IPL 2025 Trade: ಇತಿಹಾಸದ ಬಿಗ್ ಟ್ರೇಡ್: ಸಂಜು ಚೈನ್ನೈಗೆ; ಜಡ್ಡು ರಾಯಲ್ಸ್‌ಗೆ
18ನೇ ಆವೃತ್ತಿಯ ಐಪಿಎಲ್ ಮುಗಿಯುತ್ತಿದ್ದಂತೆ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಬಿಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿಗೆ ರಿಟೆನ್ಷನ್ ಲೀಸ್ಟ್ ನೀಡುವ ಕೊನೆಯ ದಿನವಾದ ಶನಿವಾರದ ಬೆಳಗ್ಗೆ ಪುಷ್ಠಿ ಸಿಕ್ಕಿದೆ. ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಇನ್ನು ಮುಂದೆ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಕಾಣಿಸಿಕೊಂಡಿದ್ದ ಅಲ್ಲದೆ ತಂಡದ ಪರ ನಾಯಕರಾಗಿ ಕಾಣಿಸಿಕೊಂಡಿದ್ದ ರವೀಂದ್ರ ಜಡೇಜಾ ಅವರು ಇನ್ನು ಮುಂದೆ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಬರುತ್ತಿದ್ದ ವರದಿಯ ಪ್ರಕಾರ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡ್ ಮಾಡಲು ರಾಜಸ್ಥಾನ ರಾಯಲ್ಸ್ ಬೇಡಿಕೆ ಇಟ್ಟಿತ್ತು. ಅದರ ಅನುಸಾರ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಪಡೆಯಲು ರಾಜಸ್ಥಾನ ಬಯಸಿತ್ತು. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಸಂಜು ಸ್ಯಾಮ್ಸನ್ ಅವರ ಬದಲಿಗೆ ರವೀಂದ್ರ ಜಡೇಜಾ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ.

ಈ ಬಗ್ಗೆ ಹಲವು ದಿನಗಳಿಂದ ಸುದ್ದಿಗಳು ಕೇಳಿ ಬರುತ್ತಿದ್ದವು. ಆದರೆ ಶನಿವಾರ ಬೆಳಗ್ಗೆ ಈ ಸುದ್ದಿ ಧೃಡ ಪಟ್ಟಿದೆ. ಎರಡೂ ತಂಡಗಳು ಈ ಬಗ್ಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಟ್ರೇಡ್ ಆದ ಬಗ್ಗೆ ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ. ಈಗಾಗಲೇ 2008ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ, ತಮ್ಮ ಹಳೆಯ ತಂಡವನ್ನು ಸೇರಿಕೊಂಡಿದ್ದಾರೆ. ಇವರು ರಾಯಲ್ಸ್ ಸೇರಿದ್ದರಿಂದ ತಂಡದ ಬಲ ಹೆಚ್ಚಿದೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.
ಇಂದು ಕೊನೆಯ ದಿನ
ಐಪಿಎಲ್ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಐಪಿಎಲ್ ಕಾರ್ಯಕಾರಿಣಿ ಮಂಡಳಿಗೆ ನೀಡಲು ಶನಿವಾರ ಸಂಜೆ 5ಕ್ಕೆ ಡೆಡ್‌ಲೈನ್ ಆಗಿದೆ. ಹೀಗಾಗಿ ಎಲ್ಲ ಅಭಿಮಾನಿಗಳ ಕಣ್ಣು ಶನಿವಾರ ಸಂಜೆಯ ರಿಟೆನ್ಷನ್ ಲೀಸ್ಟ್ ಮೇಲೆ ನೆಟ್ಟಿವೆ. ಈಗಾಗಲೇ ಶಾರ್ದೂಲ್ ಠಾಕೂರ್ ಟ್ರೇಡ್ ಮೂಲಕ ಲಕ್ನೋ ನಿಂದ ಮುಂಬೈ ಸೇರಿಕೊಂಡಿದ್ದಾರೆ. ಇನ್ನು ಶಮಿ ಎಸ್‌ಆರ್‌ಎಚ್ ನಿಂದ ಎಲ್‌ಎಸ್‌ಜಿ ಸೇರುವ ಬಗ್ಗೆ ಮಾತುಕತೆಗಳು ಕೇಳಿ ಬರುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications