IPL Mega Auction 2025: 10 ಕೋಟಿ ರೂ. ಎಸ್‌ಆರ್‌ಎಚ್ ತಂಡ ಸೇರಿದ ಮೊಹಮ್ಮದ್ ಶಮಿ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರನ್ನು ಕೊಳ್ಳಲು ಮಾಲೀಕರು ಮುಂದಾದರು. ಆರಂಭದಲ್ಲಿ ಇವರನ್ನು ಕೊಳ್ಳಲು ಚೆನ್ನೈ ಸಹ ಮನಸ್ಸು ಮಾಡಿತ್ತು. ಆದರೆ ಇವರ ನಿರೀಕ್ಷೆಗೂ ಮೀರಿ ಹಣದ ಹೊಳೆಯನ್ನು ಹರಿಸಲಾಯಿತು. ಪರಿಣಾಮ ಚೆನ್ನೈ ದೂರ ಸರಿಯಿತು. ಕೊನೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಶಮಿ ಅವರಿಗೆ 10 ಕೋಟಿ ರೂಪಾಯಿಗೆ ತಂಡಕ್ಕೆ ಸೇರಿಸಿಕೊಂಡಿತು.
ಟೀಮ್ ಇಂಡಿಯಾ ಸ್ಟಾರ್ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ಐಪಿಎಲ್‌ನಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಶಮಿ ಅವರು ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ ಡೆತ್ ಓವರ್ ಮಾತ್ರವಲ್ಲದೆ, ಪವರ್ ಪ್ಲೇ ನಲ್ಲಿಯೂ ಶಮಿ ತಮ್ಮ ಬೌಲಿಂಗ್ ಪರಾಕ್ರಮ ತೋರಿಸಿದ್ದಾರೆ. ಇದುವರೆಗೆ ಐಪಿಎಲ್‌ನಲ್ಲಿ ಶಮಿ ಆಡಿರುವ 110 ಪಂದ್ಯಗಳಲ್ಲಿ 127 ವಿಕೆಟ್‌ಗಳನ್ನು ಪಡೆದಿದ್ದಾರೆ. 8.44 ರ ಸರಾಸರಿಯಲ್ಲಿ ಬೌಲಿಂಗ್ ಮಾಡಿರುವ ಶಮಿ 11 ರನ್‌ಗಳಿಗೆ 4 ಕಬಳಿಸಿರುವುದು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

Story first published: Sunday, November 24, 2024, 16:57 [IST]
Other articles published on Nov 24, 2024
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications