Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL History: ಮೊದಲ ಎಸೆತದಲ್ಲೇ ವಿಕೆಟ್ ಬೇಟೆಯಾಡಿದ ಶಮಿ, ಭುವಿ; ತಂಡಗಳ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ನಂ.1

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಮೊದಲ ಎಸೆತದಿಂದಲೇ ರೋಚಕತೆ ಹುಟ್ಟಿಸಿರುತ್ತದೆ. ಹಲವು ಸ್ಟಾರ್ ಬ್ಯಾಟರ್‌ಗಳು ಮೊದಲ ಎಸೆತದಿಂದಲೇ ಆರ್ಭಟ ನಡೆಸುತ್ತಾರೆ. ಇನ್ನು ಕೆಲವು ಬೌಲರ್‌ಗಳು ಮೊದಲ ಎಸೆತದಲ್ಲೇ ವಿಕೆಟ್‌ ಪಡೆದು ಎದುರಾಳಿ ತಂಡಕ್ಕೆ ಶಾಕ್ ನೀಡುತ್ತಾರೆ. ಸ್ಟಾರ್ ಬೌಲರ್‌ಗಳು ಇನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಪಡೆದು ಬೀಗಿದ್ದಾರೆ. ಈ ಪಟ್ಟಿಯಲ್ಲಿ ಯಾವೆಲ್ಲಾ ಬೌಲರ್‌ಗಳು ಇದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಐಪಿಎಲ್‌ನಲ್ಲಿ ಮೊದಲ ಎಸೆತದಲ್ಲಿ ವಿಕೆಟ್‌ ಪಡೆದ ತಂಡಗಳ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಸ್ಥಾನದಲ್ಲಿದೆ. ಈ ತಂಡದ ಬೌಲರ್‌ಗಳು 13 ಬಾರಿ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಪಡೆದು, ಎದುರಾಳಿ ತಂಡಕ್ಕೆ ಶಾಕ್ ನೀಡಿದ್ದಾರೆ. ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಈ ತಂಡದ ಸ್ಟಾರ್‌ ಬೌಲರ್‌ಗಳು 11 ಬಾರಿ ಈ ಸಾಧನೆ ಮಾಡಿದ್ದಾರೆ.

IPL History

ಐಪಿಎಲ್‌ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್‌ಗಳನ್ನು ಅತಿ ಹೆಚ್ಚು ಬಾರಿ ಪಡೆದ ಕೀರ್ತಿ ಪಂಜಾಬ್ ಕಿಂಗ್ಸ್‌ಗೆ ಸಲ್ಲುತ್ತದೆ. ಈ ತಂಡ ಈ ಸಾಧನೆ 8 ಬಾರಿ ಮಾಡಿದೆ. ಇನ್ನು ಕೆಕೆಆರ್‌ ತಂಡ 7, ಡೆಲ್ಲಿ ಡೇರ್‌ಡೆವಿಲ್ಸ್‌ 7, ಆರ್‌ಸಿಬಿ 6 ಬಾರಿ ಈ ಸಾಧನೆ ಮಾಡಿದೆ.

ಮೊದಲ ಎಸೆತದಲ್ಲೇ ವಿಕೆಟ್‌ ಪಡೆದ ಬೌಲರ್‌ಗಳು ಇವರೇ

ಬೌಲರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೊಹಮ್ಮದ್‌ ಶಮಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ ಮೊದಲ ಎಸೆತದಲ್ಲಿ ಅತಿ ಹೆಚ್ಚು ಬಾರಿ ವಿಕೆಟ್‌ ಪಡೆದ ಹೆಗ್ಗಳಿಕೆ ಶಮಿ ಅವರಿಗೆ ಸಲ್ಲುತ್ತದೆ. ಇವರು 5 ಬಾರಿ ಈ ಸಾಧನೆ ಮಾಡಿದ್ದಾರೆ. ಮೊಹಮ್ಮದ್ ಶಮಿ ಈಗಾಗಲೇ ಐಪಿಎಲ್‌ನಲ್ಲಿ ಆರು ತಂಡಗಳ ಪರ ಕಣಕ್ಕೆ ಇಳಿದಿದ್ದು, ಆಡಿದ 131 ಪಂದ್ಯಗಳಲ್ಲಿ 143 ವಿಕೆಟ್‌ ಪಡೆದಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಮೊದಲ ಎಸೆತದಲ್ಲಿ ವಿಕೆಟ್‌ ಪಡೆದ ಕೀರ್ತಿಯನ್ನು ಟ್ರೆಂಟ್‌ ಬೋಲ್ಟ್‌, ಲಸಿತ್ ಮಲಿಂಗ್, ಭುವನೇಶ್ವರ್ ಕುಮಾರ್, ಉಮೇಶ್‌ ಯಾದವ್‌, ಪ್ರವೀಣ್‌ ಕುಮಾರ್‌, ಅಶೋಕ್‌ ದಿಂಡಾ ಸಹ ಇಂತಹದ್ದೇ ಸಾಧನೆ ಮಾಡಿದ್ದಾರೆ.

36 ವರ್ಷದ ಭುವನೇಶ್ವರ್‌ ಕುಮಾರ್‌ ಆರ್‌ಸಿಬಿ ತಂಡದ ಪರ ಆಡುತ್ತಿದ್ದು, ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಇವರಿಗೆ ಅಗ್ರಸ್ಥಾನ ಪಡೆದಿದ್ದಾರೆ. ಅಲ್ಲದೆ ಇವರು ಮೂರನೇ ಬಾರಿ ಪರ್ಪಲ್ ಕ್ಯಾಪ್ ಪಡೆಯುವ ರೇಸ್‌ನಲ್ಲಿದ್ದಾರೆ. ಇವರು ಐಪಿಎಲ್‌ನಲ್ಲಿ 3 ತಂಡಗಳ ಪರ 203 ಪಂದ್ಯ ಆಡಿದ್ದು 222 ವಿಕೆಟ್‌ ಪಡೆದಿದ್ದಾರೆ.

Story first published: Thursday, May 21, 2026, 12:10 [IST]
Other articles published on May 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+