Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Mega Auction 2025: ವಿಕೆಟ್ ಟೇಕರ್ ಯುವ ಸ್ಪಿನ್ನರ್‌ಗೆ ಒಲವು ತೋರಿದ ಆರ್‌ಸಿಬಿ!

ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಸ್ಪಿನ್ನರ್‌ಗಾಗಿ ಹುಡುಕಾಟ ನಡೆಸುತ್ತಿತ್ತು. ಈಗ ಸುಯಶ್ ಶರ್ಮಾ ಅವರ ರೂಪದಲ್ಲಿ ಆರ್‌ಸಿಬಿಗೆ ಹೊಸ ಯುವ ಸ್ಪಿನ್ನರ್ ಆಗಮನವಾಗಿದೆ. ಯುವ ಸ್ಪಿನ್ನರ್ ಸುಯಶ್ ಶರ್ಮಾ ಅವರನ್ನು ಬಿಡ್ ಮಾಡಲು ಮುಂಬೈ ಇಂಡಿಯನ್ಸ್‌ ಮತ್ತು ಆರ್‌ಸಿಬಿ ನಡುವೆ ಪೈಪೋಟಿ ಹೆಚ್ಚಾಗಿತ್ತು. ಆದರೆ ಸುಯಶ್ ಶರ್ಮಾ ಅವರನ್ನು 2.60 ಕೋಟಿ ರೂ.ಗಳಿಗೆ ಆರ್‌ಸಿಬಿ ಬಿಡ್ ಮಾಡುವಲ್ಲಿ ಯಶಸ್ವಿಯಾಯಿತು.

ಸುಯಶ್ ಶರ್ಮಾ 2023ರಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್ (ಕೆಕೆಆರ್‌) ಪರ ಐಪಿಎಲ್‌ಗೆ ಪಾದರ್ಪಾಣೆ ಮಾಡಿದ್ದರು. ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಸುಯಶ್ ಶರ್ಮಾ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಅವರು ಆಡಿದ 11 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದರು. ಇದಾದ ನಂತರದ ಐಪಿಎಲ್ 2024ರ ಆವೃತ್ತಿಯಲ್ಲಿ ಅವರಿಗೆ ಕೆಕೆಆರ್‌ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

IPL Mega Auction 2025 Suyash Sharma Sold to RCB for rs2 60 Crores

ಐಪಿಎಲ್ 2024ರಲ್ಲಿ ಕೆಕೆಆರ್‌ ತಂಡದಲ್ಲಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಇಬ್ಬರು ಸ್ಪಿನ್ನರ್‌ಗಳಿದ್ದರು. ಈ ಕಾರಣದಿಂದಾಗಿ ಸುಯಶ್ ಶರ್ಮಾ ಅವರನ್ನು ಕೆಕೆಆರ್‌ ಆಡುವ ಹನ್ನೊಂದರ ಬಳಗದಿಂದ ಹೊರಗಿಟ್ಟಿತ್ತು. ಆದರೂ, ಅವರು ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಲು ಹೆಣಗಾಡಿದ್ದರು. ಕೊನೆಗೂ ಸಿಕ್ಕ ಎರಡು ಪಂದ್ಯವಾಡುವ ಅವಕಾಶದಲ್ಲಿ ಅವರು ಒಂದು ವಿಕೆಟ್ ಪಡೆಯಲಿಲ್ಲ. ನಂತರ ಕೆಕೆಆರ್‌ ಐಪಿಎಲ್ ಚಾಂಪಿಯನ್‌ ಆಗಿತ್ತು. ಹೀಗಾಗಿ ಮುಂದಿನ ಐಪಿಎಲ್ ಆವೃತ್ತಿಗೆ ಸುಯಶ್ ಶರ್ಮಾ ಅವರನ್ನು ಕೆಕೆಆರ್‌ ರಿಟೈನ್ ಮಾಡಿಕೊಂಡಿರಲಿಲ್ಲ. ಈಗ ಐಪಿಎಲ್ 2024ರಲ್ಲಿ ಸುಯಶ್ ಆರ್‌ಸಿಬಿ ಪರ ಆಡುವ ನಿರೀಕ್ಷೆಯಿದೆ.

Story first published: Sunday, November 24, 2024, 23:37 [IST]
Other articles published on Nov 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+