IPL Mega Auction 2025: ಆನ್‌ಕ್ಯಾಪ್ಡ್ ವೇಗಿ ಕೋಟಿ ಸುರಿದ ಆರ್‌ಸಿಬಿ!
ಆನ್‌ಕ್ಯಾಪ್ಡ್ ಯುವ ವೇಗದ ಬೌಲರ್ ರಸಿಖ್ ದಾರ್ ಅದೃಷ್ಟ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬದಲಾಗಿದೆ. ರಾಸಿಖ್ ದಾರ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 6 ಕೋಟಿ ರೂ.ಗಳನ್ನು ನೀಡಿ ಬಿಡ್ ಮಾಡಿದೆ. ರಸಿಖ್ ದಾರ್ ಉತ್ತಮ ವೇಗದ ಬೌಲರ್ ಆಗಿದ್ದು, ಈ ಹಿಂದೆ ಐಪಿಎಲ್‌ನಲ್ಲಿ ಆಡಿದ ಅನುಭವಿದೆ. ಈಗಾಗಲೇ ಆರ್‌ಸಿಬಿ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗದ ಬೌಲರ್ ಜೋಶ್ ಹ್ಯಾಜುಲ್‌ವುಡ್ ಅವರನ್ನು 12.50 ಕೋಟಿ ರೂ.ಗೆ ಆರ್‌ಸಿಬಿ ಬಿಡ್ ಮಾಡಿದೆ. ಈಗ ರಸಿಖ್ ದಾರ್ ಅವರನ್ನು ತಂಡಕ್ಕೆ ಮತ್ತೊಬ್ಬ ಹೆಚ್ಚುವರಿ ವೇಗಿಯಾಗಿ ಸೇರಿಸಿಕೊಂಡಿದೆ.
ಯುವ ವೇಗಿ ರಸಿಖ್ ದರ್ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೆ, ರಸಿಖ್ ಆಡಿದ 11 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 34 ರನ್‌ಗಳಿಗೆ 3 ವಿಕೆಟ್ ಪಡೆದಿರುವುದು ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

Story first published: Sunday, November 24, 2024, 22:49 [IST]
Other articles published on Nov 24, 2024
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications