For Quick Alerts
ALLOW NOTIFICATIONS  
For Daily Alerts
 

Hat-Trick Takers in IPL:ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಬೌಲರ್‌ಗಳ ಪಟ್ಟಿ: ಮೂವರು RCB ಆಟಗಾರರಿಂದಲೂ ಈ ಸಾಧನೆ

ಐಪಿಎಲ್‌ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭಾಗವಹಿಸಲು 10 ತಂಡಗಳು ಈಗಾಗಲೇ ಸಜ್ಜಾಗಿವೆ. ಇನ್ನು ಈ ಟೂರ್ನಿಯಲ್ಲಿ ಹೆಚ್ಚಾಗಿ ಬ್ಯಾಟರ್‌ಗಳ ಮೆರೆದಾಟ ಜೋರಾಗಿರುತ್ತದೆ. ಆದರೆ ಕೆಲವೊಮ್ಮೆ ಬೌಲರ್‌ಗಳು ಸಹ ಆರ್ಭಟ ನಡೆಸುತ್ತಾರೆ. ಬರೀ ಆರ್ಭಟ ನಡೆಸುವುದು ಅಲ್ಲ, ಎದುರಾಳಿ ರನ್‌ಗಳಿಗೆ ಕಡಿವಾಣ ಹಾಕಿ, ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಪಡೆದು ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡುತ್ತಾರೆ. ಐಪಿಎಲ್‌ ಇತಿಹಾಸದಲ್ಲಿ ಅದೆಷ್ಟೋ ಬೌಲರ್‌ಗಳು ತಮ್ಮ ಕರಾರುವಾಕ್‌ ದಾಳಿಯಿಂದ ಸಖತ್‌ ಫೇಮಸ್‌.

ಈ ಬೌಲರ್‌ಗಳು ಐಪಿಎಲ್‌ನಲ್ಲಿ ಶಿಸ್ತು ಬದ್ಧ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ಮಿಂಚುತ್ತಾರೆ. ಈ ವೇಳೆ ಕೆಲವು ಬೌಲರ್‌ಗಳು ಹ್ಯಾಟ್ರಿಕ್ ಸಾಧನೆ ಸಹ ಮಾಡುತ್ತಾರೆ. ಹಾಗಿದ್ದರೆ ಐಪಿಎಲ್‌ ಇತಿಹಾಸದಲ್ಲಿ ದಾಖಲಾದ ಹ್ಯಾಟ್ರಿಕ್‌ ವಿಕೆಟ್‌ಗಳ ಪಟ್ಟಿ ಇಲ್ಲಿದೆ.

IPL Hat-Trick Heroes A Look at Bowlers Who Made History with Stunning Spells
ಆಟಗಾರ ತಂಡ ಬೌಲಿಂಗ್ ಸಾಧನೆ ವಿರುದ್ಧ
ಲಕ್ಷ್ಮಿ ಪತಿ ಬಾಲಾಜಿ ಸಿಎಸ್‌ಕೆ 5/24 ಪಂಜಾಬ್ 2008
ಅಮಿತ್ ಮಿಶ್ರಾ ಡೆಲ್ಲಿ 5/17 ಡೆಕ್ಕನ್‌ ಚಾರ್ಜರ್ಸ್‌ 2008
ಮಖಾಯ್ ಎಂಟಿನಿ ಸಿಎಸ್‌ಕೆ 4/21 ಕೆಕೆಆರ್‌ 2008
ಯುವರಾಜ್ ಸಿಂಗ್ ಪಂಜಾಬ್‌ 3/22 ಆರ್‌ಸಿಬಿ 2009
ರೋಹಿತ್ ಶರ್ಮಾ ಡೆಕ್ಕನ್‌ ಚಾರ್ಜರ್ಸ್‌ 4/6 ಮುಂಬೈ 2009
ಯುವರಾಜ್‌ ಸಿಂಗ್ ಪಂಜಾಬ್‌ 3/13 ಡೆಕ್ಕನ್‌ ಚಾರ್ಜರ್ಸ್‌ 2009
ಪ್ರವೀಣ್ ಕುಮಾರ್ ಆರ್‌ಸಿಬಿ 3/18 ರಾಜಸ್ಥಾನ 2010
ಅಮಿತ್ ಮಿಶ್ರಾ ಡೆಕ್ಕನ್‌ ಚಾರ್ಜರ್ಸ್‌ 4/9 ರಾಜಸ್ಥಾನ 2011
ಅಜಿಂತ್ ಚಂಡಿಲಾ ರಾಜಸ್ಥಾನ 4/13 ಪುಣೆ 2012
ಸುನಿಲ್‌ ನರೈನ್‌ ಕೆಕೆಆರ್‌ 3/33 ಪಂಜಾಬ್ 2013
ಅಮಿತ್‌ ಮಿಶ್ರಾ ಎಸ್‌ಆರ್‌ಎಚ್‌ 4/19 ಪುಣೆೆ 2013
ಪ್ರವೀಣ್‌ ತಾಂಬೆ ರಾಜಸ್ಥಾನ 3/26 ಕೆಕೆಆರ್‌ 2014
ಶೇನ್ ವ್ಯಾಟ್ಸನ್‌ ರಾಜಸ್ಥಾನ 3/13 ಎಸ್‌ಆರ್‌ಎಚ್‌ 2014
ಅಕ್ಷರ್‌ ಪಟೇಲ್‌ ಪಂಜಾಬ್‌ 4/21 ಗುಜರಾತ್ ಲಯನ್ಸ್‌ 2016
ಸ್ಯಾಮ್ಯುಲ್ ಬದ್ರಿ ಆರ್‌ಸಿಬಿ 4/9 ಮುಂಬೈ 2017
ಅಂಡ್ರಿ ಟೈ ಗುಜರಾತ್‌ 5/17 ರೈಸಿಂಗ್ ಪುಣೆ 2017
ಜಯದೇವ್ ಉನಾದ್ಕಟ್‌ ರೈಸಿಂಗ್ ಪುಣೆ 5/30 ಎಸ್‌ಆರ್‌ಎಚ್‌ 2017
ಸ್ಯಾಮ್ ಕರನ್‌ ಪಂಜಾಬ್ 4/11 ಡೆಲ್ಲಿ 2019
ಶ್ರೇಯಸ್‌ ಗೋಪಾಲ್‌, ರಾಜಸ್ಥಾನ 3/12 ಆರ್‌ಸಿಬಿ 2019
ಹರ್ಷಲ್ ಪಟೇಲ್‌, ಆರ್‌ಸಿಬಿ 4/17 ಮುಂಬೈ 2021
ಯಜುವೇಂದ್ರ ಚಹಾಲ್‌ ರಾಜಸ್ಥಾನ 5/40 ಕೆಕೆಆರ್‌ 2022
ರಶೀದ್‌ ಖಾನ್‌ ಜಿಟಿ 3/35 ಕೆಕೆಆರ್‌ 2023

