IPL Mega Auction 2025: ರಿಷಬ್ ಪಂತ್‌ಗೆ 27 ಕೋಟಿ ನೀಡಿ ತಂಡಕ್ಕೆ ಖರೀದಿಸಿದ ಲಕ್ನೋ
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ರಿಷಭ್ ಪಂತ್ ಅವರು ಐಪಿಎಲ್ ಮೆಗಾ ಹರಾಜು ಅಂಗಳ ಪ್ರವೇಶಿಸುತ್ತಿದ್ದಂತೆ, ನೆರೆದಿದ್ದ ಅಭಿಮಾನಿಗಳು ಸಹ ಕೂಗಿದರು. ಆಗಲೇ ಇವರ ಮಹತ್ವ ಎಷ್ಟು ಎಂಬುದು ಎಲ್ಲರಿಗೂ ಅರಿವಿತ್ತು. ಇವರು ಟಿ20 ವಿಶ್ವಕಪ್ ತಂಡದ ಸದಸ್ಯರು ಹಾಗೂ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್. ಇವರನ್ನು ಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂದಾಯಿತು. ಈ ವೇಳೆ ಅವರ ಲಕ್ನೋ 27 ಕೋಟಿಗೆ ಸೇಲ್ ಆದರು.
ಮೂಲ ಬೆಲೆಗೆ ಲಕ್ನೋ ಸೂಪರ್ ಜೈಂಟ್ಸ್ ಬಿಡ್ ಮಾಡಿತು. ತಡ ಮಾಡದೆ ಆರ್‌ಸಿಬಿ ರಿಷಭ್ ಪಂತ್ ಅವರನ್ನು ಕೊಳ್ಳಲು ಹಣವನ್ನು ಹೂಡಿತು. ಇವರನ್ನು ಕೊಳ್ಳಲೇ ಬೇಕು ಎಂಬ ನಿಟ್ಟಿನಲ್ಲಿ ಆರ್‌ಸಿಬಿ ಬಿಡ್ ಮಾಡಲು ಮುಂದಾಯಿತು. ಒಳ್ಳೆಯ ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಮಿಡ್ಲ್ ಆರ್ಡರ್ ಬ್ಯಾಟರ್‌ನ ಹುಡುಕಾಟದಲ್ಲಿರುವ ಆರ್‌ಸಿಬಿ ರಿಷಭ್‌ಗೆ ಬಾಜಿ ಕಟ್ಟಿತು. ದಿನೇಶ್ ಕಾರ್ತಿಕ್ ಅವರಿಂದ ತೆರವಾದ ಸ್ಥಾನವನ್ನು ತುಂಬಲು ಇವರು ಸೂಕ್ತ ಆಟಗಾರ ಎಂದು ಆರ್‌ಸಿಬಿ ಬಾಜಿ ಕಟ್ಟಲು ಮುಂದಾಯಿತು. ಇವರನ್ನು ಕೊಳ್ಳಲು ಎಲ್‌ಎಸ್‌ಜಿ ಹಾಗೂ ಆರ್‌ಸಿಬಿ ಜಿದ್ದೆಗೆ ಬಿದ್ದವು.

ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೈ ಬಿಡಲಾಗಿರುವ ರಿಷಭ್ ಪಂತ್ ಅವರನ್ನು ಕೊಳ್ಳಲು ಎರಡೂ ತಂಡಗಳು ಮುಂದಾದವು. ಈ ತಂಡಗಳಿಗೆ ಉತ್ತಮ ನಾಯಕನ ಹುಡುಕಾಟದಲ್ಲಿರುವ ತಂಡಗಳು ಇವರನ್ನು ಕೊಳ್ಳಲು ಮುಂದಾದವು. 11 ಕೋಟಿ ಬಾಜಿ ಮೊತ್ತ ದಾಟುತ್ತಿದ್ದಂತೆ ಆರ್‌ಸಿಬಿ ಅಂಗಳದಿಂದ ದೂರ ಸರಿಯಿತು. ಆಗ ಸನ್ ರೈಸರ್ಸ್ ಹೈದರಾಬಾದ್ ತಂಡ ಅಖಾಡಕ್ಕೆ ಇಳಿಯಿತು. ಇವರು ಬೆಸ್ಟ್ ಮಿಡ್ಲ್ ಆರ್ಡರ್ ಬ್ಯಾಟರ್, ವಿಕೆಟ್ ಕೀಪರ್, ಕ್ಯಾಪ್ಟನ್ ಎಲ್ಲ ಗುಣಗಳನ್ನು ಹೊಂದಿರುವ ಪ್ಲೇಯರ್ ಆಗಿದ್ದು, ಇವರನ್ನು ಕೊಳ್ಳಲು ಮಾಲೀಕರು ಹಣವನ್ನು ಹೂಡಲು ಮುಂದಾದವು.
ರಿಷಭ್ ಪಂಥ್ ಸಾಧನೆ
ಭಾರತ ತಂಡದ ಸ್ಟಾರ್ ಯುವ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ 2016ರಲ್ಲಿ ಮೊದಲ ಬಾರಿಗ ಐಪಿಎಲ್‌ನಲ್ಲಿ ಕಾಣಿಸಿಕೊಂಡರು. ಐಪಿಎಲ್‌ನಲ್ಲಿ ಈವರಗೆ ರಿಷಬ್ ಪಂತ್ ಒಟ್ಟು 111 ಪಂದ್ಯಗಳನ್ನು ಆಡಿದ್ದು, 35.31 ರ ಸರಾಸರಿಯಲ್ಲಿ 3284 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಸೇರಿದಂತೆ 18 ಅರ್ಧಶತಕಗಳಿವೆ. ಐಪಿಎಲ್‌ನಲ್ಲಿ ಪಂತ್ 128 ರನ್‌ಗಳ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಪಂತ್ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, ವಿಕೆಟ್‌ಕೀಪಿಂಗ್ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications