Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Mega Auction 2025: ನಟರಾಜನ್ ಬಾಜಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್!

ಟೀಮ್ ಇಂಡಿಯಾ ಎಡಗೈ ವೇಗದ ಬೌಲರ್ ಟಿ ನಟರಾಜನ್ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಜಾಕ್‌ಪಾಟ್ ಹೊಡಿದಿದ್ದಾರೆ. ಡೆತ್‌ ಓವರ್‌ಗಳಲ್ಲಿ ಛಾಪು ಮೂಡಿಸಿರುವ ಟಿ ನಟರಾಜನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 10.75 ಕೋಟಿ ರೂ.ಗೆ ಬಿಡ್‌ ಮಾಡಿದೆ. ಟಿ ನಟರಾಜನ್ ಅವರನ್ನು ಆರ್‌ಸಿಬಿ ಬಿಡ್ ಮಾಡುವ ನಿರೀಕ್ಷೆಯಿತ್ತು. ಆದರಂತೆ ಡೆಲ್ಲಿಯೊಂದಿಗೆ ಟಿ ನಟರಾಜನ್ ಅವರನ್ನು ಬಿಡ್ ಮಾಡಲು ಆರ್‌ಸಿಬಿ ಬಾಜಿ ಕಟ್ಟಿತ್ತು. ಆದರೆ ನಟರಾಜನ್ ಬಾಜಿಯಲ್ಲಿ ಡೆಲ್ಲಿ ಗೆದ್ದಿತ್ತು.

ಐಪಿಎಲ್‌ನಲ್ಲಿ ಟಿ ನಟರಾಜನ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಡೆತ್‌ ಓವರ್‌ಗಳಲ್ಲಿ ವಿಕೆಟ್‌ ಟೇಕರ್ ಬೌಲರ್‌ ಆಗಿ ಮಿಂಚಿದ್ದಾರೆ. ಟಿ ನಟರಾಜನ್ ಇಲ್ಲಿವರಗೆ ಐಪಿಎಲ್‌ನಲ್ಲಿ 61 ಪಂದ್ಯಗಳನ್ನಾಡಿದ್ದು, 8.84 ರ ಎಕಾನಮಿಯಲ್ಲಿ 67 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಟಿ ನಟರಾಜನ್ ಬೆಸ್ಟ್‌ ಬೌಲಿಂಗ್ ಪ್ರದರ್ಶನ 19 ರನ್‌ಗೆ 4 ವಿಕೆಟ್.

IPL Mega Auction 2025 T Natarajan Sold to Delhi Capitals for rs10 75 Crores

ಕಳೆದ ಹಲವು ಐಪಿಎಲ್‌ ಆವೃತ್ತಿಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ಪರ ಮಿಂಚಿದ ಟಿ ನಟರಾಜನ್ ಅವರನ್ನು ಈ ಬಾರಿ ರಿಟೈನ್ ಮಾಡಿಕೊಂಡಿರಲಿಲ್ಲ. ಹೀಗಾಗಿ ಟಿ ನಟರಾಜನ್ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಇದೀಗಾ ಟಿ ನಟರಾಜನ್ ಅವರ ಅದೃಷ್ಟ ಖುಲಾಯಿಸಿದ್ದು, ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ.

Story first published: Sunday, November 24, 2024, 21:26 [IST]
Other articles published on Nov 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+