IPL Mega Auction 2025: ಸ್ಪಿನ್ ಬೌಲರ್ ಚಹಾಲ್‌ಗೆ 18 ಕೋಟಿ ರೂ. ನೀಡಿದ ಪಂಜಾಬ್
ಟೀಮ್ ಇಂಡಿಯಾದ ಅನುಭವಿ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರು ಐಪಿಎಲ್ ಬಿಡ್ಡ ಅಂಗಳ ಪ್ರವೇಶಿಸುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾಟ್ ಟೈಟನ್ಸ್ ತಂಡಗಳು ಹಣ ಹೂಡಲು ಮುಂದಾದವು. ಐಪಿಎಲ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವ ಯುಜುವೇಂದ್ರ ಚಹಾಲ್ ಅವರು ಮಿಡ್ಲ್ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿ ವಿಕೆಟ್ ಬೇಟೆ ನಡೆಸಬಲ್ಲರು ಹೀಗಾಗಿ ಇವರಿಗೆ ಕೊಳ್ಳಲು ಮಾಲೀಕರು ಬಾಜಿ ಕಟ್ಟಿದರು. ಈ ಬಾಜಿಯನ್ನು 18 ಕೋಟಿ ನೀಡಿ ಪಂಜಾಬ್ ತಂಡಕ್ಕೆ ಸೇರಿಸಿಕೊಂಡಿತು.
ಯುಜುವೇಂದ್ರ ಚಹಾಲ್ ಅವರ ಹೆಸರು ಕೇಳುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಆಸೆ ಹೊಂದಿದ್ದರು. ಅದರೆ ಬಿಡ್‌ನ ಆರಂಭದಲ್ಲಂತೂ ಆರ್‌ಸಿಬಿ ಇವರನ್ನು ಕೊಳ್ಳಲು ಯಾವುದೇ ಬಿಡ್ ಮಾಡಲಿಲ್ಲ. ಉತ್ತಮ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿರುವ ಪಂಜಾಬ್ ಹಾಗೂ ಲಕ್ನೋ ತಂಡಗಳು ಲೆಗ್ ಸ್ಪಿನ್ ಬೌಲರ್‌ಗೆ ಹಣವನ್ನು ಹೂಡಲು ಮುಂದಾದವು. ರಾಜಸ್ಥಾನ ರಾಯಲ್ಸ್ ತಂಡದಿಂದ ಕೈ ಬಿಡಲಾಗಿರುವ ಯುಜುವೇಂದ್ರ ಚಹಾಲ್ ಅವರ ಅನುಭವಕ್ಕೆ ಉಭಯ ತಂಡಗಳು ಮಣೆ ಹಾಕಿದವು. ಬಿಡ್ 7 ಕೋಟಿ ದಾಟುತ್ತಿದ್ದಂತೆ ಚೆನ್ನೈ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಹಿಂದೆ ಸರಿದವು.

14 ಕೋಟಿ ರೂಪಾಯಿ ಬಿಡ್ ಆಗಿದ್ದಾಗ ಆರ್‌ಸಿಬಿ ಒಂದು ಕ್ಷಣವನ್ನು ಕೇಳಿ ಬಿಡ್ ಮಾಡುವ ಸೂಚನೆಯನ್ನು ನೀಡಿತು. ಅದರಂತೆ ತನ್ನ ಮಾಜಿ ಆಟಗಾರನನ್ನು ಕೊಳ್ಳಲು ಹಣವನ್ನು ಹೂಡಲು ಮುಂದಾಯಿತು. ಈ ವೇಳೆ ಪಂಜಾಬ್ ಸವಾಲು ಕೊಟ್ಟಿತು. ಆದರೆ ಹೆಚ್ಚು ಹೊತ್ತು ಇವರು ಬಿಡ್ ಅಂಗಳದಲ್ಲಿ ಇರಲಿಲ್ಲ. ಆರ್‌ಸಿಬಿ ಬಿಡ್ ಅಖಾಡದಿಂದ ದೂರ ಸರಿಯುತ್ತಿದ್ದಂತೆ ಸನ್ ರೈಸರ್ಸ್ ಹೈದರಾಬಾದ್ ಸ್ಪಿನ್ ಬೌಲರ್ ಕೊಳ್ಳಲು ಬಾಜಿ ಕಟ್ಟಲು ಮುಂದಾಯಿತು. ಇವರನ್ನು ಕೊಳ್ಳಲೇ ಬೇಕು ಎಂಬ ಜಿದ್ದಿಗೆ ಬಿದ್ದಿದ್ದ ಸನ್ ಹಾಗೂ ಪಂಜಾಬ್ ಹಣವನ್ನು ಹೂಡಲು ಮುಂದಾದವು. ಕೊನೆಗೆ
ಚಹಾಲ್ ಸಾಧನೆ
ಯುಜ್ವೇಂದ್ರ ಚಹಾಲ್: ಟೀಮ್ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ ಚಹಾಲ್ ಆಡಿರುವ 160 ಪಂದ್ಯಗಳಲ್ಲಿ 7.84 ರ ಎಕಾನಮಿಯಲ್ಲಿ 205 ವಿಕೆಟ್ ಪಡೆದಿದ್ದಾರೆ. ಒಂದು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications