ಟಿ20 ಕ್ರಿಕೆಟ್‌ನಲ್ಲಿ ಮೊದಲಿನಿಂದಲೂ ಬ್ಯಾಟರ್‌ಗಳ ಆರ್ಭಟ ಜೋರಾಗಿರುತ್ತದೆ. ಆದ್ರೆ ಬ್ಯಾಟರ್‌ಗಳ ಆರ್ಭಟಕ್ಕೆ ಕಡಿವಾಣ ಹಾಕಿ, ಅಬ್ಬರಿಸುವ ಬೌಲರ್‌ಗಳ ಸಂಖ್ಯೆಗೂ ಏನು ಕಮ್ಮಿ ಇಲ್ಲ. ಸ್ಟಾರ್ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಪಂದ್ಯದ ಗತಿಯನ್ನೆ ಬದಲಿಸುವ ಕ್ಷಮತೆಯನ್ನು ಹೊಂದಿದ್ದಾರೆ. ಸತತ ವಿಕೆಟ್ ಬೇಟೆ ನಡೆಸುತ್ತಾ ಎದುರಾಳಿ ತಂಡದ ನಿದ್ದೆಯನ್ನು ಗೆಡಿಸಿದ್ದಾರೆ. ಹಾಗಿದ್ದರೆ ಐಪಿಎಲ್‌ನಲ್ಲಿ ದಾಖಲಾಗಿರುವ ಬೆಸ್ಟ್ ಬೌಲಿಂಗ್ ಹಾಕಿದ್ದು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
17 ಆವೃತ್ತಿಯ ಐಪಿಎಲ್‌ನಲ್ಲಿ ಅದೆಷ್ಟೋ ಬೌಲರ್‌ಗಳ ಅಮೋಘ ಸಾಧನೆಯನ್ನು ಮಾಡುವ ಮೂಲಕ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಹಲವು ಬೌಲರ್‌ಗಳು ಒಂದೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಬೀಗಿದ್ದಾರೆ. ಈ ಬೌಲರ್‌ಗಳು ತಾವು ಪ್ರತಿನಿಧಿಸುವ ತಂಡಕ್ಕೆ ಗೆಲುವಿನ ಹಾರವನ್ನು ತೊಡಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್‌ಗಳ ಪಟ್ಟಿಯನ್ನು ನೋಡುವುದಾದರೆ, ಈ ಪಟ್ಟಿಯಲ್ಲಿ ಅಲ್ಜಾರಿ ಜೋಸೆಫ್ ಅವರಿಗೆ ಅಗ್ರ ಸ್ಥಾನ. ಈ ಪಟ್ಟಿಯಲ್ಲಿ ಸಾಕಷ್ಟು ಸ್ಟಾರ್ ಆಟಗಾರರು ಇದ್ದಾರೆ. ಸೋಹಿಲ್ ತನ್ವೀರ್, ಅನಿಲ್ ಕುಂಬ್ಳೆ, ಆಡಂ ಜಂಪಾ, ಜಸ್ಪ್ರಿತ್ ಬುಮ್ರಾ ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳ ನಿದ್ದೆ ಕೆಡಿಸಿದ್ದಾರೆ.
| ಆಟಗಾರ | ತಂಡ | ಓವರ್ಸ್ | ವಿಕೆಟ್ | ವಿರುದ್ಧ | ದಿನಾಂಕ |
| ಅಲ್ಜಾರಿ ಜೋಸೆಫ್ | ಮುಂಬೈ | 3.4 | 6 | ಎಸ್‌ಆರ್‌ಎಚ್ | ಏ.6, 2019 |
| ಸೋಹಿಲ್ ತನ್ವಿರ್ | ರಾಜಸ್ಥಾನ | 4 | 6 | ಸಿಎಸ್‌ಕೆ | ಮೇ 4, 2008 |
| ಆಡಂ ಜಂಪಾ | ಪುಣೆ | 4 | 6 | ಎಸ್‌ಆರ್‌ಎಚ್ | ಮೇ 10, 2016 |
| ಅನಿಲ್ ಕುಂಬ್ಳೆ | ಆರ್‌ಸಿಬಿ | 3.1 | 5 | ರಾಜಸ್ಥಾನ | ಏ.18, 2009 |
| ಆಕಾಶ್ ಮದ್ವಾಲ್ | ಮುಂಬೈ | 3.3 | 5 | ಎಲ್‌ಎಸ್‌ಜಿ | ಮೇ 24, 2023 |
| ಜಸ್ಪ್ರಿತ್ ಬುಮ್ರಾ | ಮುಂಬೈ | 4 | 5 | ಕೆಕೆಆರ್ | ಮೇ 9, 2022 |
| ಮೋಹಿತ್ ಶರ್ಮಾ | ಜಿಟಿ | 2.2 | 5 | ಮುಂಬೈ | ಮೇ 26, 2023 |
| ಇಶಾಂತ್ ಶರ್ಮಾ | ಡಿಸಿಎಚ್ | 3 | 5 | ಕೊಚ್ಚಿ | ಏ.27, 2011 |
| ಲಸಿತ್ ಮಲಿಂಗಾ | ಮುಂಬೈ | 3.4 | 5 | ಡಿಸಿ | ಏ.10, 2011 |
| ಅಂಕಿತ್ ರಾಜಪೂತ್ | ಪಂಜಾಬ್ | 4 | 5 | ಎಸ್‌ಆರ್‌ಎಚ್ | ಏ.26, 2018 |
| ಮಾರ್ಕ್ ವುಡ್ | ಎಲ್‌ಎಸ್‌ಜಿ | 4 | 5 | ಡಿಸಿ | ಏ.1, 2023 |
| ಆಂಡ್ರಿ ರಸೆಲ್ | ಕೆಕೆಆರ್ | 2 | 5 | ಮುಂಬೈ | ಏ.13, 2021 |
| ರವೀಂದ್ರ ಜಡೇಜಾ | ಸಿಎಸ್‌ಕೆ | 4 | 5 | ಡಿಸಿಎಚ್ | ಏ.7, 2012 |
| ಜೇಮ್ಸ್ ಫಾಕ್ನರ್ | ರಾಜಸ್ಥಾನ | 4 | 5 | ಎಸ್‌ಆರ್‌ಎಚ್ | ಮೇ 17, 2013 |
| ಅಮಿತ್ ಮಿಶ್ರಾ | ಡೆಲ್ಲಿ | 4 | 5 | ಎಸ್‌ಆರ್‌ಎಚ್ | ಮೇ 15, 2008 |
ಐಪಿಎಲ್‌ನ ಬೆಸ್ಟ್ ಸ್ಪೆಲ್‌ಗಳ ಪಟ್ಟಿಯನ್ನು ನೋಡಿದಾಗ ವೆಸ್ಟ್ ಇಂಡೀಸ್ ತಂಡದ ಅಲ್ಜಾರಿ ಜೋಸೆಫ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರು ಮುಂಬೈ ಪರ 3.4 ಓವರ್ ಬೌಲ್ ಮಾಡಿ 12 ರನ್ ನೀಡಿ ಎಸ್‌ಆರ್‌ಎಚ್ ತಂಡದ 6 ವಿಕೆಟ್ ಕಬಳಿಸಿದ್ದರು. ಇನ್ನು ಸೋಹಿಲ್ ತನ್ವೀರ್ ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಎರಡನೇ ಆಟಗಾರ. ಇವರು 2008ರಲ್ಲಿ ರಾಜಸ್ಥಾನ ಪರ ಬೌಲ್ ಮಾಡಿ ಚೆನ್ನೈ ತಂಡದ 6 ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಈ ವೇಳೆ ಇವರು ಕೇವಲ 14 ರನ್ ನೀಡಿದ್ದರು. ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಆಡಂ ಜಂಪಾ ಸಹ ರೈಸಿಂಗ್ ಪುಣೆ ತಂಡದ ಪರ ಆಡಿ 19 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಅನಿಲ್ ಕುಂಬ್ಳೆ ಸಹ 2009ರಲ್ಲಿ ರಾಜಸ್ಥಾನ ವಿರುದ್ಧ 5 ವಿಕೆಟ್ ಕಬಳಿಸಿ ಆರ್ಭಟಿಸಿದ್ದರು.