ಐಪಿಎಲ್‌ನಲ್ಲಿ ಮೊದಲ ಹ್ಯಾಟ್ರಿಕ್ ಪಡೆದ ಬೌಲರ್ ಯಾರು?

ಐಪಿಎಲ್‌ 2008ರಲ್ಲಿ ಲಕ್ಷ್ಮಿಪತಿ ಬಾಲಾಜಿ ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್ ಪಡೆದ ಬೌಲರ್‌. ಇವರು ಸಿಎಸ್‌ಕೆ ಪರ ಬೌಲಿಂಗ್ ನಡೆಸಿದ್ದರು. ಆಗ ಪಂಜಾಬ್‌ ಬ್ಯಾಟರ್‌ಗಳು ಇವರ ದಾಳಿಯನ್ನು ಅರಿಯುವಲ್ಲಿ ಎಡವಿದ್ದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಆಟಗಾರ ಯಾರು?

ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್ ಮಾಡಿದ ಸಾಧಕ ಅಮಿತ್ ಮಿಶ್ರಾ. ಇವರು ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.

ಒಂದೇ ಆವೃತ್ತಿಯಲ್ಲಿ ದಾಖಲಾದ ಗರಿಷ್ಠ ಹ್ಯಾಟ್ರಿಕ್ ಎಷ್ಟು?

ಮೂರು ಆವೃತ್ತಿ ಐಪಿಎಲ್‌ಗಳಲ್ಲಿ ಮೂರು ಹ್ಯಾಟ್ರಿಕ್‌ ಬಂದಿವೆ. 2008, 2009, 2017,

ಅಮಿತ್ ಮಿಶ್ರಾ

ಐಪಿಎಲ್‌ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಿಂದ ಬರೆದಿಡಿರುವ ಬೌಲರ್‌ಗಳ ಪಟ್ಟಿಯಲ್ಲಿ ಅಮಿತ್ ಮಿಶ್ರಾಗೂ ಸ್ಥಾನ. ಇವರು ತಮ್ಮ ಲೆಗ್ ಸ್ಪಿನ್ ಮೋಡಿಯಿಂದ ಎದುರಾಳಿಗಳನ್ನು ಕಾಡುತ್ತಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ 2008ರಲ್ಲಿ ಡೆಕ್ಕನ್‌ ಚಾರ್ಜಸ್‌ ಪರ ಇವರು ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದರು.

2011ರ ಐಪಿಎಲ್‌ನಲ್ಲೂ ಮಿಶ್ರಾ ಮತ್ತೊಮ್ಮೆ ಮೋಡಿ ಸ್ಪೆಲ್‌ ನಡೆಸಿದರು. ಈ ವೇಳೆ ಮಿಶ್ರಾ ಡೆಕ್ಕನ್‌ ಚಾರ್ಜಸ್‌ ಪರ ಆಡುತ್ತಾ, ಕಿಂಗ್ಸ್‌ ಇಲೆವೆನ್ ಪಂಜಾಬ್‌ ಬೌಲರ್‌ಗಳನ್ನು ಕಾಡಿದ್ದರು. ಈ ಪಂದ್ಯದಲ್ಲೂ ಮಿಶ್ರಾ ಸತತ ಮೂರು ವಿಕೆಟ್‌ ಪಡೆದು ಅಬ್ಬರಿಸಿದ್ದರು.

2013ರಲ್ಲೂ ಮತ್ತೊಮ್ಮೆ ಅಮಿತ್‌ ಮಿಶ್ರಾ ತಮ್ಮ ಹ್ಯಾಟ್ರಿಕ್‌ ಸಾಧನೆಯನ್ನು ಮುಂದುವರೆಸಿದರು. ಸನ್‌ರೈಸರ್ಸ್‌ ಹೈದರಾಬಾದ್ ಪರ ಬೌಲ್‌ ಮಾಡಿದ್ದ ಇವರು ಪುಣೆ ವಾರಿಯರ್ಸ್‌ ಬ್ಯಾಟರ್‌ಗಳನ್ನು ಕಾಡಿದ್ದರು. ಇವರ ಹ್ಯಾಟ್ರಿಕ್‌ಗೆ ಭುವನೇಶ್ವರ್ ಕುಮಾರ್, ರಾಹುಲ್ ಶರ್ಮಾ, ಅಶೋಕ್ ಧಿಂಡಾ ಬಲಿಯಾಗಿದ್ದರು.

ಯುವರಾಜ್‌ ಸಿಂಗ್‌ 2 ಹ್ಯಾಟ್ರಿಕ್‌

ತಮ್ಮ ಮುಗಿಲೆತ್ತರದ ಸಿಕ್ಸರ್‌ಗಳಿಂದ ಹೆಸರು ವಾಸಿಯಾಗಿದ್ದ ಯುವರಾಜ್‌ ಸಿಂಗ್ ಐಪಿಎಲ್‌ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಹ್ಯಾಟ್ರಿಕ್ ಪಡೆದ ಧೀರ. 2009ರ ಐಪಿಎಲ್‌ನಲ್ಲಿ ಪಂಜಾಬ್‌ ಪರ ಆಡಿದ್ದ ಯುವಿ, ಆರ್‌ಸಿಬಿ ತಂಡದ ರಾಬಿನ್ ಉತ್ತಪ್ಪ, ಜಾಕ್ ಕಾಲಿಸ್‌, ಮಾರ್ಕ್‌ ಬೌಚರ್‌ ಅವರನ್ನು ಪೆವೆಲಿಯನ್‌ಗೆ ಅಟ್ಟುವಲ್ಲಿ ಸಫಲರಾಗಿದ್ದರು.

ಇನ್ನು ಇದೇ ಆವೃತ್ತಿಯ ಮತ್ತೊಂದು ಪಂದ್ಯದಲ್ಲೂ ಯುವಿ ಅಮೋಘ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ ಡೆಕ್ಕನ್‌ ಚಾರ್ಜಸ್‌ ಬ್ಯಾಟರ್‌ಗಳನ್ನು ಕಾಡಿದ್ದರು. ಈ ಪಂದ್ಯದಲ್ಲೂ ಬಿಗುವಿನ ದಾಳಿ ನಡೆಸಿ ಪಂಜಾಬ್ ಪರ ಮಿಂಚಿದ್ದರು.

ಆರ್‌ಸಿಬಿ ಎಷ್ಟು ಬೌಲರ್‌ಗಳು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಆಟಗಾರ ಪ್ರವೀಣ್ ಕುಮಾರ್‌. ಇವರು 2010ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಈ ಸಾಧನೆ ಮಾಡಿದ್ದರು. ಇನ್ನು ವೆಸ್ಟ್‌ ಇಂಡೀಸ್ ತಂಡದ ಸ್ಯಾಮ್ಯೂಲ್‌ ಬದ್ರಿ ಸಹ ಬೆಂಗಳೂರು ತಂಡದ ಪರ ಆಡುವಾಗ ಈ ಸಾಧನೆ ಮಾಡಿದ್ದಾರೆ. ಇವರು 2017ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಈ ದಾಖಲೆ ಬರೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮತ್ತೊಬ್ಬ ಆರ್‌ಸಿಬಿ ಬೌಲರ್‌ ಹರ್ಷಲ್‌ ಪಟೇಲ್‌. ಇವರು ಮುಂಬೈ ಇಂಡಿಯನ್ಸ್‌ ವಿರುದ್ಧ ಆಡುವಾಗ 2021ರಲ್ಲಿ ಈ ಸಾಧನೆ ಮಾಡಿದ್ದರು.

Story first published: Friday, March 14, 2025, 20:00 [IST]
Other articles published on Mar 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+