ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿ ಸೈ ಎನಿಸಿಕೊಂಡಿದ್ದ ಸ್ಟಾರ್ ಪ್ಲೇಯರ್ ದೇವದತ್ ಪಡಿಕ್ಕಲ್, ಕೊನೆಗೂ ಆರ್‌ಸಿಬಿ ಪಾಲಾಗಿದ್ದಾರೆ. ಇವರು ಮೊದಲ ಬಾರಿಗೆ ಹರಾಜು ಅಂಗಳಕ್ಕೆ ಎಂಟ್ರಿ ನೀಡಿದಾಗ ಅನ್ ಸೋಲ್ಡ್ ಆಗಿದ್ದರು. ಆದರೆ ಎರಡನೇ ಬಾರಿಗೆ ಅಂಗಳ ಪ್ರವೇಶಿಸಿದ್ದಾಗ ಆರ್‌ಸಿಬಿ ಮೂಲ ಬೆಲೆಗೆ ಬಿಡ್ ಮಾಡಿತು. ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ, ಐಪಿಎಲ್‌ಗೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಇವರಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಕಂಡು ಆರ್‌ಸಿಬಿ ಇವರಿಗೆ ಮಣೆ ಹಾಕಿದೆ.
ತಾವು ಆಡಿದ ಐಪಿಎಲ್ ನ ಚೊಚ್ಚಲ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದ ದೇವದತ್ ಪಡಿಕ್ಕಲ್ ಮತ್ತೊಮ್ಮೆ ಆರ್‌ಸಿಬಿ ಪರ ಮಿಂಚಲು ರೆಡಿಯಾಗಿದ್ದಾರೆ. ಇವರು ಆರ್‌ಸಿಬಿ ಪರ ಚೊಚ್ಚಲ ಆವೃತ್ತಿಯನ್ನು ಆಡಿದಾಗ ಎಲ್ಲರ ಗಮನ ಸೆಳೆದಿದ್ದರು. ಈಗ ಮತ್ತೆ ರಾಜಸ್ಥಾನ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತಿರುಗಾಡಿ ಮತ್ತೆ ತವರು ತಂಡ ಸೇರಿದ್ದಾರೆ.

ದೇವದತ್ ಪಡಿಕ್ಕಲ್ ಈಗಾಗಲೇ ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ಪ್ಲೇಯರ್. ಇವರು ಆಡಿರುವ 64 ಪಂದ್ಯಗಳಲ್ಲಿ 123 ಸ್ಟ್ರೈಕ್ ರೇಟ್‌ನಲ್ಲಿ 1559 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 9 ಅರ್ಧಶತಕಗಳು ಸೇರಿವೆ.
ದೇಶೀಯ ಟೂರ್ನಿಯಲ್ಲಿ ಇವರು ಸ್ಥಿರ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಅಲ್ಲದೆ ಇವರಿಗೆ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಆಡುವ ಅವಕಾಶ ಸಿಕ್ಕಿತು. ಈ ವೇಳೆ ಅರ್ಧಶತಕ ಬಾರಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದರು. ಅಲ್ಲದೆ ಪರ್ತ್‌ನಲ್ಲಿ ನಡೆದ ಟೆಸ್ಟ್‌ನಲ್ಲೂ ಇವರು 25 ರನ್ ಬಾರಿಸಿ ಭರವಸೆ ಮೂಡಿಸಿದ್ದರು. ಇವರಿಗೆ ಆರ್‌ಸಿಬಿ ಮಣೆ ಹಾಕಿದೆ. ಹೀಗಾಗಿ ಆರ್‌ಸಿಬಿ ಟಾಪ್ ಆರ್ಡರ್ ಇನ್ನಷ್ಟು ಬಲಾಢ್ಯವಾದಂತೆ ಕಾಣುತ್ತಿದೆ.