IPL 2026 Auction: RCB ತಂಡ ಸೇರಿದ ವೆಂಕಟೇಶ್ ಅಯ್ಯರ್
ಅಬುಧಾಬಿ: ಭಾರತ ತಂಡದ ಆಡಿದ ಅನುಭವ ಹೊಂದಿರುವ ಸ್ಟಾರ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್, ಸಹ ಈ ಬಾರಿಯ ಹರಾಜಿನಲ್ಲಿ ಎಲ್ಲ ಫ್ರಾಂಚೈಸಿ ಕದ್ದ ಪ್ಲೇಯರ್. ಇವರಿಗೆ ಆರ್‌ಸಿಬಿ 7 ಕೋಟಿ ರೂ.ಗಳನ್ನು ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ವೆಂಕಟೇಶ್ ಅಯ್ಯರ್ ಅವರ ಹೆಸರು ಬರುತ್ತಿದಂತೆ ಲಕ್ನೋ ಸೂಪರ್ ಜೈಂಟ್ಸ್ ಹರಾಜು ಆರಂಭಿಸಿತು. ಬಳಿಕ ಗುಜರಾತ್ ಜೈಂಟ್ಸ್ ತಂಡ ಅಖಾಡ ಇಳಿಯಿತು. ಈ ವೇಳೆ ಗುಜರಾತ್ 3 ಕೋಟಿಯ ವರೆಗೆ ಹರಾಜು ನಡೆಸಿ ಹೊರ ನಡೆಯಿತು. ಬಳಿಕ ಆರ್‌ಸಿಬಿ ಇವರ ಮೇಲೆ ಹಣವನ್ನು ಹೂಡಿತು. ಎಲ್‌ಎಸ್‌ಜಿ ಸಹ ಬಿಡ್‌ನಿಂದ ಹೊರ ನಡೆಯಿತು. ಬಳಿಕ ಕೆಕೆಅರ್ ಸಹ ಹಣ ಹೂಡಲು ಮುಂದಾಯಿತು. ಆರ್‌ಸಿಬಿ ಹಾಗೂ ಕೆಕೆಆರ್ ಮಧ್ಯ ಭಾರೀ ಜಿದ್ದು ಕಂಡು ಬಂದಿತು.

30 ವರ್ಷದ ವೆಂಕಟೇಶ್ ಅಯ್ಯರ್ ಭಾರತದ ಪರ 2 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ ಒಂದೇ ಒಂದು ಬಿಗ್ ಇನಿಂಗ್ಸ್ ಬಂದಿಲ್ಲ. ಆದರೆ ಇವರು ಐಪಿಎಲ್‌ನಲ್ಲಿ 62 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ 29ರ ಸರಾಸರಿಯಲ್ಲಿ 1468 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ, 12 ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications