Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Mega Auction 2025: ಸ್ವಪ್ನಿಲ್ ಸಿಂಗ್‌ಗೆ ಆರ್‌ಟಿಎಂ ಬಳಸಿದ ಆರ್‌ಸಿಬಿ

ಐಪಿಎಲ್ 2025ರ ಮೆಗಾ ಹರಾಜಿನ ಎರಡನೇ ದಿನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಆನ್‌ಕ್ಯಾಪ್ಡ್‌ ಆಲ್‌ರೌಂಡರ್‌ ​ಸ್ವಪ್ನಿಲ್​ ಸಿಂಗ್​ ಅವರನ್ನು ಬಿಡ್ ಮಾಡಿದೆ. ಕಳೆದ ಬಾರಿ ಆರ್‌ಸಿಬಿ ಪಾಲಿಗೆ ಸ್ವಪ್ನಿಲ್​ ಸಿಂಗ್​ ಲಕ್ಕಿ ಬಾಯ್ ಆಗಿದ್ದರು. ಹೀಗಾಗಿ ಮುಂದಿನ ಐಪಿಎಲ್ ಆವೃತ್ತಿಗಾಗಿ ಆರ್‌ಸಿಬಿ ಆರ್‌ಟಿಎಂ ಕಾರ್ಡ್‌ ಬಳಸುವ ಮೂಲಕ 50 ಲಕ್ಷ ರೂ.ಗೆ ಖರೀದಿ ಮಾಡಿದೆ.

ಮೆಗಾ ಹರಾಜಿನಲ್ಲಿ ಮೆಗಾ ಹರಾಜಿ ಕಾಣಿಸಿಕೊಳ್ಳುತ್ತಿದ್ದಂತೆ ಮೊದಲು ಆರ್‌ಸಿಬಿ ತಂಡವೇ ಸ್ವಪ್ನಿಲ್​ ಸಿಂಗ್​ ಅವರನ್ನು ಮೂಲ ಬೆಲೆ​​ 30 ಲಕ್ಷ ರೂ.ಗೆ ಬಿಡ್​ ಮಾಡಿತು. ನಂತರ ಡೆಲ್ಲಿ ಕ್ಯಾಪಿಟಲ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಸ್ವಪ್ನಿಲ್​ ಸಿಂಗ್‌ಗಾಗಿ ಪೈಪೋಟಿ ನಡೆಯಿತು. ಕೊನೆಗೆ 50 ಲಕ್ಷ ರೂ.ಗೆ ಸ್ವಪ್ನಿಲ್​ ಸಿಂಗ್​ ಆರ್‌ಸಿಬಿ ಸೇರಿದರು.

IPL Mega Auction 2025 Swapnil Singh Sold to RCB for 50 lakhs

ಇದಲ್ಲದೆ, ಆರ್‌ಸಿಬಿ ಇಬ್ಬರು ವಿದೇಶಿ ಆಟಗಾರರಿಗೆ ಮಣೆ ಹಾಕಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್‌ ಟಿಮ್ ಡೇವಿಡ್ ಅವರನ್ನು 3 ಕೋಟಿ ರೂ. ಆರ್‌ಸಿಬಿ ಬಿಡ್ ಮಾಡಿದೆ. ಜೊತೆಗೆ ವೆಸ್ಟ್‌ಇಂಡೀಸ್‌ ವೇಗದ ಬೌಲಿಂಗ್ ಆಲ್‌ರೌಂಡರ್‌ ರೊಮಾರಿಕೊ ಶೆಫರ್ಡ್ ಅವರನ್ನೂ 1.5 ಕೋಟಿ ರೂ. ನೀಡಿ ಆರ್‌ಸಿಬಿ ಸೇರಿಸಿಕೊಂಡಿದೆ. ಆದರೆ, ಕಳೆದ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಮಿಂಚಿದ ಇಂಗ್ಲೆಂಡ್‌ನ ಸ್ಟಾರ್ ಯುವ ಬ್ಯಾಟರ್ ವಿಲ್‌ ಜ್ಯಾಕ್ ಅವರಿಗೆ ಆರ್‌ಸಿಬಿ ಆರ್‌ಟಿಎಂ ಬಳಸಿಲ್ಲ. ಹೀಗಾಗಿ ವಿಲ್ ಜ್ಯಾಕ್ ಅವರನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ 5.25 ಕೋಟಿ ರೂ. ಕೊಟ್ಟು ಬಿಡ್ ಮಾಡಿದೆ.

Story first published: Monday, November 25, 2024, 18:40 [IST]
Other articles published on Nov 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+