For Quick Alerts
ALLOW NOTIFICATIONS  
For Daily Alerts
 

IPL Auction RCB: ಗ್ಲೇನ್‌ ಮ್ಯಾಕ್ಸ್‌ವೆಲ್‌ಗೆ RTM ಬಳಸದ ಆರ್‌ಸಿಬಿ

ಗ್ಲೇನ್‌ ಮ್ಯಾಕ್ಸ್‌ವೆಲ್‌.. ಈ ಹೆಸರು ಕೇಳಿದರೆ ಸಾಕು ವಿಶ್ವ ಕ್ರಿಕೆಟ್‌ನಲ್ಲಿ ಇವರ ಹೆಜ್ಜೆ ಗುರುತುಗಳು ಕಾಣುತ್ತವೆ. ಅದೆಷ್ಟೋ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆಲಿಸಿದ್ದ ಪ್ಲೇಯರ್.. ಇವರು ಕಳೆದ ಆವೃತ್ತಿಯಲ್ಲಿ ಮಿಂಚಲು ವಿಫಲರಾಗಿದ್ದರು. ನಿಜ ಆದರೆ ಇವರ ಬಳಿಕ ಕ್ಷಮತೆನೇ ಇಲ್ಲ ಎಂದು ಏನು ಅಲ್ಲ. ಅಭಿಮಾನಿಗಳು ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರಿಗೆ ಆರ್‌ಸಿಬಿ ಆರ್‌ಟಿಎಂ ಬಳಸಬಹುದು ಎಂದು ಲೆಕ್ಕಾಚಾರವನ್ನು ಹಾಕಿಕೊಂಡಿತ್ತು. ಆದರೆ ಈ ಆಸೆ ಠುಸ್ ಆಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರನ್ನು ಕೊಳ್ಳಲು ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಅಖಾಡ ಪ್ರವೇಶಿಸಿದವು. ಇವರ ಮೂಲ ಬೆಲೆ 2 ಕೋಟಿಯಿಂದ ಹರಾಜು ಆರಂಭವಾಗಿ ನೊಡು ನೋಡಿತಿದ್ದಂತೆ ಬೆಳೆಯುತ್ತಲೇ ಸಾಗಿತು. ಈ ಸ್ಟಾರ್ ಆಲ್‌ರೌಂಡರ್‌ ಆಟದ ಕ್ಷಮತೆಯನ್ನು ಗುರುತಿಸಿದ್ದ ಫ್ರಾಂಚೈಸಿಗಳು ಹಣವನ್ನು ಹೂಡಲು ಮುಂದಾದವು. ಈ ವೇಳೆ ಕೊನೆಯ ಕ್ಷಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಸಹ ಅಂಗಳ ಪ್ರವೇಶಿಸಿತ್ತು.

IPL Mega Auction 2025 Glenn Maxwell Sold to PBKS for rs4 2 Crores Full Player List

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಬ್ಯಾಟ್‌ ಮಾಡಿದ್ದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು. ಇವರ ಬ್ಯಾಟ್‌ ಇಡಿ ಸರಣಿಯಲ್ಲಿ ಮೌನಕ್ಕೆ ಶರಣಾಗಿತ್ತು. ಹೀಗಾಗಿ ಆರ್‌ಸಿಬಿ ಇವರನ್ನು ಹರಾಜು ಅಂಗಳಕ್ಕೆ ಬಿಟ್ಟಿತು. ಇವರ ಈಗಾಗಲೇ ಐಪಿಎಲ್‌ನಲ್ಲಿ ಹಲವು ತಂಡಗಳ ಪರ ಆಡಿ ಸೈ ಎನಿಸಿಕೊಂಡಿದ್ದು, ಇವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಲು ಮೂರು ತಂಡಗಳು ಅಖಾಡ ಪ್ರವೇಶಿಸಿದವು.

ಮ್ಯಾಕ್ಸ್‌ವೆಲ್ ಸಾಧನೆ

ಗ್ಲೇನ್ ಮ್ಯಾಕ್ಸ್‌ವೆಲ್: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್‌ ಗ್ಲೇನ್ ಮ್ಯಾಕ್ಸ್‌ವೆಲ್ ಶ್ರೀಮಂತ್ ಕ್ರಿಕೆಟ್‌ ಲೀಗ್ ಐಪಿಎಲ್‌ನಲ್ಲಿ ಮಿಂಚಿದ್ದಾರೆ. ಅವರು ಆಡಿದ ತಂಡದ ಪರ ಬಿಗ್ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಜೊತೆಗೆ ಅವಶ್ಯಕತೆ ಇರುವ ಸಂದರ್ಭಗಳಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ವಿಕೆಟ್‌ಗಳನ್ನು ತೆಗೆದುಕೊಟ್ಟಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ ಆಡಿದ 134 ಪಂದ್ಯಗಳಲ್ಲಿ 24.74 ರ ಸರಾಸರಿಯಲ್ಲಿ 2771 ರನ್ ಬಾರಿಸಿದ್ದು, 18 ಅರ್ಧಶತಕಗಳನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ 95 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. ಇನ್ನೂ ಬೌಲಿಂಗ್‌ನಲ್ಲಿಯೂ 37 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Sunday, November 24, 2024, 19:36 [IST]
Other articles published on Nov 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+