IPL Mega Auction 2025: ಕನ್ನಡಿಗರಿಗೆ ನಿರಾಸೆ: ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪಾಲು
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಕರ್ನಾಟಕದ ಕೆ.ಎಲ್ ರಾಹುಲ್ ಅವರನ್ನು ಕೊಳ್ಳಲು ಮಾಲೀಕರು ಹಣವನ್ನು ಹೂಡಲು ಮುಂದಾದವು. ಇವರ ಹೆಸರು ಕೇಳುತ್ತಿದ್ದಂತೆ ಆರ್‌ಸಿಬಿ ಸಹ ಹಣವನ್ನು ಹೂಡಲು ಮುಂದಾಯಿತು. ಈ ವೇಳೆ ಕೆಕೆಆರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಜಿದ್ದಿಗೆ ಇಳಿದವು. ಇವರನ್ನು ಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಸಹ ಮುಂದಾಯಿತು. ಇವರಿಗೆ 14 ಕೋಟಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಸಿಕೊಂಡಿತು. ರಾಹುಲ್ ಆರ್‌ಸಿಬಿ ಸೇರುತ್ತಾರೆ ಎಂಬ ಆಸೆಗೆ ಪೆಟ್ಟು ಬಿದ್ದಿದೆ.
ಪರ್ತ್‌ನಲ್ಲಿ ನಡೆಯುತ್ತಿರಯವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಅವರನ್ನು ಕೊಳ್ಳಲು ಮಾಲೀಕರು ಮುಂದಾದದರು. ಇವರು ಬಿರುಸಿನ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಡೆಸುವ ಕ್ಷಮತೆಯನ್ನು ಹೊಂದಿರುವ ಪ್ಲೇಯರ್ ಇಷ್ಟೇ ಅಲ್ಲದೆ, ತಂಡವನ್ನು ಮುನ್ನಡೆಸುವ ಕ್ಷಮತೆಯನ್ನು ಹೊಂದಿರುವ ಪ್ಲೇಯರ್. ಇವರನ್ನು ಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ತಂಡಗಳು ಮುಂದಾದವು. ಈ ಪ್ಲೇಯರ್ ನನ್ನು ಕೊಳ್ಳಲು ಆರ್‌ಸಿಬಿ ಹಣವನ್ನು ಹೂಡಲು ಮುಂದಾಗಲೇ ಇಲ್ಲ. ಈ ವೇಳೆ ಆರ್‌ಸಿಬಿ ಹಣವನ್ನು ಹೂಡಲಿಲ್ಲ. ಬಿಡ್‌ನ ಮಧ್ಯದಲ್ಲೇ ಆರ್‌ಸಿಬಿ ಅಖಾಡದಿಂದ ದೂರ ಉಳಿಸಿತು.

ಆರ್‌ಸಿಬಿ ಮುಂದಿನ ನಾಯಕ ಎಂದೇ ಬಿಂಬಿತವಾಗಿದ ಕೆಎಲ್ ರಾಹುಲ್ ಅವರಿಗೆ ನಿರಾಸೆಯಾಗಿದೆ. ನಿರೀಕ್ಷಿತ ಬೆಲೆಗೆ ಕೆಎಲ್ ರಾಹುಲ್ ಅವರು ಐಪಿಎಲ್ ಮೆಗಾ ಹರಾಜಿನಲ್ಲಿ ಸೇಲ್ ಆಗಿಲ್ಲ. ಆರ್‌ಸಿಬಿ ಅವರ ಮೇಲೆ ಹೆಚ್ಚಿನ ಹಣ ಹೂಡಿಕೆ ಮಾಡಿ ಬಿಡ್ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿದರು. ಆದರೆ, ವಿಜಯ್ ಭಾರಧ್ವಾಜ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕನ್ನಡಿಗ ರಾಹುಲ್ ಅವರನ್ನು ಬಿಡ್ ಮಾಡುವಲ್ಲಿ ಯಶಸ್ವಿಯಾಗಿದೆ. ಕನ್ನಡಿಗ ವಿಜಯ್ ಭಾರಧ್ವಾಜ್ ಅವರು ಡೆಲ್ಲಿಗೆ ಟ್ಯಾಲೆಂಟ್ ಸ್ಕೌಟ್ ಆಗಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗರ ಸಾರಥ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ.
ರಾಹುಲ್ ಸಾಧನೆ
ಐಪಿಎಲ್‌ನಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಹಲವು ದಾಖಲೆಗಳನ್ನು ಮಾಡಿದ್ದಾರೆ. ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಶೈಲಿ ಮೂಲಕ ಐಪಿಎಲ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಇತಿಹಾಸದಲ್ಲಿ ರಾಹುಲ್ ಒಟ್ಟು ಆಡಿದ 132 ಪಂದ್ಯಗಳಲ್ಲಿ 45.47 ರ ಸರಾಸರಿಯಲ್ಲಿ 4683 ರನ್‌ಗಳನ್ನು ಕಲೆ ಹಾಕಿದ್ದಾರೆ. 37 ಅರ್ಧಶತಕಗಳೊಂದಿಗೆ 4 ಐಪಿಎಲ್ ಶತಕಗಳನ್ನು ರಾಹುಲ್ ಬಾರಿಸಿದ್ದಾರೆ. 132 ರನ್ ಅವರ ಐಪಿಎಲ್‌ನ ಗರಿಷ್ಠ ಸ್ಕೋರ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications