ಭಾರೀ ಮೊತ್ತಕ್ಕೆ ಸೇಲ್ ಆದ ವೆಂಕಟೇಶ್ ಅಯ್ಯರ್, 23.75 ಕೋಟಿಗೆ ಕೆಕೆಆರ್ ಪಾಲು
ಐಪಿಎಲ್ 2024ರ ಚಾಂಪಿಯನ್ ತಂಡದ ಸದಸ್ಯ ವೆಂಕಟೇಶ್ ಅಯ್ಯರ್ ಅವರನ್ನು ಕೊಳ್ಳಲು ಹಲವು ತಂಡಗಳು ಮುಂದಾದವು. ಇವರು ಮಿಡ್ಲ್ ಆರ್ಡರ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಬಲ್ಲ ಕ್ಷಮತೆಯನ್ನು ಹೊಂದಿರುವ ಆಟಗಾರ. ಇವರನ್ನು ಕೊಳ್ಳಲು ಆರ್‌ಸಿಬಿ ಹಣವನ್ನು ಸುರಿಯಲು ಆರಂಭಿಸಿತು. ವೆಂಕಟೇಶ್ ಅಯ್ಯರ್ ಅವರನ್ನು ತಮ್ಮ ತಂಡಕ್ಕೇ ಸೇರಿಸಿಕೊಳ್ಳಲು ಕೆಕೆಆರ್ ಹಾಗೂ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಳ್ಳಲು ಭರ್ಜರಿ ಫೈಟ್ ನಡೆಸಿದವು.
ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಸ್ಟಾರ್ ಪ್ಲೇಯರ್ ಅವರ ಮೇಲೆ ಬೆಂಗಳೂರು ತಂಡ ಭರವಸೆ ಇಟ್ಟಿತು. ಇವರನ್ನು ಕೊಳ್ಳಲು ಆರಂಭದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಜಿದ್ದಿಗಿಳಿದವು. ಈ ಅವಧಿಯಲ್ಲಿ ಇವರ ಮೂಲ ಬೆಲೆ 2 ಕೋಟಿಗೂ ಆಗಿತ್ತು. ಇವರನ್ನು ಕೊಳ್ಳಲು ಆರ್‌ಸಿಬಿ ಸಹ ಮನಸ್ಸು ಮಾಡಿತು. ಇವರ ಬೆಲೆ ಬಿಡ್ ಅಂಗಳದಲ್ಲಿ 10 ಕೋಟಿ ರೂ. ಆಸು ಪಾಸಿನಲ್ಲಿದ್ದಾಗ ಆರ್‌ಸಿಬಿ

ಕಳೆದ 4 ಆವೃತ್ತಿಗಳಿಂದ ಕೆಕೆಆರ್ ಪರ ಆಡುತ್ತಿರುವ ವೆಂಕಟೇಶ್ ಅಯ್ಯರ್, 2021ರಲ್ಲಿ ತಂಡ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ಕಳೆದ ಬಾರಿ ಅಂದರೆ ಐಪಿಎಲ್ 2024ರಲ್ಲಿ ಕೆಕೆಆರ್ ಚಾಂಪಿಯನ್ ಆಗುವಲ್ಲಿಯೂ ವೆಂಕಟೇಶ್ ಅಯ್ಯರ್ ಕೊಡುಗೆ ದೊಡ್ಡದಿತ್ತು. ಆದರೆ ಅವರನ್ನು ಕೆಕೆಆರ್ ರಿಟೇನ್ ಮಾಡಿಕೊಂಡಿರಲಿಲ್ಲ. ಈ ವೇಳೆ ವೆಂಕಟೇಶ್ ಅಯ್ಯರ್ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ನಾನು ರಿಟೈನ್ ಆಗಲಿಲ್ಲ ಎಂಬುದನ್ನು ತಿಳಿದು ನನಗೆ ನಿಜವಾಗಿಯೂ ಕಣ್ಣೀರು ಬಂದಿತ್ತು. ಆಕ್ಷನ್ ನಲ್ಲಿ ಮತ್ತೆ ಕೋಲ್ಕತಾ ಫ್ರಾಂಚೈಸಿಯೇ ನನ್ನನ್ನು ಸೇರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಭಾವುರಾಗಿ ಮಾತನಾಡಿದ್ದರು. ಇದೀಗ ಕೆಕೆಆರ್ ಅವರನ್ನು ದುಬಾರಿ ಬೆಲೆಗೆ ಬಿಡ್ ಮಾಡಿದೆ.
ಐಪಿಎಲ್ ಸಾಧನೆ
ವೆಂಕಟೇಶ್ ಅಯ್ಯರ್: ಐಪಿಎಲ್ ಟೂರ್ನಿಯಲ್ಲಿ ವೆಂಕಟೇಶ್ ಅಯ್ಯರ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರೀ ಸದ್ದು ಮಾಡಿದ್ದಾರೆ. ಆರಂಭಿಕನಾಗಿ ಕಣಕ್ಕೀಳಿಯುವ ವೆಂಕಟೇಶ್ ಅಯ್ಯರ್ ಅವರು ಬಿಗ್ ಇನ್ನಿಂಗ್ಸ್ ಆಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಐಪಿಎಲ್‌ನಲ್ಲಿ ವೆಂಕಟೇಶ್ ಅಯ್ಯರ್ ಇಲ್ಲಿವರಗೆ 50 ಪಂದ್ಯಗಳನ್ನು ಆಡಿದ್ದು, 31.57 ರ ಸರಾಸರಿಯಲ್ಲಿ 1326 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಸೇರಿದಂತೆ 11 ಅಧಶತಕಗಳನ್ನು ಹೊಂದಿದ್ದಾರೆ. ಇನ್ನೂ ಬೌಲಿಂಗ್‌ನಲ್ಲಿಯೂ 3 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications