Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026 Auction: 25.20 ಕೋಟಿ ರೂ.ಗಳೊಂದಿಗೆ ಕೆಕೆಆರ್‌ ಸೇರಿದ ಕ್ಯಾಮರೂನ್‌ ಗ್ರೀನ್‌

ಅಬುಧಾಬಿ: ಬಹುನಿರೀಕ್ಷಿತ ಐಪಿಎಲ್‌ 2026 ಮಿನಿ ಹರಾಜು ಆರಂಭವಾಗಿದೆ. ಈ ಹರಾಜಿನಲ್ಲಿ ಎಲ್ಲರ ಚಿತ್ತ ಕದ್ದಿದ್ದ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಕ್ಯಾಮರೂನ್‌ ಗ್ರೀನ್‌ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅಂತೆಯೇ ಇವರು ಈ ಬಾರಿಯ ಹರಾಜಿನಲ್ಲಿ ಭಾರೀ ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಇವರನ್ನು ಕೊಳ್ಳಲು ಭಾರೀ ಜಿದ್ದು ಕಂಡು ಬಂದಿತು. ಕೊನೆಗೆ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಕೆಕೆಆರ್‌ ಸಫಲವಾಗಿದೆ.

ಕ್ಯಾಮರೂನ್‌ ಗ್ರೀನ್‌ ಅವರ ಹೆಸರು ಅಂಗಳಕ್ಕೆ ಪ್ರವೇಶಿಸುತ್ತಿದ್ದಂತೆ ಮುಂಬೈ ಬಾಜಿ ಕಟ್ಟಲು ಶುರುಮಾಡಿತು. ಆದರೆ ಇವರ ಮೊತ್ತ 2.60 ಕೋಟಿ ದಾಟುತಲೇ ಹಿಂದೆ ಸರಿಯಿತು. ಆಗ ಕೆಕೆಆರ್‌ ಅಖಾಡಕ್ಕೆ ಇಳಿಯಿತು. ರಾಜಸ್ಥಾನ ಹಾಗೂ ಕೆಕೆಆರ್‌ ನಡುವೆ ಆಲ್‌ರೌಂಡರ್‌ ಕೊಳ್ಳಲು ಭಾರೀ ಜಿದ್ದು ಕಂಡು ಬಂದಿತು. ಈ ಎರಡೂ ತಂಡಗಳು 2.80 ಕೋಟಿ ರೂಪಾಯಿಯಿಂದ ಬಿಡ್‌ ಆರಂಭಿಸಿದರು. ರಾಜಸ್ಥಾನ ತನ್ನ ಬಳಿ ಇದ್ದ ಹಣವನ್ನು ನೋಡುತ್ತಾ ಇವರ ಮೇಲೆ ಬಾಜಿ ಕಟ್ಟಲು ಆರಂಭಿಸಿತು. ಆದರೆ ಕೆಕೆಆರ್‌ಗೆ ಈ ಬಗ್ಗೆ ಚಿಂತೆ ಇರಲಿಲ್ಲ.

IPL Mini Auction 2026 KKR buy Cameron Green for 25 20 Crore

ಚೆನ್ನೈ ತಂಡ 13.80 ಕೋಟಿಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಅಖಾಡಕ್ಕೆ ಪ್ರವೇಶಿಸಿತು. ಗ್ರೀನ್‌ ಪಡೆಯಲು ಕೆಕೆಆರ್‌ ಹಾಗೂ ಸಿಎಸ್‌ಕೆ ನಡುವೆ ಜಿದ್ದು ಕಂಡು ಬಂದಿತು. ಆದರೆ ಕೊನೆಯಲ್ಲಿ ಕ್ಯಾಮರೂನ್‌ ಗ್ರೀನ್‌ ಅವರಿಗೆ ಭಾರೀ ಮೊತ್ತ ನೀಡಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಮ್ಮ ತಂಡಕ್ಕೆ ಬರಮಾಡಿಕೊಂಡಿದೆ. ಇವರಿಗೆ ಕೆಕೆಆರ್‌ 25.20 ಕೋಟಿ ರೂ.ನೀಡಿದೆ.

ಆಸ್ಟ್ರೇಲಿಯಾ ತಂಡದ 26 ವರ್ಷದ ಕ್ಯಾಮರೂನ್ ಗ್ರೀನ್‌ ಅವರು ಒಬ್ಬ ಶ್ರೇಷ್ಠ ಆಲ್‌ರೌಂಡರ್‌. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಈಗಾಗಲೇ ಇವರು ಆಸ್ಟ್ರೇಲಿಯಾ ಪರ 21 ಟಿ20 ಪಂದ್ಯಗಳಲ್ಲಿ 521 ರನ್‌ ಸಿಡಿಸಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಅಲ್ಲದೆ ಇವರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವವು ಅಪಾರವಾಗಿದೆ. ಇವರು 29 ಐಪಿಎಲ್‌ ಪಂದ್ಯಗಳನ್ನು ಆಡಿದ್ದು 1 ಶತಕ, 2 ಅರ್ಧಶತಕ ಸಿಡಿಸಿದ್ದಾರೆ.

Story first published: Tuesday, December 16, 2025, 15:02 [IST]
Other articles published on Dec 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+