ್‌ಆರ್‌ಎಚ್ vs ಎಲ್‌ಎಸ್‌ಜಿ | ಹೈದರಾಬಾದ್ | ಮಧ್ಯಾಹ್ನ 3:30 |
| 11 | 05-ಏಪ್ರಿಲ್-2026 | ಆರ್‌ಸಿಬಿ vs ಸಿಎಸ್‌ಕೆ | ಬೆಂಗಳೂರು | ರಾತ್ರಿ 7:30 |
| 12 | 06-ಏಪ್ರಿಲ್-2026 | ಕೆಕೆಆರ್ vs ಪಿಬಿಕೆಎಸ್ | ಕೋಲ್ಕತ್ತಾ | ರಾತ್ರಿ 7:30 |
| 13 | 07-ಏಪ್ರಿಲ್-2026 | ಆರ್‌ಆರ್ vs ಎಂಐ | ಗುವಾಹಟಿ | ರಾತ್ರಿ 7:30 |
| 14 | 08-ಏಪ್ರಿಲ್-2026 | ಡಿಸಿ vs ಜಿಟಿ | ದೆಹಲಿ | ರಾತ್ರಿ 7:30 |
| 15 | 09-ಏಪ್ರಿಲ್-2026 | ಕೆಕೆಆರ್ vs ಎಲ್‌ಎಸ್‌ಜಿ | ಕೋಲ್ಕತ್ತಾ | ರಾತ್ರಿ 7:30 |
| 16 | 10-ಏಪ್ರಿಲ್-2026 | ಆರ್‌ಆರ್ vs ಆರ್‌ಸಿಬಿ | ಗುವಾಹಟಿ | ರಾತ್ರಿ 7:30 |
| 17 | 11-ಏಪ್ರಿಲ್-2026 | ಪಿಬಿಕೆಎಸ್ vs ಎಸ್‌ಆರ್‌ಎಚ್ | ನ್ಯೂ ಚಂಡೀಗಢ | ಮಧ್ಯಾಹ್ನ 3:30 |
| 18 | 11-ಏಪ್ರಿಲ್-2026 | ಸಿಎಸ್‌ಕೆ vs ಡಿಸಿ | ಚೆನ್ನೈ | ರಾತ್ರಿ 7:30 |
| 19 | 12-ಏಪ್ರಿಲ್-2026 | ಎಲ್‌ಎಸ್‌ಜಿ vs ಜಿಟಿ | ಲಕ್ನೋ | ಮಧ್ಯಾಹ್ನ 3:30 |
| 20 | 12-ಏಪ್ರಿಲ್-2026 | ಎಂಐ vs ಆರ್‌ಸಿಬಿ | ಮುಂಬೈ | ರಾತ್ರಿ 7:30 |
| 21 | 13-ಏಪ್ರಿಲ್-2026 | ಎಸ್‌ಆರ್‌ಎಚ್ vs ಆರ್‌ಆರ್ | ಹೈದರಾಬಾದ್ | ರಾತ್ರಿ 7:30 |
| 22 | 14-ಏಪ್ರಿಲ್-2026 | ಸಿಎಸ್‌ಕೆ vs ಕೆಕೆಆರ್ | ಚೆನ್ನೈ | ರಾತ್ರಿ 7:30 |
| 23 | 15-ಏಪ್ರಿಲ್-2026 | ಆರ್‌ಸಿಬಿ vs ಎಲ್‌ಎಸ್‌ಜಿ | ಬೆಂಗಳೂರು | ರಾತ್ರಿ 7:30 |
| 24 | 16-ಏಪ್ರಿಲ್-2026 | ಎಂಐ vs ಪಿಬಿಕೆಎಸ್ | ಮುಂಬೈ | ರಾತ್ರಿ 7:30 |
| 25 | 17-ಏಪ್ರಿಲ್-2026 | ಜಿಟಿ vs ಕೆಕೆಆರ್ | ಅಹಮದಾಬಾದ್ | ರಾತ್ರಿ 7:30 |
| 26 | 18-ಏಪ್ರಿಲ್-2026 | ಆರ್‌ಸಿಬಿ vs ಡಿಸಿ | ಬೆಂಗಳೂರು | ಮಧ್ಯಾಹ್ನ 3:30 |
| 27 | 18-ಏಪ್ರಿಲ್-2026 | ಎಸ್‌ಆರ್‌ಎಚ್ vs ಸಿಎಸ್‌ಕೆ | ಹೈದರಾಬಾದ್ | ರಾತ್ರಿ 7:30 |
| 28 | 19-ಏಪ್ರಿಲ್-2026 | ಕೆಕೆಆರ್ vs ಆರ್‌ಆರ್ | ಕೋಲ್ಕತ್ತಾ | ಮಧ್ಯಾಹ್ನ 3:30 |
| 29 | 19-ಏಪ್ರಿಲ್-2026 | ಪಿಬಿಕೆಎಸ್ vs ಎಲ್‌ಎಸ್‌ಜಿ | ನ್ಯೂ ಚಂಡೀಗಢ | ರಾತ್ರಿ 7:30 |
| 30 | 20-ಏಪ್ರಿಲ್-2026 | ಜಿಟಿ vs ಎಂಐ | ಅಹಮದಾಬಾದ್ | ರಾತ್ರಿ 7:30 |
| 31 | 21-ಏಪ್ರಿಲ್-2026 | ಎಸ್‌ಆರ್‌ಎಚ್ vs ಡಿಸಿ | ಹೈದರಾಬಾದ್ | ರಾತ್ರಿ 7:30 |
| 32 | 22-ಏಪ್ರಿಲ್-2026 | ಎಲ್‌ಎಸ್‌ಜಿ vs ಆರ್‌ಆರ್ | ಲಕ್ನೋ | ರಾತ್ರಿ 7:30 |
| 33 | 23-ಏಪ್ರಿಲ್-2026 | ಎಂಐ vs ಸಿಎಸ್‌ಕೆ | ಮುಂಬೈ | ರಾತ್ರಿ 7:30 |
| 34 | 24-ಏಪ್ರಿಲ್-2026 | ಆರ್‌ಸಿಬಿ vs ಜಿಟಿ | ಬೆಂಗಳೂರು | ರಾತ್ರಿ 7:30 |
| 35 | 25-ಏಪ್ರಿಲ್-2026 | ಡಿಸಿ vs ಪಿಬಿಕೆಎಸ್ | ದೆಹಲಿ | ಮಧ್ಯಾಹ್ನ 3:30 |
| 36 | 25-ಏಪ್ರಿಲ್-2026 | ಆರ್‌ಆರ್ vs ಎಸ್‌ಆರ್‌ಎಚ್ | ಜೈಪುರ | ರಾತ್ರಿ 7:30 |
| 37 | 26-ಏಪ್ರಿಲ್-2026 | ಜಿಟಿ vs ಸಿಎಸ್‌ಕೆ | ಅಹಮದಾಬಾದ್ | ಮಧ್ಯಾಹ್ನ 3:30 |
| 38 | 26-ಏಪ್ರಿಲ್-2026 | ಎಲ್‌ಎಸ್‌ಜಿ vs ಕೆಕೆಆರ್ | ಲಕ್ನೋ | ರಾತ್ರಿ 7:30 |
| 39 | 27-ಏಪ್ರಿಲ್-2026 | ಡಿಸಿ vs ಆರ್‌ಸಿಬಿ | ದೆಹಲಿ | ರಾತ್ರಿ 7:30 |
| 40 | 28-ಏಪ್ರಿಲ್-2026 | ಪಿಬಿಕೆಎಸ್ vs ಆರ್‌ಆರ್ | ನ್ಯೂ ಚಂಡೀಗಢ | ರಾತ್ರಿ 7:30 |
| 41 | 29-ಏಪ್ರಿಲ್-2026 | ಎಂಐ vs ಎಸ್‌ಆರ್‌ಎಚ್ | ಮುಂಬೈ | ರಾತ್ರಿ 7:30 |
| 42 | 30-ಏಪ್ರಿಲ್-2026 | ಜಿಟಿ vs ಆರ್‌ಸಿಬಿ | ಅಹಮದಾಬಾದ್ | ರಾತ್ರಿ 7:30 |
| 43 | 01-ಮೇ-2026 | ಆರ್‌ಆರ್ vs ಡಿಸಿ | ಜೈಪುರ | ರಾತ್ರಿ 7:30 |
| 44 | 02-ಮೇ-2026 | ಸಿಎಸ್‌ಕೆ vs ಎಂಐ | ಚೆನ್ನೈ | ರಾತ್ರಿ 7:30 |
| 45 | 03-ಮೇ-2026 | ಎಸ್‌ಆರ್‌ಎಚ್ vs ಕೆಕೆಆರ್ | ಹೈದರಾಬಾದ್ | ಮಧ್ಯಾಹ್ನ 3:30 |
| 46 | 03-ಮೇ-2026 | ಜಿಟಿ vs ಪಿಬಿಕೆಎಸ್ | ಅಹಮದಾಬಾದ್ | ರಾತ್ರಿ 7:30 |
| 47 | 04-ಮೇ-2026 | ಎಂಐ vs ಎಲ್‌ಎಸ್‌ಜಿ | ಮುಂಬೈ | ರಾತ್ರಿ 7:30 |
| 48 | 05-ಮೇ-2026 | ಡಿಸಿ vs ಸಿಎಸ್‌ಕೆ | ದೆಹಲಿ | ರಾತ್ರಿ 7:30 |
| 49 | 06-ಮೇ-2026 | ಎಸ್‌ಆರ್‌ಎಚ್ vs ಪಿಬಿಕೆಎಸ್ | ಹೈದರಾಬಾದ್ | ರಾತ್ರಿ 7:30 |
