Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಐಪಿಎಲ್: ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ

IPL in September-October, says Governing Council chairman

ಮುಂಬೈ, ಜೂನ್ 11: ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಯುವ ಸಾಧ್ಯತೆಯಿದೆ ಎಂದು ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಟಿ20 ವಿಶ್ವಕಪ್ ಬಗ್ಗೆ ಅಂತಿಮ ಘೋಷಣೆ ಮಾಡುವುದನ್ನು ಕಾಯುತ್ತಿರುವುದಾಗಿ ಬ್ರಿಜೇಶ್ ಹೇಳಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿ ನಡೆಸುವ ಬಗ್ಗೆ ಐಸಿಸಿ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಟಿ20 ವಿಶ್ವಕಪ್ ವಿಶ್ವಕಪ್ ನಿರ್ಧಾರವಾದ ಮೇಲೆ ಐಪಿಎಲ್ ಬಗ್ಗೆ ಅಂತಿಮ ನಿರ್ಧಾರ ತಾಳಲು ಬಿಸಿಸಿಐ ಯೋಚಿಸಿತ್ತು. ಆದರೆ ಐಸಿಸಿ ತನ್ನ ನಿರ್ಧಾರವನ್ನು ಮುಂದೂಡುತ್ತಿರುವುದರಿಂದ ಬಿಸಿಸಿಐಗೂ ತಲೆನೋವಾಗಿದೆ.

ಗುರುವಾರ (ಜೂನ್ 11) ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಪಟೇಲ್, 'ಐಪಿಎಲ್ ಟೂರ್ನಿಯತ್ತ ನಡೆಯಲು ನಾವು ತಯಾರಾಗಿದ್ದೇವೆ. ಆದರೆ ನಾವು ಟಿ20 ವಿಶ್ವಕಪ್ ನಿರ್ಧಾರದ ಬಳಿಕವೇ ಐಪಿಎಲ್ ಬಗ್ಗೆ ಅಂತಿಮ ನಿರ್ಧಾರ ತಾಳಬೇಕಿದೆ. ಟಿ20 ವಿಶ್ವಕಪ್ ನಿರ್ಧಾರ ಶೀಘ್ರದಲ್ಲೇ ಘೋಷಣೆಯಾಗಬಹುದು. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಐಪಿಎಲ್‌ಗೆ ದಿನಾಂಕವನ್ನು ನಾವು ಮೀಸಲಿಟ್ಟಿದ್ದೇವೆ,' ಎಂದಿದ್ದಾರೆ.

ಐಪಿಎಲ್ ಹಾಲಿ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಕೂಡ ಅಭ್ಯಾಸ ಆರಂಭಿಸಿದೆ. ಇದರರ್ಥ ಭಾರತದಲ್ಲಿ ಕೊರೊನಾವೈರಸ್‌ ಕಾರಣ ಸ್ಥಗಿತವಾಗಿದ್ದ ಕ್ರಿಕೆಟ್ ಚಟುವಟಿಕೆಗಳು ಶೀಘ್ರ ಪುನರಾರಂಭವಾಗುವುದರಲ್ಲಿದೆ.

Story first published: Thursday, June 11, 2020, 18:44 [IST]
Other articles published on Jun 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+