IPL Mega Auction 2025: ಆರ್‌ಸಿಬಿಗೆ ಮರಳಿ ಬಂದ ಜೋಶ್ ಹ್ಯಾಜಲ್‌ವುಡ್!
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಬಲಿಷ್ಠ ತಂಡ ಕಟ್ಟುವ ಸಲುವಾಗಿ ಆಸ್ಟ್ರೇಲಿಯಾ ವೇಗದ ಬೌಲರ್ ಜೋಸ್ ಹ್ಯಾಜಲ್‌ವುಡ್ ಅವರನ್ನು ಬಿಡ್ ಮಾಡಿದೆ. ಕಳೆದ ಎರಡು ಐಪಿಎಲ್ ಆವೃತಿಗಳ ಹಿಂದೆ ಜೋಶ್ ಹ್ಯಾಜಲ್‌ವುಡ್ ಆರ್‌ಸಿಬಿಯಲ್ಲಿದ್ದಾರೆ. ಆದರೆ, ಕಳೆದ ಬಾರಿ ಅವರನ್ನು ಆರ್‌ಸಿಬಿ ತಂಡದಿಂದ ಕೈ ಬಿಟ್ಟಿತ್ತು. ಇದೀಗ ಮರಳಿ ಜೋಶ್ ಹ್ಯಾಜಲ್‌ವುಡ್ ಅವರನ್ನು ಆರ್‌ಸಿಬಿ 12.50 ಕೋಟಿ ರೂ. ಬಿಡ್ ಮಾಡಿದೆ.
ಐಪಿಎಲ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ತಮ್ಮ ಕರಾರುವಕ್ಕಾದ ಬೌಲಿಂಗ್ ಶೈಲಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ್ದಾರೆ. ಜೊತೆಗೆ ಉತ್ತಮ ಲೆಂತ್‌ನಲ್ಲಿ ಬೌಲಿಂಗ್ ಮಾಡುವುದರಲ್ಲಿ ಜೋಶ್ ಹ್ಯಾಜಲ್‌ವುಡ್ ನಿಸ್ಸೀಮರು. ಇದರೊಂದಿಗೆ ಅವರು ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ.

ಐಪಿಎಲ್‌ನಲ್ಲಿ ಇಲ್ಲಿವರಗೆ ಜೋಶ್ ಹ್ಯಾಜಲ್‌ವುಡ್ 27 ಪಂದ್ಯಗಳನ್ನು ಆಡಿದ್ದು, 8.06 ರ ಎಕನಾಮಿಯಲ್ಲಿ 35 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಎಂದರೆ 25 ರನ್‌ಗೆ 4 ವಿಕೆಟ್ ಕಬಳಿಸಿರುವುದು. ಇಲ್ಲಿವರೆಗೆ ಅವರು ಒಮ್ಮೆಯೂ ಐದು ವಿಕೆಟ್ ಪಡೆದ ಸಾಧನೆ ಮಾಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications