Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mohammed Siraj: ಮೊಹಮ್ಮದ್‌ ಸಿರಾಜ್‌ಗೆ ಆರ್‌ಟಿಎಂ ಬಳಸದ ಆರ್‌ಸಿಬಿ: ಗುಜರಾತ್ ಪಾಲಾದ ಪೇಸರ್‌

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಮೊಹಮ್ಮದ್‌ ಸಿರಾಜ್‌ ತಮ್ಮ ಬಿಗುವಿನ ದಾಳಿಯಿಂದಲೇ ಹೆಸರುವಾಸಿ. ಇವರು ಹೊಸ ಚೆಂಡಿನೊಂದಿಗೆ ಬಿಗುವಿನ ದಾಳಿ ನಡೆಸಬಲ್ಲರು. ಇವರು ಡೆತ್‌ ಓವರ್‌ನಲ್ಲಿ ಶಿಸ್ತು ಬದ್ಧ ದಾಳಿ ಸಂಘಟಿಸಿ ಮಿಂಚಬಲ್ಲರು. ಇವರಿಗೆ ಗುಜರಾತ್‌ 12.75 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು.

ಐಪಿಎಲ್‌ 2025ರ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಮೊಹಮ್ಮದ್​ ಸಿರಾಜ್​ ಅವರನ್ನು ಬಿಡುಗಡೆ ಮಾಡಿತ್ತು. ಮೆಗಾ ಹರಾಜಿನಲ್ಲಿ ಸಿರಾಜ್ ಬರುತ್ತಿದ್ದಂತೆ ಚೆನ್ನೈ, ರಾಜಸ್ಥಾನ್​ ರಾಯಲ್ಸ್​, ಪಂಜಾಬ್​​, ಗುಜರಾತ್​ ಫ್ರಾಂಚೈಸಿಗಳ ಮಧ್ಯೆ ತೀವ್ರ ಪೈಪೋಟಿ ನಡೆಯಿತು. 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಸಿರಾಜ್​ ಅವರನ್ನು ಕೊನೆಗೂ ಗುಜರಾತ್ 12.25 ಕೋಟಿ ರೂ.ಗೆ ಬಿಡ್ ಮಾಡಿತು. ಈ ವೇಳೆ ಆರ್‌ಸಿಬಿ ಆರ್‌ಟಿಎಂ ಬಳಸಬಹುದು ಎಂದು ಎಲ್ಲರೂ ಭಾವಿಸಿದರು. ಆದರೆ ಆರ್‌ಸಿಬಿ ಮನಸ್ಸು ಮಾಡಲಿಲ್ಲ.

IPL Mega Auction 2025 Mohammed Siraj Sold to GT for rs15 Crores Full Player List

ಐಪಿಎಲ್‌ ಟೂರ್ನಿಗೆ ಮೊಹಮ್ಮದ್ ಸಿರಾಜ್ ಪಾದರ್ಪಣೆ ಮಾಡಿದ ಆರಂಭದಲ್ಲಿ ಪರಿಣಾಮಕಾರಿ ಬೌಲರ್ ಆಗಿರಲಿಲ್ಲ. ತದನಂತರ ಸತತ ಅವಕಾಶವನ್ನು ಪಡೆದ ಸಿರಾಜ್ ಐಪಿಎಲ್‌ನಲ್ಲಿ ಬೆಂಕಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಸತತ ಯಾರ್ಕರ್ ಹಾಕುವ ಸಾಮರ್ಥ್ಯವನ್ನು ಹೊಂದಿರುವ ಸಿರಾಜ್ ಐಪಿಎಲ್‌ನಲ್ಲಿ ಇದುವರೆಗೆ 93 ಪಂದ್ಯಗಳನ್ನು ಆಡಿದ್ದು, 93 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಸಿರಾಜ್ ಅವರ ಅತ್ಯುತ್ತಮ ಪ್ರದರ್ಶನ 21 ರನ್‌ಗೆ 4 ವಿಕೆಟ್. ಒಮ್ಮೆಯೂ ಐಪಿಎಲ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆಯನ್ನು ಮಾಡಿಲ್ಲ.

ಮಿಯಾ ಭಾಯ್ 'ಮಿಸ್ ಯು'

ಆರ್‌ಸಿಬಿ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಮೊಹಮ್ಮದ್ ಸಿರಾಜ್ ಒಬ್ಬರು. ಸಿರಾಜ್ ಕೂಡ ತಂಡಕ್ಕೆ ನಿಷ್ಠಿಯಿಂದ ಆಡಿದ್ದಾರೆ. ಹೀಗಾಗಿಯೇ ಆರ್‌ಸಿಬಿ ಅಭಿಮಾನಿಗಳು ಸಿರಾಜ್ ಅವರನ್ನು ಪ್ರೀತಿಯಿಂದ 'ಮಿಯಾ ಭಾಯ್' ಎಂದು ಕರೆಯುತ್ತಿದ್ದರು. ಆದರೆ ಮುಂದಿನ ಐಪಿಎಲ್ ಆವೃತ್ತಿಯಿಂದ ಸಿರಾಜ್ ಕೆಂಪು ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.

ಆರ್‌ಸಿಬಿ ಟು ಟೀಮ್ ಇಂಡಿಯಾ

ಆರಂಭದಲ್ಲಿ ಮೊಹಮ್ಮದ್ ಸಿರಾಜ್ ಆರ್‌ಸಿಬಿ ತಂಡದಲ್ಲಿ ಇದ್ದುಕೊಂಡು ತಮ್ಮ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಾರೆ. ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಬೌಲಿಂಗ್ ಸಾಮರ್ಥ್ಯದ ಆಧಾರದ ಮೇಲೆ ಸಿರಾಜ್ ಅವರು ಟೀಮ್ ಇಂಡಿಯಾ ಎಂಟ್ರಿ ಕೊಟ್ಟಿದ್ದರು. ಸಿರಾಜ್ ಅವರ ಬೆಳವಣಿಗೆಗೆ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾತ್ರ ಬಹಳ ದೊಡ್ಡದಿದೆ.

Story first published: Sunday, November 24, 2024, 17:18 [IST]
Other articles published on Nov 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+