IPL Mega Auction 2025: 5 ವಿದೇಶಿ ಸ್ಪಿನ್ನರ್‌ಗಳಿಗೆ ಅದೃಷ್ಟ ಕೈ ಹಿಡಿಯುತ್ತಾ?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಐಪಿಎಲ್ ಮೆಗಾ ಹರಾಜಿಗೆ ಆಯ್ಕೆಯಾದ 208 ವಿದೇಶಿ ಆಟಗಾರರಲ್ಲಿ ಅನೇಕ ಪ್ರತಿಭಾವಂತ ಸ್ಪಿನ್ನರ್‌ಗಳೂ ಸೇರಿದ್ದಾರೆ. ಅವರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಐಪಿಎಲ್ ಫ್ರಾಂಚೈಸಿಗಳ ಚಿತ್ತ ಕದ್ದಿರುವ ಈ ಐವರು ಸಾಗರೋತ್ತರ ಸ್ಪಿನ್ನರ್‌ಗಳು ಭಾರೀ ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆಗಳಿವೆ.
ಐಪಿಎಲ್ ಟೂರ್ನಿ ಹೊಡೆಬಡಿ ಆಟಕ್ಕೆ ಹೆಸರುವಾಸಿಯಾಗಿದ್ದರೂ, ಬ್ಯಾಟರ್‌ಗಳ ವಿರುದ್ಧ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಈ ಐವರು ವಿದೇಶಿ ಸ್ಪಿನ್ನರ್‌ಗಳನ್ನು ಮೆಗಾ ಹರಾಜಿನಲ್ಲಿ ಬಿಡ್ ಮಾಡಿದರೆ ಮುಂಬರುವ ಐಪಿಎಲ್‌ನಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮ್ಯಾಜಿಕ್ ತೋರಿಸಬಹುದು. ಅದಕ್ಕೂ ಮುನ್ನ ಐಪಿಎಲ್ 2025ರ ಮೆಗಾ ಹರಾಜಿನಲ್ಲಿರುವ ಈ ಐದು ವಿದೇಶಿ ಸ್ಪಿನ್ನರ್‌ಗಳು ಯಾರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆದಿಲ್ ರಶೀದ್
ಆಧುನಿಕ ಯುಗದಲ್ಲಿ ಇಂಗ್ಲೆಂಡ್ ತಂಡ ಕಂಡ ವೈಟ್ ಬಾಲ್ ಸ್ಪಿನ್ನರ್ ಆದಿಲ್ ರಶೀದ್. 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು ಇಂಗ್ಲೆಂಡ್ ಪರ 262 ವೈಟ್-ಬಾಲ್ ಪಂದ್ಯಗಳಲ್ಲಿ ಒಟ್ಟು 331 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರಶೀದ್ ಇದುವರೆಗೆ ಕೇವಲ ಮೂರು ಐಪಿಎಲ್ ಪಂದ್ಯಗಳನ್ನು ಆಡಿದ್ದರೂ, 2015ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರ 9 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ತಂಡವನ್ನು ಸೆಮಿಫೈನಲ್ ತಲುಪಲು ನೆರವಾಗಿದ್ದರು. ಪ್ರಸ್ತುತ ಅವರು ನಂಬರ್ 1 ಟಿ20 ಬೌಲರ್ ಆಗಿದ್ದು, ಐಪಿಎಲ್ ಮೆಗಾ ಹರಾಜಿನಲ್ಲಿ ಅದೃಷ್ಟ ಹುಡುಕಾಟದಲ್ಲಿದ್ದಾರೆ.
