IPL 2023 : ಹರಾಜಿಗೆ ನೊಂದಾಯಿಸಲು ಕೊನೆಯ ದಿನಾಂಕ ತಿಳಿಸಿದ ಬಿಸಿಸಿಐ

2023ರ ಐಪಿಎಲ್‌ಗೆ ಮುನ್ನ ಮಿನಿ ಹರಾಜು ಡಿಸೆಂಬರ್ 23ಕ್ಕೆ ನಡೆಯಲಿದೆ. ಆಟಗಾರರು ತಮ್ಮ ಹೆಸರು ನೊಂದಾಯಿಸಲು ಬಿಸಿಸಿಐ ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. ಡಿಸೆಂಬರ್ 15 ರಂದು ಆಟಗಾರರು ಹೆಸರು ನೊಂದಾಯಿಸಲು ಅಂತಿಮ ದಿನಾಂಕವಾಗಿದೆ.
ಸ್ಯಾಮ್ ಕರನ್, ಬೆನ್ ಸ್ಟೋಕ್ಸ್ ಮತ್ತು ಕ್ಯಾಮರೂನ್ ಗ್ರೀನ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಈ ಮೂವರ ಹೊರತಾಗಿ ಇಂಗ್ಲೆಂಡ್ ಟೆಸ್ಟ್ ತಂಡದ ಮಾಜಿ ನಾಯಕ ಜೋ ರೂಟ್ ಕೂಡ ಹರಾಜಿಗೆ ನೊಂದಾಯಿಸಿಕೊಂಡಿದ್ದಾರೆ.
ಆದರೆ, ಹರಾಜು ದಿನಾಂಕವನ್ನು ಬದಲಾಯಿಸುವಂತೆ ಫ್ರಾಂಚೈಸಿಗಳು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಡಿಸೆಂಬರ್ 25ರಂದು ಕ್ರಿಸ್‌ಮಸ್ ಇರುವುದರಿಂದ, ಡಿಸೆಂಬರ್ 23 ಹಬ್ಬಕ್ಕೆ ಹತ್ತಿರವಾಗಿದ್ದು, ಹರಾಜು ದಿನಾಂಕ ಮುಂದೂಡಲು ಮನವಿ ಮಾಡಿವೆ. ಆದರೆ, ಈ ಬಗ್ಗೆ ಮುಂದಿನ ವಾರವಷ್ಟೇ ಅಂತಿಮ ತೀರ್ಮಾನ ಹೊರಬೀಳಲಿದೆ.
"ಡಿಸೆಂಬರ್ 15 ಆಟಗಾರರು ನೋಂದಣಿ ಮಾಡಿಕೊಳ್ಳಲು ಅಂತಿಮ ದಿನಾಂಕ ಎಂದು ನಿರ್ಧರಿಸಲಾಗಿದೆ. ಹಲವು ದೊಡ್ಡ ಆಟಗಾರರು ತಮ್ಮ ಹೆಸರು ನೊಂದಾಯಿಸಿಕೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್ 23ರಂದು ಹರಾಜಿಗೆ ದಿನಾಂಕ ನಿಗದಿಪಡಿಸಲಾಗಿದೆ. ದಿನಾಂಕವನ್ನು ಮುಂದೂಡಲು ಹಲವು ಫ್ರಾಂಚೈಸಿಗಳು ಮನವಿ ಮಾಡುತ್ತಿವೆ. ಎಲ್ಲಾ ಫ್ರಾಂಚೈಸಿಗಳ ಜೊತೆ ಚರ್ಚೆ ಮಾಡಿದ ನಂತರ ನಿರ್ಧಾರಕ್ಕೆ ಬರುತ್ತೇವೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ನಿರ್ಧರಿಸಿದ್ದಾರೆ.

ಹರಾಜು ದಿನ ಮುಂದೂಡಲು ಮನವಿ ಯಾಕೆ
ಡಿಸೆಂಬರ್ 23 ಕ್ರಿಸ್‌ಮಸ್ ಹತ್ತಿರವಾಗಿರುವುದರಿಂದ, ಹಲವು ಫ್ರಾಂಚೈಸಿಗಳ ಕೋಚಿಂಗ್ ಸಿಬ್ಬಂದಿಗಳು ವಿದೇಶಿಯರಾಗಿರುವುದರಿಂದ ಅವರು ಕ್ರಿಸ್‌ಮಸ್ ವೇಳೆಯಲ್ಲಿ ಬರುವುದು ಅನುಮಾನವಾಗಿದೆ. ರಜಾ ದಿನಗಳಲ್ಲಿ ಅವರು ಲಭ್ಯವಿಲ್ಲದಿರುವುದರಿಂದ ಫ್ರಾಂಚೈಸಿಗಳು ಹರಾಜು ದಿನವನ್ನು ಮುಂದೂಡಲು ಮನವಿ ಮಾಡಿದ್ದಾರೆ.
ಸದ್ಯದ ತೀರ್ಮಾನದ ಪ್ರಕಾರ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಆಯೋಜಿಸಲಾಗುತ್ತಿದೆ. ಸುಮಾರು 250 ಆಟಗಾರರು ಹರಾಜುನಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 15ರ ಸಂಜೆ 5 ಗಂಟೆಗೆ ಹರಾಜು ಪ್ರಕ್ರಿಯೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಅಂತಿಮ ದಿನವಾಗಿದೆ.
ಕಳೆದ ವರ್ಷ ನಡೆದಿದ್ದು ಮೆಗಾ ಹರಾಜು
2022ರ ಐಪಿಎಲ್‌ಗೆ ಮುನ್ನ ಮೆಗಾ ಹರಾಜು ನಡೆದಿತ್ತು, ಈ ಬಾರಿ ಕೆಲವು ಆಟಗಾರರನ್ನು ಹೊರತುಪಡಿಸಿದರೆ ದೊಡ್ಡ ಆಟಗಾರರು ಈ ಬಾರಿ ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ. ಸನ್‌ರೈಸರ್ಸ್ ಹೈದರಾಬಾದ್ ಮಾತ್ರ ಪರ್ಸ್‌ನಲ್ಲಿ 42.25 ಕೋಟಿ ರುಪಾಯಿ ಇದ್ದು, ಹಲವು ದೊಡ್ಡ ಆಟಗಾರರನ್ನು ಖರೀದಿಸುವ ಸಾಧ್ಯತೆ ಇದೆ. ಪಂಜಾಬ್ ಕಿಂಗ್ಸ್ 32.20 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಹಲವು ಆಟಗಾರರ ಮೇಲೆ ಕಣ್ಣಿಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications