Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PSL, IPL ಯಾವುದು ಬೆಸ್ಟ್‌: ಇಂಗ್ಲೆಂಡ್ ಪ್ಲೇಯರ್‌ ಆನ್ಸರ್ ಕೇಳಿ ಪಾಕ್‌ ಕಂಗಾಲು

ಪಾಕಿಸ್ತಾನಕ್ಕೆ ವಿಶ್ವದ ಮುಂದೆ ತನ್ನ ಮಾನ ಕಳೆದುಕೊಳ್ಳುವುದು ರೂಡಿಯಾಗಿದೆ. ತನ್ನನ್ನು ತಾನು ಶ್ರೇಷ್ಠ ಎಂದು ತೋರಿಸಿಕೊಳ್ಳಲು ಹೋಗಿ ಹಲವು ಬಾರಿ ಪಾಕ್‌ ಜಗತ್ತಿನ ಮುಂದೆ ತನ್ನ ಸ್ಥಿತಿಯನ್ನು ತಾನೇ ತೆರೆದಿಟ್ಟಿದೆ. ಈಗ ಇಂತಹದ್ದೇ ಒಂದು ಘಟನೆ ಪಾಕಿಸ್ತಾನ ಪ್ರೀಮೀಯರ್ ಲೀಗ್ ವೇಳೆ ನಡೆದಿದೆ. ವಿಶ್ವದ ಸ್ಟಾರ್ ಆಟಗಾರರು ಪಿಎಸ್‌ಎಲ್‌ನಲ್ಲಿ ಭಾಗವಹಿಸುತ್ತಿದ್ದು, ಈ ವೇಳೆ ಪಿಎಸ್‌ಎಲ್‌ ದೊಡ್ಡ ಲೀಗ್ ಎಂದು ಹೇಳಿಕೊಳ್ಳುವ ಚಟದಲ್ಲಿ ಮತ್ತೆ ತನ್ನ ಮಾನವನ್ನು ತಾನೇ ಹಾಳು ಮಾಡಿಕೊಂಡಿದೆ. ಹಾಗಿದ್ದರೆ ಆಗಿದ್ದೇನು ಇಲ್ಲಿದೆ ವರದಿ.

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಈ ಲೀಗ್‌ನಲ್ಲಿ ವಿಶ್ವದ ಸ್ಟಾರ್ ಆಟಗಾರರು ಭಾಗವಹಿಸುತ್ತಿದ್ದಾರೆ. ಈ ವೇಳೆ ಈ ಲೀಗ್‌ನಲ್ಲಿ ಅನ್‌ಸೋಲ್ಡ್ ಆದ ಆಟಗಾರರು ವಿಶ್ವದಲ್ಲಿ ನಡೆಯುತ್ತಿರುವ ಬೇರೆ ಬೇರೆ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ರೀತಿ ಐಪಿಎಲ್‌ನಲ್ಲಿ ಅನ್‌ಸೋಲ್ಡ್ ಆದ ಇಂಗ್ಲೆಂಡ್ ಪ್ಲೇಯರ್‌ ಈಗ ಪಿಎಸ್‌ಎಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

IPL is Far Ahead of PSL Sam Billings Bold Statement Embarrasses Pakistan on Global Stage

ಇಂಗ್ಲೆಂಡ್ ಆಟಗಾರ ಸ್ಯಾಮ್ ಬಿಲ್ಲಿಂಗ್ಸ್ ಲಾಹೋರ್ ಖಲಂದರ್ಸ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ 65 ರನ್‌ಗಳಿಂದ ಕರಾಚಿ ಕಿಂಗ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಈ ವೇಳೆ ಲಾಹೋರ್ ಖಲಂದರ್ಸ್ ಪರ ಬ್ಯಾಟ್ ಮಾಡಿರುವ 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 19 ರನ್ ಬಾರಿಸಿ ಅಬ್ಬರಿಸಿದರು. ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪಾಕ್ ಪತ್ರಕರ್ತ ಕೇಳಿದ ಪ್ರಶ್ನೆಗೆ ಸ್ಯಾಮ್ ನಗುತ್ತಾ ಉತ್ತರ ನೀಡಿದರು.

ಪಿಎಸ್‌ಎಲ್‌, ಐಪಿಎಲ್‌ನಲ್ಲಿ ಯಾವುದು ಬೆಸ್ಟ್‌?

ನೀವು ನನ್ನ ಕಡೆಯಿಂದ ಏನಾದ್ರೂ ಸಿಲ್ಲಿ ಆನ್ಸರ್ ಬಯಸುತ್ತಿದ್ದೀರಾ.. ನಿಸ್ಸಂದೇಹವಾಗಿ ವಿಶ್ವದಲ್ಲಿ ಅದೆಷ್ಟೋ ಟಿ20 ಲೀಗ್‌ಗಳು ನಡೆಯುತ್ತವೆ. ಆದರೆ ಐಪಿಎಲ್‌ ಈ ಎಲ್ಲ ಲೀಗ್‌ಗಳಿಗಿಂತಲೂ ಮುಂದೆ ಇದೆ. ಐಪಿಎಲ್‌ ಹಿಂದೆಯೇ ಉಳಿದ ಎಲ್ಲ ಲೀಗ್‌ಗಳು ಇವೆ ಎಂದು ಸ್ಯಾಮ್ ಬಿಲ್ಲಿಂಗ್ಸ್ ಸ್ಪಷ್ಟವಾಗಿ ತಿಳಿಸಿದರು. ಇಷ್ಟೇ ಅಲ್ಲ ನಮ್ಮ ದೇಶ ಹಾಗೂ ಇತರೆ ದೇಶಗಳಲ್ಲಿ ಪ್ರೀಮಿಯರ್ ಲೀಗ್‌ನ್ನು ಆಯೋಜಿಸಲು ಶ್ರಮಿಸುತ್ತಿವೆ ಎಂದು ಹೇಳಿದ್ರು.

ಪಾಕ್‌ ಹೀಗೆ ತನ್ನ ಮಾನವನ್ನು ತಾನೇ ಹರಾಜು ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲಯ ಕರಾಚಿ ಕಿಂಗ್ಸ್‌ ಡೇವಿಡ್ ವಾರ್ನರ್‌ಗೂ ಇಂತಹದ್ದೇ ಎಡವಟ್ಟು ಪ್ರಶ್ನೆ ಕೇಳಿದ್ದರು. "ನೀವು ಐಪಿಎಲ್‌ನಲ್ಲಿ ಬಿಕರಿ ಆಗದೇ ಉಳಿದ ಬಳಿಕ, ಪಿಎಸ್‌ಎಲ್‌ ಆಡಿದ್ದಕ್ಕಾಗಿ ಭಾರತದಲ್ಲಿ ತಮ್ಮ ಫ್ಯಾನ್ಸ್ ನಿಮ್ಮನ್ನು ದ್ವೇಷಸುತ್ತಿದ್ದಾರೆ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ್ದ ವಾರ್ನರ್, ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು. ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಅಡುತ್ತಿದ್ದಾಗ ಬಿಡು ಇರಲಿಲ್ಲ. ಈಗ ಹಾಗಿಲ್ಲ. ಸದ್ಯ ನನ್ನ ಚಿತ್ತ ಕರಾಚಿ ಕಿಂಗ್ಸ್‌ ತಂಡಕ್ಕೆ ಚಾಂಪಿಯನ್ಸ್ ಪಟ್ಟ ತೊಡಿಸುವುದು ಆಗಿದೆ.

Story first published: Thursday, April 17, 2025, 13:21 [IST]
Other articles published on Apr 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+