| 50 | 07-ಮೇ-2026 | ಎಲ್‌ಎಸ್‌ಜಿ vs ಆರ್‌ಸಿಬಿ | ಲಕ್ನೋ | ರಾತ್ರಿ 7:30 |
| 51 | 08-ಮೇ-2026 | ಡಿಸಿ vs ಕೆಕೆಆರ್ | ದೆಹಲಿ | ರಾತ್ರಿ 7:30 |
| 52 | 09-ಮೇ-2026 | ಆರ್‌ಆರ್ vs ಜಿಟಿ | ಜೈಪುರ | ರಾತ್ರಿ 7:30 |
| 53 | 10-ಮೇ-2026 | ಸಿಎಸ್‌ಕೆ vs ಎಲ್‌ಎಸ್‌ಜಿ | ಚೆನ್ನೈ | ಮಧ್ಯಾಹ್ನ 3:30 |
| 54 | 10-ಮೇ-2026 | ಆರ್‌ಸಿಬಿ vs ಎಂಐ | ರಾಯ್‌ಪುರ | ರಾತ್ರಿ 7:30 |
| 55 | 11-ಮೇ-2026 | ಪಿಬಿಕೆಎಸ್ vs ಡಿಸಿ | ಧರ್ಮಶಾಲಾ | ರಾತ್ರಿ 7:30 |
| 56 | 12-ಮೇ-2026 | ಜಿಟಿ vs ಎಸ್‌ಆರ್‌ಎಚ್ | ಅಹಮದಾಬಾದ್ | ರಾತ್ರಿ 7:30 |
| 57 | 13-ಮೇ-2026 | ಆರ್‌ಸಿಬಿ vs ಕೆಕೆಆರ್ | ರಾಯ್‌ಪುರ | ರಾತ್ರಿ 7:30 |
| 58 | 14-ಮೇ-2026 | ಪಿಬಿಕೆಎಸ್ vs ಎಂಐ | ಧರ್ಮಶಾಲಾ | ರಾತ್ರಿ 7:30 |
| 59 | 15-ಮೇ-2026 | ಎಲ್‌ಎಸ್‌ಜಿ vs ಸಿಎಸ್‌ಕೆ | ಲಕ್ನೋ | ರಾತ್ರಿ 7:30 |
| 60 | 16-ಮೇ-2026 | ಕೆಕೆಆರ್ vs ಜಿಟಿ | ಕೋಲ್ಕತ್ತಾ | ರಾತ್ರಿ 7:30 |
| 61 | 17-ಮೇ-2026 | ಪಿಬಿಕೆಎಸ್ vs ಆರ್‌ಸಿಬಿ | ಧರ್ಮಶಾಲಾ | ಮಧ್ಯಾಹ್ನ 3:30 |
| 62 | 17-ಮೇ-2026 | ಡಿಸಿ vs ಆರ್‌ಆರ್ | ದೆಹಲಿ | ರಾತ್ರಿ 7:30 |
| 63 | 18-ಮೇ-2026 | ಸಿಎಸ್‌ಕೆ vs ಎಸ್‌ಆರ್‌ಎಚ್ | ಚೆನ್ನೈ | ರಾತ್ರಿ 7:30 |
| 64 | 19-ಮೇ-2026 | ಆರ್‌ಆರ್ vs ಎಲ್‌ಎಸ್‌ಜಿ | ಜೈಪುರ | ರಾತ್ರಿ 7:30 |
| 65 | 20-ಮೇ-2026 | ಕೆಕೆಆರ್ vs ಎಂಐ | ಕೋಲ್ಕತ್ತಾ | ರಾತ್ರಿ 7:30 |
| 66 | 21-ಮೇ-2026 | ಜಿಟಿ vs ಡಿಸಿ | ಅಹಮದಾಬಾದ್ | ರಾತ್ರಿ 7:30 |
| 67 | 22-ಮೇ-2026 | ಎಸ್‌ಆರ್‌ಎಚ್ vs ಆರ್‌ಸಿಬಿ | ಹೈದರಾಬಾದ್ | ರಾತ್ರಿ 7:30 |
| 68 | 23-ಮೇ-2026 | ಎಲ್‌ಎಸ್‌ಜಿ vs ಪಿಬಿಕೆಎಸ್ | ಲಕ್ನೋ | ರಾತ್ರಿ 7:30 |
| 69 | 24-ಮೇ-2026 | ಎಂಐ vs ಆರ್‌ಆರ್ | ಮುಂಬೈ | ಮಧ್ಯಾಹ್ನ 3:30 |
| 70 | 24-ಮೇ-2026 | ಕೆಕೆಆರ್ vs ಡಿಸಿ | ಕೋಲ್ಕತ್ತಾ | ರಾತ್ರಿ 7:30 |