ನೂರ್ ಅಹಮದ್
ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ನೂರ್ ಅಹ್ಮದ್ ಈ ವರ್ಷ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದಾರೆ. ಸೇಂಟ್ ಲೂಸಿಯಾ ಪರ ಆಡಿದ ಅವರು ಒಟ್ಟು 22 ವಿಕೆಟ್‌ಗಳನ್ನು ಪಡೆದಿದ್ದರು. ಅಹ್ಮದ್ ಕಳೆದ ಎರಡು ಐಪಿಎಲ್ ಋತುಗಳಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕಾಗಿ ಆಡಿದ್ದು, 23 ಪಂದ್ಯಗಳಲ್ಲಿ ಒಟ್ಟು 24 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಎರಡು ಐಪಿಎಲ್ ಆವೃತ್ತಿಗಳಲ್ಲಿ ನೂರ್ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸಾಕಾಷ್ಟು ಕಾಟ ನೀಡಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ನೂರ್ ಪ್ರಭಾವ ಬೀರುವ ಸಾಧ್ಯತೆವಿದ್ದು, ಫ್ರಾಂಚೈಸಿಗಳು ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಬಹುದು.
ಮಹೇಶಾ ತೀಕ್ಷಣ
ಶ್ರೀಲಂಕಾದ ಮಹೇಶಾ ತೀಕ್ಷಣ ವಿಕೆಟ್-ಟೇಕರ್ ಸ್ಪಿನ್ನರ್ ಅಲ್ಲ. ಆದರೆ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಂ ಬಾಲ್‌ನಂತಹ ಹಲವು ರೀತಿ ಸ್ಪಿನ್ ತಂತ್ರಗಳನ್ನು ಹೊಂದಿರುವ ಅವರು ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಅದ್ಭುತ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಸಿಎಸ್‌ಕೆ ಪರ ಆಡಿದ 27 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ. ಅಲ್ಲದೆ, ಅವರು ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇಂತಹ ಕೌಲಿಟಿ ಸ್ಪಿನ್ನರ್ ಭವಿಷ್ಯ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ನಿರ್ಧಾರವಾಗಲಿದೆ.
ವನಿಂದು ಹಸರಂಗ
ಟಿ20 ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ವನಿಂದು ಹಸರಂಗ ಚುಟುಕು ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 200 ಟಿ20 ಪಂದ್ಯಗಳನ್ನು ಆಡಿರುವ ಹಸರಂಗ 287 ವಿಕೆಟ್‌ಗಳನ್ನು ಪಡೆದಿದ್ದಾರೆ. ಬಲಗೈ ಸ್ಪಿನ್ನರ್ ಆಗಿರುವ ಹಸರಂಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 26 ಪಂದ್ಯಗಳನ್ನು ಆಡಿದ್ದು, 35 ವಿಕೆಟ್ ಪಡೆದಿದ್ದಾರೆ. 2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 18 ರನ್‌ಗೆ 5 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇದಲ್ಲದೇ, ಹಸರಂಗಾ ಟಿ20ಯಲ್ಲಿ 2000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕೆಳ ಕ್ರಮಾಂಕದಲ್ಲಿ ತಮ್ಮ ತಂಡಕ್ಕೆ ವರದಾನವಾಗಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಬಲ್ಲ ಹಸರಂಗ ಬಿಡ್ ಮಾಡಲು ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ಆಡಮ್ ಝಂಪಾ
ಐಪಿಎಲ್ 2025ರ ಹರಾಜಿನಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂದರೆ ಆಸ್ಟ್ರೇಲಿಯಾದ ಆಡಮ್ ಝಂಪಾ. ಮೆಗಾ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿಗಳು ಆಡಮ್ ಝಂಪಾ ಅವರನ್ನು ಬಿಡ್ ಮಾಡಲು ಮುಂದಾಗಬಹುದು.
ಈ ಅನುಭವಿ ಲೆಗ್ ಸ್ಪಿನ್ನರ್ ಝಂಪಾ ಆಡಿರುವ 281 ಟಿ20 ಪಂದ್ಯಗಳಲ್ಲಿ 343 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ ಝಂಪಾ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಆರ್‌ಸಿಬಿ ಹಾಗು ರಾಜಸ್ಥಾನ ರಾಯಲ್ಸ್ ಪರ ಫ್ರಾಂಚೈಸಿಗಳೊಂದಿಗೆ ಆಡಿದ್ದಾರೆ. ಪ್ರಸ್ತುತ ಝಂಪಾ ಐಸಿಸಿ ಟಿ20 ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications