Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವದ ಶ್ರೀಮಂತ ಲೀಗ್‌ ಆಸ್ಟ್ರೇಲಿಯಾಕ್ಕೆ ಆತಿಥ್ಯ? ಭಾರತದಲ್ಲಿ Big Bash

ಭಾರತ ಹಾಗೂ ಆಸ್ಟ್ರೇಲಿಯಾ ಸಂಬಂಧಗಳು ಉತ್ತಮವಾಗಿ ಇವೆ. ಈ ಸಂಬಂಧಗಳು ಮತ್ತಷ್ಟು ಬಲಿಷ್ಠವಾಗಲು ವೇದಿಕೆ ಸಿದ್ಧವಾಗಿದೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್ ಬ್ಯಾಷ್‌ ಲೀಗ್‌ ಭಾರತದಲ್ಲಿ ನಡೆಯಲಿದೆ. ಚೆನ್ನೈನ ಚಿಪಾಕ ಮೈದಾನ ಡಿಸೆಂಬರ್‌ 12 ರಂದು ಬಿಗ್‌ ಬ್ಯಾಷ್‌ ಲೀಗ್‌ಗೆ ಆತಿಥ್ಯ ನೀಡಲಿದೆ. ಈ ಮೂಲಕ ವಿದೇಶದ ಲೀಗ್‌ ಮೊದಲ ಬಾರಿಗೆ ಭಾರತ ಸಾಕ್ಷಿಯಾಗಲಿದೆ. ಶುಕ್ರವಾರದ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಶುಕ್ರವಾರ ಜಂಟಿಯಾಗಿ ಇದನ್ನು ಘೋಷಿಸಿದರು.

ಬಿಗ್ ಬ್ಯಾಷ್ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಈ ಪಂದ್ಯ ಡಿಸೆಂಬರ್‌ 12 ರಂದು ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2:40ಕ್ಕೆ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ಆಗ ರಾತ್ರಿ 8.10 ಆಗಿರುತ್ತದೆ. ಹೀಗಾಗಿ ಬಿಗ್ ಬ್ಯಾಷ್‌ ಪಂದ್ಯಗಳು ಮಧ್ಯಾಹ್ನ ಸಾಕ್ಷಿಯಾಗಲಿದೆ. ಇದೇ ಸಮಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮೊದಲ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದ ಬಳಿಕ ಬಿಗ್ ಬ್ಯಾಷ್ ಪಂದ್ಯ ನಡೆಯಲಿದೆ. ಚೆನ್ನೈ ಮೈದಾನ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ ತವರು ಮೈದಾನ ಆಗಿರಲಿದೆ ಎಂದು ತಿಳಿದು ಬಂದಿದೆ.

Big Bash

ಚೆನ್ನೈ ಚೆಪಾಕ್‌ ಮೈದಾನ 38 ಸಾವಿರ ಆಸನಗಳನ್ನು ಹೊಂದಿದೆ. ಕ್ರಿಕೆಟ್‌ ಆಸ್ಟ್ರೇಲಿಯಾ ಬಿಗ್ ಬ್ಯಾಷ್‌ ಪಂದ್ಯವನ್ನು ಈ ಮೈದಾನದಲ್ಲಿ ನಡೆಸಲು ಉತ್ಸುಕವಾಗಿದೆ. ಬಿಗ್‌ ಬ್ಯಾಷ್‌ ಹಾಗೂ ಐಪಿಎಲ್‌ ನಡುವೆ ಹೋಲಿಕೆ ಮಾಡುವ ಅಗತ್ಯವೇ ಇಲ್ಲ. ಆದರೆ ಬಿಗ್ ಬ್ಯಾಷ್ ಲೀಗ್‌ಗೆ ಭಾರತದಲ್ಲಿ ಅಪಾರ ಅಭಿಮಾನಿಗಳು ಇದ್ದು, ಈ ಲೀಗ್‌ ಇಲ್ಲಿಯ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಪಂದ್ಯ ನಡೆಯುವುದರಿಂದ ಪಂದ್ಯದ ವೇಳೆ ಹಳದಿ ಬಣ್ಣದ ಜೆರ್ಸಿಗಳೇ ಹೆಚ್ಚಾಗಿ ಕಾಣುವ ಸಾಧ್ಯತೆ ಇದೆ ಎಂದು ಆಯೋಜಕರು ಲೆಕ್ಕ ಹಾಕಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಐಪಿಎಲ್‌ ಆಯೋಜನೆ?

ಬಿಬಿಎಲ್ ಮುಖ್ಯಸ್ಥ ಅಲಿಸ್ಟೈರ್ ಡಾಬ್ಸನ್ ಸದ್ಯ ಚೆನ್ನೈನಲ್ಲಿ ನಡೆಯುವ ಪಂದ್ಯ ಪ್ರಾಯೋಗಿಕವಾಗಿ ಆಗಿದೆ. ಒಂದು ವೇಳೆ ಇದು ಯಶಸ್ಸು ಕಂಡರೆ, ಪ್ರತಿ ವರ್ಷವೂ ಪಂದ್ಯ ನಡೆಸಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಭಾರತದ ಟಿ20 ಕ್ರಿಕೆಟ್‌ ಲೀಗ್‌ ಐಪಿಎಲ್‌ಗೂ ಆಸ್ಟ್ರೇಲಿಯಾ ಆತಿಥ್ಯ ನೀಡುವ ಇರಾದೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಹಾಗೂ ಅಲ್ಲಿನ ಮೈದಾನಗಳು ಐಪಿಎಲ್ ಆಯೋಜನೆಗೆ ಉತ್ಸುಕವಾಗಿವೆ. ಸೂಕ್ತ ಸಮಯವನ್ನು ನೋಡಿಕೊಂಡು ನಾವು ಈ ವಿಚಾರದ ಬಗ್ಗೆ ಬಿಸಿಸಿಐ ಜೊತೆಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

Story first published: Friday, July 10, 2026, 23:30 [IST]
Other articles published on Jul 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+