IPL Mega Auction 2025: ಪಂಜಾಬ್ ಕಿಂಗ್ಸ್ ಪಾಲಾದ ಅರ್ಷದೀಪ್ ಸಿಂಗ್ ಜೇಬಿಗೆ 18 ಕೋಟಿ
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್, ಅವರನ್ನು ಕೊಳ್ಳಲು ಮಾಲೀಕರು ಮುಗಿ ಬಿದ್ದರು. ಇವರನ್ನು ಕೊಳ್ಳಲು ಮಾಲೀಕರು ಹಣದ ಹೊಳೆಯನ್ನೇ ಹರಿಸಿದರು. ಇವರನ್ನು ಕೊಳ್ಳಲು ಐಪಿಎಲ್ ಹರಾಜಿನಲ್ಲಿ ಭಾಗಿಯಾಗಿದ್ದ ಎಲ್ಲ ತಂಡಗಳು ಬಾಜಿ ಕಟ್ಟಿದವು. 18 ಕೋಟಿ ರೂಪಾಯಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತು. ಪಂಜಾಬ್ ಕಿಂಗ್ಸ್ ಇವರಿಗೆ ಆರ್‌ಟಿಎಂ ಬಳಿಸಿ ತಂಡಕ್ಕೆ ಬರ ಮಾಡಿಕೊಂಡಿತು.
ಅರ್ಷದೀಪ್ ಸಿಂಗ್ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಡ್ ಆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಹೆಸರು ಕೇಳುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಅಖಾಡಕ್ಕೆ ಇಳಿಯಿತು. ಕೊಂಚ ಸಮಯದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರನ್ನು ಕೊಳ್ಳಲು ಮನಸ್ಸು ಮಾಡಿತು. ಈ ಎರಡೂ ತಂಡಗಳು ಇವರನ್ನು ಕೊಂಡಕೊಳ್ಳಲು ಬಿರುಸಿನ ಬಿಡ್ ನಡೆಸಿದವು. ಆದರೆ ಚೆನ್ನೈ 7.50 ಕೋಟಿ ರೂಪಾಯಿ ಬಳಿಕ ಅಖಾಡದಿಂದ ದೂರ ಸರಿಯಿತು.

ಬಳಿಕ ಅಖಾಡ ಪ್ರವೇಶಿಸಿದ ಗುಜಾರತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಣ ಫೈಟ್ ನಡೆಯಿತು. ಸುಮಾರು 10 ಕೋಟಿ ರೂಪಾಯಿಯ ಆಸುಪಾಸಿಗೆ ಈ ಹರಾಜಯ ತಲುಪಿದಾಗ ಆರ್‌ಸಿಬಿ ಸಹ ಅಂಗಳ ಪ್ರವೇಶಿಸಿತು. ಆದರೆ ಹೆಚ್ಚು ಹೊತ್ತು ಬಿಡ್ ಮಾಡಲಿಲ್ಲ. ಕೆಲವೇ ಬಿಡ್ ಮಾಡಿ ಅಂಗಳದಿಂದ ದೂರ ಸರಿಯಿತು. ಗುರಜಾತ್ ಟೈಟನ್ಸ್ ಅಖಾಡದಲ್ಲಿ ಏಕಾಂಗಿಯಾಗಿತ್ತು. ಬಳಿಕ ರಾಜಸ್ಥಾನ 11 ಕೋಟಿ ರೂಪಾಯಿಯಿಂದ ಬಿಡ್ಡಿಂಗ್ ಆರಂಭಿಸಿತು. 12.50 ಕೋಟಿ ರೂಪಾಯಿಗೆ ಗುಜರಾತ್ ಟೈಟನ್ಸ್ ತಂಡ ಕೊಂಡುಕೊಳ್ಳಲು ಮನಸ್ಸು ಮಾಡಿತ್ತು. ಆದರೆ ಆಗಲೇ ಸನ್ ರೈಸರ್ಸ್ ಹೈದರಾಬಾದ್ ತಂಡ ಅಂಗಳ ಪ್ರವೇಶಿಸಿತು.
ಐಪಿಎಲ್ ಸಾಧನೆ
ಅರ್ಷದೀಪ್ ಸಿಂಗ್: ಕಳೆದ ಕೆಲವು ಐಪಿಎಲ್ ಆವೃತ್ತಿಗಳಿಂದ ಟೀಮ್ ಇಂಡಿಯಾದ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮಿಂಚುತ್ತಿದ್ದಾರೆ. ಐಪಿಎಲ್‌ನಲ್ಲಿ ಅರ್ಷದೀಪ್ ಸಿಂಗ್ ಇದುವರಗೆ ಆಡಿರುವ 65 ಪಂದ್ಯಗಳನ್ನು ಆಡಿದ್ದು, 9.03 ರ ಸರಾಸರಿಯಲ್ಲಿ 76 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ ಒಮ್ಮೆ ಐದು ವಿಕೆಟ್ ಪಡೆದ ಸಾಧನೆಯನ್ನು ಅವರು ಮಾಡಿದ್ದಾರೆ. ತಮ್ಮ ವೇಗದ ಬೌಲಿಂಗ್ ಮೂಲಕ ಐಪಿಎಲ್‌ನಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ಖೆಡ್ಡಾ ತೋಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications