ಕಳೆದ ಆವೃತ್ತಿಯಲ್ಲಿ ಬೆಂಗಳೂರು ತಂಡವನ್ನು ಮುನ್ನಡೆಸಿದ್ದ ಸ್ಟಾರ್ ಆಟಗಾರ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೇಸಿಸ್ ಅವರನ್ನು ಆರ್‌ಸಿಬಿ ಕೊಳ್ಳುವಲ್ಲಿ ವಿಫಲವಾಗಿದೆ. ಇವರಿಗೆ ಬೇಸ್ ಪ್ರೈಸ್ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಿಡ್ ಮಾಡಿತು. 2 ಕೋಟಿ ರೂಪಾಯಿಗೆ ಡೆಲ್ಲಿ ಬಿಡ್ ಮಾಡುತ್ತಿದ್ದಂತೆ ಇವರಿಗೆ ಆರ್‌ಟಿಎಂ ಬಳಸಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಆರ್‌ಸಿಬಿ ಅಭಿಮಾನಿಗಳ ಆಸೆ ಮಣ್ಣು ಪಾಲಾಗಿದೆ. ಈ ಬಾರಿ ಆರ್‌ಸಿಬಿ ಹರಾಜಿನಲ್ಲಿ ಫಾಫ್‌ಗೆ ಗೇಟ್ ಪಾಸ್ ನೀಡಿದೆ.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ಐಪಿಎಲ್‌ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಉತ್ತಮ ರನ್‌ಗಳನ್ನು ಗಳಿಸಿದ್ದು, ಸಾಕಷ್ಟು ಅನುಭವನ್ನು ಹೊಂದಿದ್ದಾರೆ. ಫಾಫ್ ಡು ಪ್ಲೆಸಿಸ್ ಇದುವರಗೆ ಐಪಿಎಲ್‌ನಲ್ಲಿ ಆಡಿರುವ 145 ಪ೦ದ್ಯಗಳಿಂದ 35.99 ರ ಸರಾಸರಿಯಲ್ಲಿ 4571 ರನ್ ಗಳಿಸಿದ್ದಾರೆ. ಈ ವೇಳೆ 37 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರ 96 ರನ್ ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ.

ಐಪಿಎಲ್‌ನಲ್ಲಿ ಕೆಜಿಎಪ್ ಎಂದರೆ, ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಪ್ ಡು ಪ್ಲೆಸಿಸ್. ಈ ಮೂವರು ಆರ್‌ಸಿಬಿ ತಂಡದ ಸ್ಟಾರ್ ಆಟಗಾರು ಅದ್ಭುತ ಪ್ರದರ್ಶನದ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. ಆದರೆ ಐಪಿಎಲ್ 2025ರ ಆವೃತ್ತಿಯಲ್ಲಿ ಅಭಿಮಾನಿಗಳು ಆರ್‌ಸಿಬಿಯಲ್ಲಿ ಕೆಜಿಎಫ್ ಶೋ ಕಾಣಲು ಸಾಧ್ಯವಿಲ್ಲ. ಐಪಿಎಲ್ 2024ರಲ್ಲಿ ಮ್ಯಾಕ್ಸ್‌ವೆಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲ್ಲ. ಹೀಗಾಗಿ ಅವರನ್ನು ಕೈ ಬಿಡಲಾಗಿದೆ. ಜೊತೆಗೆ ವಯಸ್ಸಿನ ಕಾರಣದಿಂದಾಗ ಫಾಪ್ ಅವರಿಗೂ ಗೇಟ್ ಪಾಸ್ ನೀಡಲಾಗಿದೆ ಎಂದು ವರದಿಗಳು ಹೇಳಿವೆ.