IPL Mega Auction 2025: ಶ್ರೇಯಸ್ ಅಯ್ಯರ್‌ಗೆ ಬಂಪರ್: 26.75 ಕೋಟಿಗೆ ತಂಡಕ್ಕೆ ಸೇಲ್
ಟೀಮ್ ಇಂಡಿಯಾದ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ಕೊಳ್ಳಲು ಕೋಲ್ಕತ್ತಾ ನೈಟ್ ರೈಡರ್ಸ್ ಮನಸ್ಸು ಮಾಡಿತು. ಇವರ ಹೆಸರು ಅಂಗಳ ಪ್ರವೇಶಿಸುತ್ತಿದ್ದಂತೆ ಕೆಕೆಆರ್ ಬಿಡ್ಡಿಂಗ್ ಮಾಡಲು ಆರಂಭಿಸಿತು. ಆದರೆ ಕುತೂಹಲ ಮೂಡಿಸಿದ್ದ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಹಲವು ಮಾಲೀಕರ ಚಿತ್ತ ಕದ್ದರು. ಇವರನ್ನು ಕೊಂಡು ತಂಡದ ನಾಯಕತ್ವ ನೀಡಲು ಪಂಜಾಬ್ ಕಿಂಗ್ಸ್ ಮುಂದಾಗಿದೆ. ಇವರಿಗೆ 26.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಈ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಅವರ ನಡುವೆ ಫೈಟ್ ಏರ್ಪಟಿತ್ತು. ಇವರನ್ನು ಕೊಳ್ಳಲು ಕೆಕೆಆರ್ ಸಹ ಒಂದು ಹಂತದ ವರೆಗೆ ಪ್ರಯತ್ನವನ್ನು ಮಾಡಿತು. ಆದರೆ 10 ಕೋಟಿ ಆಗುತ್ತಿದ್ದಂತೆ ಕೆಕೆಆರ್ ಅಂಗಳದಿಂದ ದೂರ ಉಳಿಯಿತು. ಆಗ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡ ನಡುವೆ ಜಿದ್ದಾಜಿದ್ದಿನ ಕಾಳಗ ನಡೆಯಿತು. ಇವರನ್ನು ಕೊಳ್ಳಲು ಮಾಲೀಕರು ಹಣವನ್ನು ಹೂಡಲು ಮುಂದಾದರು. ನಾಯಕನ ಹುಡುಕಾಟದಲ್ಲಿದ್ದ ತಂಡಗಳು ಇವರಿಗೆ ಹಣವನ್ನು ಹೂಡಿದವು.

ಡೆಲ್ಲಿ ಹಾಗೂ ಪಂಜಾಬ್ ತಂಡಗಳು 10 ಕೋಟಿ ರೂ.ಯಿಂದ ಬಾಜಿ ಕಟ್ಟಲು ಆರಂಭಿಸಿದವು. ಈ ಹಂತದಲ್ಲಿ ಈ ಇಬ್ಬರೂ ಇವರನ್ನು ಬಿಟ್ಟು ಕೊಡುವ ಮನಸ್ಸು ಮಾಡಲಿಲ್ಲ. ಇವರ ಅನುಭವ ಹಾಗೂ ಮಿಡ್ಲ್ ಆರ್ಡರ್‌ನಲ್ಲಿ ಇವರು ಬ್ಯಾಟ್ ಮಾಡುವ ಕಲೆಯನ್ನು ಕಂಡು ಇವರಿಗೆ ಮಣೆ ಹಾಕಲಾಯಿತು. ಇವರನ್ನು ಕೊಳ್ಳಲು ಡೆಲ್ಲಿ ಜಿದ್ದಿಗೆ ಬಿದ್ದಂತೆ ಕಂಡಿತು. ಇವರು ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದು, ಇವರನ್ನು ಕೊಳ್ಳಲು ಮಾಲೀಕರು ಹಣವನ್ನು ಹೂಡಿದರು. ಅಲ್ಲದೆ ನೋಡು ನೋಡುತ್ತಿದ್ದಂತೆ ಇವರ ಮೂಲ ಬೆಲೆಗಿಂತ 10 ಪಟ್ಟು ಹೆಚ್ಚು ಬಿಡ್ ಅಗಿ ಬಿಟ್ಟಿತು.
ಶ್ರೇಯಸ್ ಸಾಧನೆ
ಶ್ರೇಯಸ್ ಅಯ್ಯರ್: ನಾಯಕನಾಗಿ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಮಿಂಚಿದ್ದಾರೆ. ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಚಾಂಪಿಯನ್ ಮಾಡುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಅಂಕಿ-ಅಂಶವನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಅಯ್ಯರ್ ಒಟ್ಟು 115 ಪಂದ್ಯಗಳನ್ನು ಆಡಿದ್ದು, 32.24 ರ ಸರಾಸರಿಯಲ್ಲಿ 3127 ರನ್ ಗಳಿಸಿದ್ದಾರೆ. ಈವರೆಗೂ ಐಪಿಎಲ್‌ನಲ್ಲಿ ಅಯ್ಯರ್ ಶತಕ ಬಾರಿಸಲು ಸಾಧ್ಯವಾಗಿಲ್ಲ. ಆದರೆ 21 ಐಪಿಎಲ್ ಅರ್ಧಶತಕಗಳನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications