For Quick Alerts
ALLOW NOTIFICATIONS  
For Daily Alerts
 

IPL Auction RCB: 10.75 ಕೋಟಿ ರೂ.ಗೆ ಭುವಿ ಆರ್‌ಸಿಬಿ ಪಾಲು

ಟೀಮ್ ಇಂಡಿಯಾದ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಿ ಸೈ ಎನಿಸಿಕೊಂಡ ಆಟಗಾರ ಭುವನೇಶ್ವರ್‌ ಕುಮಾರ್. ಇವರು ಟೀಮ್ ಇಂಡಿಯಾಕ್ಕೆ ಕಮ್‌ ಬ್ಯಾಕ್‌ ಮಾಡಲು ಶ್ರಮಿಸುತ್ತಿದ್ದಾರೆ. ಆದರೆ ಇವರ ಆಸೆ ಕೈ ಗೂಡುತ್ತಿಲ್ಲ. 35 ವರ್ಷದ ಭರವಸೆಯ ಬೌಲರ್‌ ಡೆತ್‌ ಓವರ್ ಹಾಗೂ ಪವರ್‌ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಇವರು ಐಪಿಎಲ್‌ನ ಸ್ಟಾರ್‌ ಬೌಲರ್‌ಗಳಲ್ಲಿ ಒಬ್ಬರು. ಇವರನ್ನು ಕೊಳ್ಳಲು ಸಹ ಮಾಲೀಕರು ಹಣವನ್ನು ಹೂಡಿದರು. ಫೈನಲ್‌ ಆಗಿ ಇವರಿಗೆ ಆರ್‌ಸಿಬಿ 10.75 ಕೋಟಿ ತಂಡಕ್ಕೆ ಬರಮಾಡಿಕೊಂಡಿತು.

ಭುವನೇಶ್ವರ್ ಅವರನ್ನು ಕೊಳ್ಳಲು ಮಾಲೀಕರು ಹಣವನ್ನು ಹೂಡಲು ಮುಂದಾದವು. ಇವರು ಈಗಾಗಲೇ ಭಾರತದ ಪರ 21 ಟೆಸ್ಟ್‌, 121 ಏಕದಿನ ಪಂದ್ಯ, 87 ಟಿ20 ಪಂದ್ಯಗಳನ್ನು ಆಡಿ ಅಬ್ಬರಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 290ಕ್ಕೂ ಹೆಚ್ಚು ವಿಕೆಟ್‌ ಕಬಳಿಸಿದ್ದಾರೆ. ಇವರನ್ನು ಬಹು ವರ್ಷಗಳ ಕಾಲ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಬ್ಯಾಕ್ ಮಾಡಿತ್ತು. ಆದರೆ ಐಪಿಎಲ್‌ 2025ರಲ್ಲಿ ಇವರನ್ನು ಸನ್ ತಂಡ ಕೈ ಬಿಟ್ಟಿತು. ಹೀಗಾಗಿ ಇವರು ಹರಾಜು ಅಂಗಳ ಪ್ರವೇಶಿಸಿದರು. ಇವರನ್ನು ಕೊಳ್ಳಲು ಹಲವು ಮಾಲೀಕರು ಮುಂದಾದರು.

IPL Mega Auction 2025 Bhuvneshwar Kumar to RCB for rs10 75 Crores Full Player List

ಭುವನೇಶ್ವರ್ ಕುಮಾರ್ : ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌, ಸ್ವಿಂಗ್ ಕಿಂಗ್‌ ಖ್ಯಾತಿಯ ಭುವನೇಶ್ವರ್‌ ಕುಮಾರ್ ಐಪಿಎಲ್‌ನಲ್ಲಿ ಅದ್ಭುತ ಅಂಕಿ-ಅಂಶಗಳನ್ನು ಹೊಂದಿದ್ದಾರೆ. 2011 ರಿಂದ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಭುವನೇಶ್ವರ್ ಅನುಭವಿ ಬೌಲರ್‌ ಆಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿವರೆಗೆ ಭುವಿ ಐಪಿಎಲ್‌ನಲ್ಲಿ 176 ಪಂದ್ಯಗಳಲ್ಲಿ 7.56 ರ ಎಕಾನಮಿಯಲ್ಲಿ 181 ವಿಕೆಟ್‌ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಎರಡು ಬಾರಿ 5 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದು, 19 ರನ್‌ಗಳಿಗೆ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

Story first published: Monday, November 25, 2024, 16:32 [IST]
Other articles published on Nov 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+