Priyansh Arya: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಪಂಜಾಬ್ ಬಿಡ್ ಮಾಡಿದ ಪ್ರಿಯಾಂಶ್ ಆರ್ಯ ಯಾರು?
ಐಪಿಎಲ್ 2025ರ ಮೆಗಾ ಹರಾಜಿನ ಮೊದಲ ದಿನ, ಸ್ಟಾರ್ ಆಟಗಾರರನ್ನು ಬಿಡ್ ಮಾಡಲು ಫ್ರಾಂಚೈಸಿ ನಡುವೆ ಪೈಪೋಟಿ ಕಂಡುಬಂದಿತು. ಈ ಆಟಗಾರರಿಗೆ ಫ್ರಾಂಚೈಸಿಗಳು ಸಾಕಷ್ಟು ಹಣವನ್ನು ಖರ್ಚು ಮಾಡಿದವು. ಆದರೆ, ಎರಡನೇ ದಿನ ಯಾರೊಬ್ಬರ ಹೆಸರು ಕೇಳಿರದ ಕೆಲವು ಯುವ ಆಟಗಾರರು ಜಾಕ್‌ಪಾಟ್ ಹೊಡೆದರು. ಅವರಲ್ಲಿ ಪ್ರಿಯಾಂಶ್ ಆರ್ಯ ಕೂಡ ಒಬ್ಬರು. ಅವರನ್ನು ಪಂಜಾಬ್ ಕಿಂಗ್ಸ್ 3.80 ಕೋಟಿ ಕೊಟ್ಟು ಬಿಡ್ ಮಾಡಿತ್ತು.
ಪಂಜಾಬ್ ಪ್ರಿಯಾಂಶ್ ಆರ್ಯ ಅವರನ್ನು ಖರೀದಿಸಿದಾಗ ಎಲ್ಲರ ಮನದಲ್ಲೂ ಒಂದೇ ಒಂದು ಪ್ರಶ್ನೆ ಮೂಡಿದೆ. ಯಾರು ಈ ಪ್ರಿಯಾಂಶ್ ಆರ್ಯ? ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಪಂಜಾಬ್ ಬಿಡ್ ಮಾಡಿದ್ದೇಕೆ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಡೆಲ್ಲಿ ಟಿ20 ಲೀಗ್‌ನಲ್ಲಿ ಶತಕ ಬಾರಿಸಿ ಸಂಚಲನ ಮೂಡಿಸಿದಾಗ 23 ವರ್ಷದ ಪ್ರಿಯಾಂಶ್ ಆರ್ಯ ಹೆಸರು ಬೆಳಕಿಗೆ ಬಂದಿತ್ತು. ಈ ಆಟಗಾರ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಯುವ ಆಟಗಾರ ಬಿರುಸಿನ ಬ್ಯಾಟಿಂಗ್ ಮೂಲಕ ಕೇವಲ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಎಲ್ಲರ ಗಮನ ಸೆಳೆದಿದ್ದರು. ಇದಾದ ಲಾಭವನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅವರು ಪಡೆದಿದ್ದಾರೆ.
ಜಿದ್ದಾಜಿದ್ದಿನ ಪೈಪೋಟಿ
ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೂ ಪ್ರಿಯಾಂಶ್ ಆರ್ಯ ಮೇಲೆ ಬಿಡ್ ಮಾಡಲು ಪೈಪೋಟಿ ನಡೆಸಿದವು. ಈ ವೇಳೆ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. 30 ಲಕ್ಷ ರೂ ಮೂಲ ಬೆಲೆಯೊಂದಿಗೆ ಪ್ರಿಯಾಂಶ್ ಹರಾಜಿನ ಭಾಗವಾಗಿದ್ದರು. ಆದರೆ ಮೂರು ತಂಡಗಳ ನಡುವಿನ ಸ್ಪರ್ಧೆಯು ಅವರನ್ನು ಸುಮಾರು 4 ಕೋಟಿ ರೂ.ಗೆ ಮುಟ್ಟುವಂತೆ ಮಾಡಿತ್ತು. ಕೊನೆಗೂ ಪಂಜಾಬ್ ಬಿಡ್ ಮಾಡುವಲ್ಲಿ ಯಶಸ್ವಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications