"ಏಕದಿನ ಮತ್ತು ಟಿ20ಯಲ್ಲಿ ಇಂಗ್ಲೆಂಡ್ ನಂಬರ್ 1 ತಂಡವಾಗಲು ಐಪಿಎಲ್ ಕಾರಣ"

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆಟಗಾರರ ಐಪಿಎಲ್‌ನ ಪಾಲ್ಗೊಳ್ಳುವಿಕೆ ಕೂಡ ಚರ್ಚೆಗೆ ಬಂದಿದೆ. ಇಂಗ್ಲೆಂಡ್‌ನ ಕೆಲ ಮಾಜಿ ಆಟಗಾರರು ಐಪಿಎಲ್‌ಗೆ ಇಂಗ್ಲೆಂಡ್ ಆಟಗಾರರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ.
ಈ ವಿಚಾರವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಮ್ಯಾನೇಜಿಂಗ್ ಡೈರೆಕ್ಟರ್ ಆ್ಯಶ್ಲೇ ಗಿಲ್ಸ್ ಪ್ರತಿಕ್ರಿಯಿಸಿದ್ದಾರೆ. ಪ್ರತಿಷ್ಟಿತ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡ ಸಾಕಷ್ಟು ಗಳಿಸಿಕೊಂಡಿದೆ ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ. ಐಪಿಎಲ್ ಕಾರಣದಿಂದಾಗಿ ಇಂಗ್ಲೆಂಡ್ ಸೀಮಿತ ಓವರ್‌ಗಳ ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೇರಿದೆ ಎಂದು ಆ್ಯಶ್ಲೇ ಗಿಲ್ಸ್ ಹೇಳಿದ್ದಾರೆ.
ನಾನು ಆಟಗಾರೊಂದಿಗಿನ ಮಾತಿನ ಸಂದರ್ಭದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಪ್ರೋತ್ಸಾಹವನ್ನು ನೀಡುತ್ತೇನೆ. ನಾನು ಅವರಿಗೆ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ ಎಂದು ಗಿಲ್ಸ್ ಸ್ಕೈ ಸ್ಪೋರ್ಟ್ಸ್‌ನ ಕ್ರಿಕೆಟ್ ಶೋದಲ್ಲಿ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.
"ನಾವು ಯಾರನ್ನೂ ಒತ್ತಾಯಿಸುವುದಿಲ್ಲ. ಐಪಿಎಲ್ ಎಲ್ಲೆಲ್ಲೂ ನಡೆಯಲ್ಲ. ಇದರಿಂದ ನಮಗೆ ಸಾಕಷ್ಟು ಲಾಭವಿದೆ. ನಮ್ಮ ತಂಡದಲ್ಲಿರುವ 16 ಆಟಗಾರರ ಪೈಕಿ ಬಹುಶಃ 12 ಆಟಗಾರರು ಐಪಿಎಲ್‌ನಲ್ಲಿ ಆಡುವವರಿದ್ದಾರೆ. ಆರಂಭದಲ್ಲಿ ಐಪಿಎಲ್‌ನಲ್ಲಿ ಅವಕಾಶ ಪಡೆಯುವುದು ಆಟಗಾರರಿಗೆ ಕಷ್ಟವಾಗಿತ್ತು. ಆದರೆ ಈಗ ಆಟಗಾರರು ಸಾಕಷ್ಟು ಬೇಡಿಕೆಯನ್ನು ಹೊಂದಿದ್ದಾರೆ. ಇದೇ ಕಾರಣದಿಂದಾಗಿ ನಾವು ವೈಟ್‌ಬಾಲ್ ಕ್ರಿಕೆಟ್‌ನ ಎರಡು ಮಾದರಿಯಲ್ಲೂ ನಂಬರ್ 1 ತಂಡವಾಗಿದ್ದೇವೆ" ಎಂದಿದ್ದಾರೆ ಆ್ಯಶ್ಲೇ ಗಿಲ್ಸ್.
ಇದಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಕೂಡ ಪ್ರತಿಕ್ರಿಯಿಸಿದ್ದರು. ಇಂಗ್ಲೆಂಡ್ ಕ್ರಿಕೆಟರ್‌ಗಳ ಬೆಳವಣಿಗೆಗೆ ಐಪಿಎಲ್ ಸಾಕಷ್ಟು ಸಹಕಾರಿಯಾಗಿದೆ. ಇಂಗ್ಲೆಂಡ್ ತಂಡ ಐಪಿಎಲ್‌ನಿಂದ ಸಾಕಷ್ಟು ಗಳಿಸಿದೆ ಎಂದು ಹೇಳಿಕೆಯನ್ನು ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications